ಪ್ರಧಾನ ಮಂತ್ರಿಯವರ ಕಛೇರಿ

ಸಂಸತ್ತಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗಿ


ಬಾಬಾಸಾಹೇಬ್ ಅಂಬೇಡ್ಕರ್, ಡಾ. ರಾಜೇಂದ್ರ ಪ್ರಸಾದ್ ಅವರಿಗೆ ನಮನ ಸಲ್ಲಿಕೆ

ಬಾಪು ಸೇರಿದಂತೆ ಸ್ವಾತಂತ್ರ್ಯ ಚಳವಳಿಯಲ್ಲಿ ಬಲಿದಾನಗೈಯ್ದ ಇತರೆ ಎಲ್ಲರಿಗೂ ಗೌರವ ನಮನ ಸಲ್ಲಿಸಿದ ಪ್ರಧಾನಿ

26/11ರಲ್ಲಿ ಹುತಾತ್ಮರಾದರಿಗೆ ಶ್ರದ್ಧಾಂಜಲಿ ಸಲ್ಲಿಕೆ

“ನಮ್ಮ ಹಾದಿ ಸರಿಯಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ನಿರಂತರವಾಗಿ ಮೌಲ್ಯಮಾಪನ ಮಾಡಲು ನಾವು ಸಂವಿಧಾನ ದಿನವನ್ನು ಆಚರಿಸಬೇಕು”

“ಕುಟುಂಬ ಆಧಾರಿತ ಪಕ್ಷಗಳ ರೂಪದಲ್ಲಿ ಭಾರತ ಒಂದು ಬಗೆಯ ಬಿಕ್ಕಟ್ಟಿನತ್ತ ಸಾಗುತ್ತಿದ್ದು, ಇದು ಸಂವಿಧಾನಕ್ಕೆ ಬದ್ಧವಾದ ಜನರಿಗೆ ಕಾಳಜಿಯ ವಿಚಾರವಾಗಿದೆ”

“ತಮ್ಮ ಪ್ರಜಾಸತ್ತಾತ್ಮಕ ಗುಣಗಳನ್ನು ಕಳೆದುಕೊಂಡಿರುವ ಪಕ್ಷಗಳಿಂದ ಹೇಗೆ ಪ್ರಜಾಪ್ರಭುತ್ವದ ರಕ್ಷಣೆ ಸಾಧ್ಯ?”

“ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಕರ್ತವ್ಯಗಳಿಗೆ ಒತ್ತು ನೀಡಿದರೆ ಚೆನ್ನಾಗಿತ್ತು, ಆಜಾದಿ ಕಾ ಅಮೃತ ಮಹೋತ್ಸವದ ಈ ಸಮಯದಲ್ಲಿ ನಮ್ಮ ಹಕ್ಕುಗಳನ್ನು ರಕ್ಷಿಸಲು ನಾವು ಕರ್ತವ್ಯದ ಹಾದಿಯಲ್ಲಿ ಮುನ್ನಡೆಯುವುದು ಅತ್ಯವಶ್ಯಕ”

