ಪ್ರಧಾನ ಮಂತ್ರಿಯವರ ಕಛೇರಿ

ಶಿವಶಾಹೀರ್ ಬಾಬಾಸಾಹೀಬ್ ಪುರಂದರೆ ನಿಧನಕ್ಕೆ ಪ್ರಧಾನಮಂತ್ರಿ ಶೋಕ

Posted On: 15 NOV 2021 10:17AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬರಹಗಾರ, ಇತಿಹಾಸ ತಜ್ಞ ಮತ್ತು ರಂಗಕರ್ಮಿ ಶಿವಶಾಹೀರ್ ಬಾಬಾಸಾಹೀಬ್ ಪುರಂದರೆ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮುಂಬರುವ ಪೀಳಿಗೆಯನ್ನು ಛತ್ರಪತಿ ಶಿವಾಜಿ ಮಹಾರಾಜ್ ಅವರೊಂದಿಗೆ ಸಂಪರ್ಕಿಸುವಲ್ಲಿ ಶಿವಶಾಹೀರ್ ಬಾಬಾ ಸಾಹೀಬ್ ಪುರಂದರೆ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ. ಅಲ್ಲದೆ ಶ್ರೀ ಮೋದಿ ಅವರು ಕೆಲವು ತಿಂಗಳ ಹಿಂದೆ ಪುರಂದರೆ ಅವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ತಾವು ಮಾಡಿದ ಭಾಷಣವನ್ನು ಪೋಸ್ಟ್ ಮಾಡಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸರಣಿ ಟ್ವೀಟ್ ಗಳಲ್ಲಿ “ನನಗೆ ನೋವು ಎಷ್ಟಾಗಿದೆ ಎಂದರೆ ಪದಗಳೇ ಹೊರಡುತ್ತಿಲ್ಲ, ಶಿವಶಾಹೀರ್ ಬಾಬಾಸಾಹೀಬ್ ಪುರಂದರೆ ಅವರ ನಿಧನದಿಂದ ಇತಿಹಾಸ ಮತ್ತು ಸಾಂಸ್ಕೃತಿಕ ಜಗತ್ತಿನಲ್ಲಿ ಬಹುದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಮುಂಬರುವ ಪೀಳಿಗೆ ಛತ್ರಪತಿ ಶಿವಾಜಿ ಮಹಾರಾಜ್ ಅವರೊಂದಿಗೆ ಮತ್ತಷ್ಟು ಸಂಪರ್ಕ ಹೊಂದುವಂತೆ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳು. ಅವರ ಇತರ ಕೃತಿಗಳು ಸಹ ಸದಾ ಸ್ಮರಣೀಯ.

ಶಿವಶಾಹೀರ್ ಬಾಬಾಸಾಹೀಬ್ ಪುರಂದರೆ ಅವರು, ವಿಚಾರವಂತರು, ಬುದ್ಧಿವಂತರು ಮತ್ತು ಭಾರತದ ಇತಿಹಾಸದ ಬಗ್ಗೆ ಉತ್ಕೃಷ್ಟ ಜ್ಞಾನ ಹೊಂದಿದ್ದರು. ಕಳೆದ ಕೆಲವು ವರ್ಷಗಳಿಂದ ಅವರೊಂದಿಗೆ ನಿಕಟವಾಗಿ ