ಪ್ರಧಾನ ಮಂತ್ರಿಯವರ ಕಛೇರಿ

ಭಾರತ - ಬಾಂಗ್ಲಾದೇಶದ 50 ವರ್ಷಗಳ ಸ್ನೇಹದ ಅಡಿಪಾಯವನ್ನು ನಾವು ಜಂಟಿಯಾಗಿ ನೆನಪಿಸಿಕೊಳ್ಳುತ್ತೇವೆ ಹಾಗೂ ಆಚರಿಸುತ್ತೇವೆ: ಪ್ರಧಾನಮಂತ್ರಿ

Posted On: 06 DEC 2021 11:19AM by PIB Bengaluru

ಭಾರತ - ಬಾಂಗ್ಲಾದೇಶ ನಡುವಿನ 50 ವರ್ಷಗಳ ಸ್ನೇಹದ ಅಡಿಪಾಯವನ್ನು ನಾವು ಜಂಟಿಯಾಗಿ ನೆನಪಿಸಿಕೊಳ್ಳುತ್ತೇವೆ ಹಾಗೂ ಆಚರಿಸುತ್ತೇವೆ ಎಂದು ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಹೇಳಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು,ಇಂದು ಭಾರತ - ಬಾಂಗ್ಲಾದೇಶ ಮೈತ್ರಿ ದಿನವನ್ನಾಗಿ ಆಚರಿಸುತ್ತಿದ್ದೇವೆ. ನಾವು ಸ್ನೇಹದ ತಳಪಾಯವನ್ನು ಜಂಟಿಯಾಗಿ ಸ್ಮರಿಸಿಕೊಳ್ಳುತ್ತೇವೆ ಮತ್ತು ಆಚರಿಸುತ್ತೇವೆ. ನಮ್ಮ ಬಾಂಧವ್ಯವನ್ನು ಮತ್ತಷ್ಟು ಆಳ ಹಾಗೂ ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಗೌರವಾನ್ವಿತ ಪ್ರಧಾನಿ ಶೇಖ‍್ ಹಸೀನಾ ಅವರೊಂದಿಗೆ ಕಾರ್ಯನಿರ್ವಹಿಸಲು ತಾವು ಎದುರುನೋಡುತ್ತಿರುವುದಾಗಿ ಹೇಳಿದ್ದಾರೆ”.

***



(Release ID: 1778411) Visitor Counter : 173