ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಉತ್ತರಪ್ರದೇಶ ಭೇಟಿ: ನವೆಂಬರ್ 19ರಂದು ಝಾನ್ಸಿಯಲ್ಲಿ ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಭಾರತಕ್ಕೆ ಮಹತ್ವದ ಉತ್ತೇಜನ ನೀಡುವ ‘ರಾಷ್ಟ್ರ ರಕ್ಷಾ ಪರ್ವ’ದಲ್ಲಿ ಭಾಗಿ


ಪ್ರಧಾನಮಂತ್ರಿ ಅವರಿಂದ ಸಶಸ್ತ್ರ ಪಡೆಗಳ ಸೇವಾ ಮುಖ್ಯಸ್ಥರಿಗೆ ನೌಕಾ ಹಡಗುಗಳಿಗಾಗಿ ದೇಶೀಯವಾಗಿ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದ ಲಘು ಯುದ್ದ ಹೆಲಿಕಾಪ್ಟರ್, ಡ್ರೋನ್ ಮತ್ತು ಸುಧಾರಿತ ವಿದ್ಯುನ್ಮಾನ ಯುದ್ದ ರಕ್ಷಾ ಕವಚ ಔಪಚಾರಿಕ ಹಸ್ತಾಂತರ

ಉತ್ತರಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್ ನ ಝಾನ್ಸಿ ವಿಭಾಗದಲ್ಲಿ ಆಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣಿಗಳಿಗೆ ಪ್ರೊಪಲ್ಷನ್ ವ್ಯವಸ್ಥೆ ಉತ್ಪಾದಿಸುವ ಸುಮಾರು 400 ಕೋಟಿ ರೂ.ಗಳ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಹಿಂದೆ ಎನ್ ಸಿ ಸಿ ಕೆಡೆಟ್ ಆಗಿದ್ದ ಪ್ರಧಾನಮಂತ್ರಿ ಅವರು ಮೊದಲ ಸದಸ್ಯರಾಗುವ ಮೂಲಕ ಎನ್ ಸಿ ಸಿ ಅಲ್ಯುಮಿನಿ ಅಸೋಸಿಯೇಷನ್ ಗೆ ಚಾಲನೆ

ರಾಷ್ಟ್ರೀಯ ಯುದ್ದ ಸ್ಮಾರಕದಲ್ಲಿ ಹುತಾತ್ಮರಿಗೆ ವರ್ಚುವಲ್ ಗೌರವ ನಮನ ಸಲ್ಲಿಸುವ ಸೌಕರ್ಯವನ್ನು ರಾಷ್ಟ್ರಕ್ಕೆ ಲೋಕಾರ್ಪಣೆ ಮಾಡಲಿರುವ ಪ್ರಧಾನಿ

Posted On: 17 NOV 2021 2:00PM by PIB Bengaluru

‘ಆಜಾದಿ ಕಾ ಅಮೃತ ಮಹೋತ್ಸವ’ ಆಚರಣೆ ಭಾಗವಾಗಿ ನವೆಂಬರ್ 17ರಿಂದ 19ರವರೆಗೆ ಝಾನ್ಸಿಯಲ್ಲಿ ನಡೆಯಲಿರುವ ‘ರಾಷ್ಟ್ರ ರಕ್ಷಾ ಸಮರ್ಪಣ್ ಪರ್ವ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 2021ರ ನವೆಂಬರ್ 19ರಂದು ಸಂಜೆ 5.15ಕ್ಕೆ ಉತ್ತರಪ್ರದೇಶದ ಝಾನ್ಸಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ರಕ್ಷಣಾ ವಲಯದ ಹಲವು ಉಪಕ್ರಮಗಳಿಗೆ ಚಾಲನೆ ನೀಡುವರು ಮತ್ತು ರಾಷ್ಟ್ರಕ್ಕೆ ಸಮರ್ಪಣೆ ಮಾಡುವರು.

ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡುವ ಸಲುವಾಗಿ, ಪ್ರಧಾನಮಂತ್ರಿ ಅವರು ಸಶಸ್ತ್ರ ಪಡೆಗಳ ಸೇವಾ ಮುಖ್ಯಸ್ಥರಿಗೆ ದೇಶೀಯವಾಗಿ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲಾದ ಉಪಕರಣಗಳನ್ನು ಔಪಚಾರಿಕವಾಗಿ ಹಸ್ತಾಂತರ ಮಾಡಲಿದ್ದಾರೆ. ಇವುಗಳಲ್ಲಿ ವಾಯುಪಡೆ ಮುಖ್ಯಸ್ಥರಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿರುವ ಲಘು ಯುದ್ದ ಹೆಲಿಕಾಪ್ಟರ್ (ಎಲ್ ಸಿಎಚ್), ಭಾರತೀಯ ನವೋದ್ಯಮಗಳು ಅಭಿವೃದ್ಧಿಪಡಿಸಿರುವ ಡ್ರೋಣ್ ಮತ್ತು ಯುಎವಿಗಳನ್ನು ಸೇನಾಪಡೆಯ ಮುಖ್ಯಸ್ಥರಿಗೆ ಮತ್ತು ನೌಕಾ ಹಡುಗುಗಳಿಗಾಗಿ ಡಿಆರ್ ಡಿಒ ವಿನ್ಯಾಸಗೊಳಿಸಿ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಉತ್ಪಾದಿಸಿರುವ ಸುಧಾರಿತ ವಿದ್ಯುನ್ಮಾನ ಯುದ್ದ ರಕ್ಷಾ ಕವಚವನ್ನು ನೌಕಾಪಡೆಯ ಮುಖ್ಯಸ್ಥರಿಗೆ ಹಸ್ತಾಂತರಿಸುವುದು ಸೇರಿದೆ.  ಯುದ್ದದ ವೇಳೆ ಪರಿಣಾಮಕಾರಿ ಪಾತ್ರಗಳನ್ನು ವಹಿಸಲಿರುವ ಎಲ್ ಸಿಎಚ್ ಸುಧಾರಿತ ತಂತ್ರಜ್ಞಾನ ಮತ್ತು ರಹಸ್ಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಭಾರತೀಯ ಸಶಸ್ತ್ರ ಪಡೆಗಳಿಗೆ ದೇಶಿಯ ಯುಎವಿಗಳ ನಿಯೋಜನೆ ಭಾರತದಲ್ಲಿ ಡ್ರೋಣ್ ಉದ್ಯಮದ ಪೂರಕ ವ್ಯವಸ್ಥೆ ಬೆಳೆಯುತ್ತಿರುವ ಪ್ರಬುದ್ಧತೆಗೆ ಸಾಕ್ಷಿಯಾಗಿದೆ. ವಿಧ್ವಸಂಕ, ಯುದ್ದ ನೌಕೆಗಳು ಸೇರಿದಂತೆ ನಾನಾ ಬಗೆಯ ನೌಕಾ ಹಡಗುಗಳಲ್ಲಿ ಸುಧಾರಿತ ಇಡಬ್ಲೂ ಕವಚಗಳನ್ನು ಬಳಕೆ ಮಾಡಲಾಗುವುದು.  

ಅಲ್ಲದೆ, ಪ್ರಧಾನಮಂತ್ರಿ ಅವರು ಉತ್ತರಪ್ರದೇಶದ ಕೈಗಾರಿಕಾ ಕಾರಿಡಾರ್ ನ ಝಾನ್ಸಿ ವಿಭಾಗದಲ್ಲಿ 400 ಕೋಟಿ ರೂ. ಮೊತ್ತದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯನ್ನು ಆಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣಿಗಳಿಗೆ ಪ್ರೊಪಲ್ಷನ್ ವ್ಯವಸ್ಥೆ ಉತ್ಪಾದಿಸುವ ಘಟಕವನ್ನು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಕಾರ್ಯಗತಗೊಳಿಸಲಿದೆ.

ಎನ್ ಸಿ ಸಿ ಯೊಂದಿಗೆ ಎನ್ ಸಿ ಸಿ ಮಾಜಿ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಅಧಿಕೃತ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಅವರು ಎನ್ ಸಿ ಸಿ ಅಲ್ಯೂಮಿನಿ ಅಸೋಸಿಯೇಷನ್ ಗೆ ಚಾಲನೆ ನೀಡುವರು. ಈ ಸಂಸ್ಥೆ ಎನ್ ಸಿ ಸಿ ಯ ಗುರಿಯನ್ನು ಮತ್ತಷ್ಟು ಮುನ್ನಡೆಸುವುದಲ್ಲದೆ, ರಾಷ್ಟ್ರ ನಿರ್ಮಾಣಕ್ಕೂ ಸಹಕಾರ ನೀಡಲಿದೆ. ಮಾಜಿ ಎನ್ ಸಿ ಸಿ ಕೆಡೆಟ್ ಆಗಿರುವ ಪ್ರಧಾನಮಂತ್ರಿ ಅವರು, ಅಸೋಸಿಯೇಷನ್ ನ ಮೊದಲ ಸದಸ್ಯರಾಗಿ ನೋಂದಣಿಯಾಗುವ ಕಾರ್ಯಕ್ರಮವೂ ಸಾಕ್ಷಿಯಾಗಲಿದೆ.

ಎನ್ ಸಿ ಸಿ ಯ ಎಲ್ಲ ಮೂರು ವಿಭಾಗಗಳಿಗೆ ಸಿಮ್ಯುಲೇಷನ್ ತರಬೇತಿ ಸೌಲಭ್ಯಗಳನ್ನು ಹೆಚ್ಚಿಸುವ ಗುರಿ ಹೊಂದಿರುವ ಎನ್ ಸಿ ಸಿ ಸಿಮ್ಯುಲೇಷನ್ ರಾಷ್ಟ್ರೀಯ ತರಬೇತಿ ಕಾರ್ಯಕ್ರಮಕ್ಕೂ ಪ್ರಧಾನಮಂತ್ರಿ ಚಾಲನೆ ನೀಡಲಿದ್ದಾರೆ. ಇದರಲ್ಲಿ ಎನ್ ಸಿ ಸಿ ಯ ಸೇನಾ ವಿಭಾಗಕ್ಕಾಗಿ ರೈಫಲ್ ಫೈರಿಂಗ್ ಸಿಮ್ಯುಲೇಟರ್ ಗಳು, ವಾಯು ವಿಭಾಗಕ್ಕೆ ಮೈಕ್ರೋಲೈಟ್ ಫ್ಲೈಯಿಂಗ್ ಸಿಮ್ಯುಲೇಟರ್ ಮತ್ತು ನೌಕಾ ವಿಭಾಗಕ್ಕೆ ರೋಯಿಂಗ್ ಸಿಮ್ಯುಲೇಟರ್ ಗಳನ್ನು ಸ್ಥಾಪಿಸುವುದೂ ಸಹ ಸೇರಿದೆ.

ರಾಷ್ಟ್ರೀಯ ಯುದ್ದ ಸ್ಮಾರಕದಲ್ಲಿ ರಿಯಾಲಿಟಿ ಚಾಲಿತ ಎಲೆಕ್ಟ್ರಾನಿಕ್ ಕಿಯೋಸ್ಕ್ ಗಳನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ, ಇದರಿಂದ ಗುಂಡಿಯ ಮೇಲೆ ಸರಳ ಕ್ಲಿಕ್ ನ ಮೂಲಕ ಹುತಾತ್ಮರಿಗೆ ಪುಪ್ಪ ನಮನ ಸಲ್ಲಿಸಲು ಸಂದರ್ಶಕರಿಗೆ ಅವಕಾಶ ಮಾಡಿಕೊಡುತ್ತದೆ.  

***


(Release ID: 1772611) Visitor Counter : 217