Posted On: 26 NOV 2021 12:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸತ್ತಿನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಘನತೆವೆತ್ತ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ಲೋಕಸಭಾ ಸ್ಪೀಕರ್ ಮಾತನಾಡಿದರುತಮ್ಮ ಭಾಷಣದ ನಂತರ ಘನತೆವೆತ್ತ ರಾಷ್ಟ್ರಪತಿಗಳು, ಸಂವಿಧಾನದ ಪೀಠಿಕೆಯನ್ನು ಓದುವ ನೇರ ಕಾರ್ಯಕ್ರಮದಲ್ಲಿ ರಾಷ್ಟ್ರದ ಜೊತೆಗೂಡಿದರು. ಗೌರವಾನ್ವಿತ ರಾಷ್ಟ್ರಪತಿಗಳು  ಸಂವಿಧಾನ ಸಭೆಯ ಚರ್ಚೆಗಳ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಭಾರತ ಸಂವಿಧಾನದ ಕ್ಯಾಲಿಗ್ರಾಫ್ ಮಾಡಿದ ಡಿಜಿಟಲ್ ಆವೃತ್ತಿ ಮತ್ತು ಈವರೆಗಿನ ಎಲ್ಲ ತಿದ್ದುಪಡಿಗಳನ್ನು ಒಳಗೊಂಡಿರುವ ಭಾರತದ ಸಂವಿಧಾನದ ಪರಿಷ್ಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಅಲ್ಲದೆ, ಅವರುಸಾಂವಿಧಾನಿಕ ಪ್ರಜಾಪ್ರಭುತ್ವ ಕುರಿತಾದ ಆನ್ ಲೈನ್ ಕ್ವಿಜ್ಗೂ ಚಾಲನೆ ನೀಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇಂದು ದೂರದೃಷ್ಟಿಯ ಮಹಾನ್ ವ್ಯಕ್ತಿಗಳಾದ ಬಾಬಾಸಾಹೇಬ್ ಅಂಬೇಡ್ಕರ್, ಡಾ.ರಾಜೇಂದ್ರ ಪ್ರಸಾದ್, ಬಾಪು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದ ಎಲ್ಲರಿಗೂ ಗೌರವ ಸಲ್ಲಿಸುವ ದಿನವಾಗಿದೆ ಎಂದರು. ಇಂದು ಸದನಕ್ಕೆ ಗೌರವ ಸಲ್ಲಿಸುವ ದಿನವಾಗಿದೆ. ಇಂತಹ ದಿಗ್ಗಜರ ನೇತೃತ್ವದಲ್ಲಿ, ಸಾಕಷ್ಟು ಚಿಂಥನ ಮಂಥನ ಮತ್ತು ಸಮಾಲೋಚನೆ ನಂತರ, ನಮ್ಮ ಸಂವಿಧಾನದ ಅಮೃತ ಹೊರಹೊಮ್ಮಿತು ಎಂದು ಅವರು ಹೇಳಿದರು. ಇಂದು ಪ್ರಜಾಪ್ರಭುತ್ವದ ಸದನಕ್ಕೆ ನಮಿಸುವ ದಿನವೂ ಆಗಿದೆ ಎಂದರು. ಪ್ರಧಾನಮಂತ್ರಿ ಅವರು 26/11 ಘಟನೆಯಲ್ಲಿ ಹುತಾತ್ಮರಾದವರಿಗೂ ಶ್ರದ್ಧಾಂಜಲಿ ಸಲ್ಲಿಸಿದರು. ಇಂದು 26/11, ದೇಶದ ಶತ್ರುಗಳು ದೇಶದೊಳಕ್ಕೆ ನುಗ್ಗಿದರು ಮತ್ತು ಮುಂಬೈನಲ್ಲಿ ಉಗ್ರರ ದಾಳಿ ನಡೆಸಿದ ಇದು ದುಃಖದ ದಿನವಾಗಿದೆ. ಭಯೋತ್ಪಾದಕರ ವಿರುದ್ಧ ಹೋರಾಡುವಾಗ ನಮ್ಮ ವೀರಯೋಧರು ಪ್ರಾಣತ್ಯಾಗ ಮಾಡಿದರು. ಇಂದು ನಾನು ಅವರ ತ್ಯಾಗಕ್ಕೆ ತಲೆಬಾಗುತ್ತೇನೆ ಎಂದು ಪ್ರಧಾನಮಂತ್ರಿ ಹೇಳಿದರು.

ನಮ್ಮ ಸಂವಿಧಾನವು ಕೇವಲ ಹಲವು ವಿಧಿಗಳ ಸಂಗ್ರಹವಲ್ಲ, ನಮ್ಮ ಸಂವಿಧಾನದ ಸಹಸ್ರಾರು ವರ್ಷಗಳ ಶ್ರೇಷ್ಠ ಸಂಪ್ರದಾಯವಾಗಿದೆ. ಅದು ಅಖಂಡ ಧಾರೆಯ ಅಧುನಿಕ ಅಭಿವ್ಯಕ್ತಿ. ನಾವು ಸಂವಿಧಾನ ದಿನವನ್ನು ಆಚರಿಸಬೇಕು ಏಕೆಂದರೆ, ನಮ್ಮ ಹಾದಿ ಸರಿಯಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ನಿರಂತರವಾಗಿ ಮೌಲ್ಯಮಾಪನ ಮಾಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು

ಸಂವಿಧಾನ ದಿನಆಚರಣೆಯ ಹಿಂದಿನ ಪ್ರೇರಣೆಯವನ್ನು ವಿವರಿಸಿದ ಪ್ರಧಾನಮಂತ್ರಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜಯಂತಿ ವೇಳೆಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲು ಇದಕ್ಕಿಂತ ಪವಿತ್ರ ಸುಸಂದರ್ಭ ಯಾವುದಿದೆ ಎಂದು ನಾವೆಲ್ಲಾ  ಭಾವಿಸಿದ್ದೇವೆ. ನಾವು ಅವರ ಕೊಡುಗೆಯನ್ನು ಸ್ಮಾರಕ ಗ್ರಂಥ(ಸ್ಮೃತಿ ಗ್ರಂಥ) ಮೂಲಕ ಸದಾ ಸ್ಮರಿಸಬೇಕುಎಂದು ಅವರು ಹೇಳಿದರು. ಜನವರಿ 26ರಂದು ಗಣರಾಜ್ಯೋತ್ಸವ ಸಂಪ್ರದಾಯವನ್ನು ಸ್ಥಾಪಿಸಿರುವುದರ ಜೊತೆಗೆ ಸಮಯದಲ್ಲಿಯೇ ನವೆಂಬರ್ 26ರಂದುಸಂವಿಧಾನ ದಿನಆಚರಣೆ ಆರಂಭಿಸಿದ್ದರೆ ಒಳ್ಳೆಯದಿತ್ತು ಎಂದರು.

ಕುಟುಂಬ ಆಧಾರಿತ ಪಕ್ಷಗಳ ರೂಪದಲ್ಲಿ ಭಾರತವು ಒಂದು ಬಗೆಯ ಬಿಕ್ಕಟ್ಟಿನತ್ತ ಸಾಗುತ್ತಿದ್ದು, ಇದು ಸಂವಿಧಾನಕ್ಕೆ ಬದ್ಧವಾದ ಜನರಿಗೆ ಕಾಳಜಿಯ ವಿಚಾರವಾಗಿದೆ ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರಿಗೆ ಕಾಳಜಿಯ ವಿಷಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.  “ಒಂದು ಕುಟುಂಬದ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಅರ್ಹತೆಯ ಆಧಾರದ ಮೇಲೆ ಪಕ್ಷವನ್ನು ಸೇರುವುದರಿಂದ ಅದು ಪಕ್ಷವು ವಂಶ ಪಾರಂಪರ್ಯವಾಗುವುದಿಲ್ಲ. ಒಂದೇ ಕುಟುಂಬದವರು ಪೀಳಿಗೆಯಿಂದ ಪೀಳಿಗೆಗೆ ಪಕ್ಷವನ್ನು ಮುನ್ನಡೆಸಿದಾಗ ಸಮಸ್ಯೆಗಳು ಉದ್ಬವಿಸುತ್ತವೆಎಂದರು. ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ತಮ್ಮ ಗುಣಗಳನ್ನೇ ಕಳೆದುಕೊಂಡಾಗ ಸಂವಿಧಾನದ ಆಶಯಕ್ಕೂ ಧಕ್ಕೆಯಾಗುತ್ತದೆ, ಸಂವಿಧಾನದ ಪ್ರತಿಯೊಂದು ಭಾಗಕ್ಕೂ ಘಾಸಿಯಾಗುತ್ತದೆ ಎಂದು ಪ್ರಧಾನಮಂತ್ರಿ ಟೀಕಿಸಿದರು. “ತಮ್ಮ ಪ್ರಜಾಪ್ರಭುತ್ವ ಗುಣಗಳನ್ನು ಕಳೆದುಕೊಂಡಿರುವ ಪಕ್ಷಗಳಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಶಿಕ್ಷೆಗೆ ಒಳಗಾಗಿರುವ ಭ್ರಷ್ಟ ವ್ಯಕ್ತಿಗಳನ್ನು ಮರೆತು ವೈಭವೀಕರಿಸುವ ಪ್ರವೃತ್ತಿಯ ವಿರುದ್ಧ ಪ್ರಧಾನಮಂತ್ರಿ ಎಚ್ಚರಿಕೆ ನೀಡಿದರು. ಅಂತಹ ವ್ಯಕ್ತಿಗಳಿಗೆ ಸುಧಾರಣೆಗೆ ಅವಕಾಶ ನೀಡುವಾಗ ಅವರನ್ನು ಸಾರ್ವಜನಿಕ ಜೀವನದಲ್ಲಿ ವೈಭವೀಕರಿಸುವುದಕ್ಕೆ ನಿರ್ಬಂಧ ವಿಧಿಸಬೇಕು ಎಂದರು.

ಸ್ವಾತಂತ್ರ್ಯ ಚಳವಳಿಯಲ್ಲಿ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾಗಲೂ ಸಹ ಮಹಾತ್ಮ ಗಾಂಧೀಜಿ ಅವರು ದೇಶವನ್ನು ಕರ್ತವ್ಯಗಳಿಗೆ ಸಜ್ಜುಗೊಳಿಸಲು ಪ್ರಯತ್ನಿಸಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು. “ದೇಶಕ್ಕೆ ಸ್ವಾತಂತ್ರ್ಯ ನಂತರ ಕರ್ತವ್ಯಗಳಿಗೆ ಒತ್ತು ನೀಡಿದರೆ ಒಳ್ಳೆಯದಿತ್ತುಎಂದರು. ಆಜಾದಿ ಕಾ ಅಮೃತ ಮಹೋತ್ಸವದ ಸಮಯದಲ್ಲಿ ನಾವು ಹಕ್ಕುಗಳನ್ನು ರಕ್ಷಿಸಲು ನಮ್ಮ ಕರ್ತವ್ಯಗಳ ಪಾಲನೆ ಹಾದಿಯಲ್ಲಿ ಮುನ್ನಡೆಯುವುದು ಅತ್ಯವಶ್ಯಕಎಂದು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

***



(Release ID: 1775297) Visitor Counter : 282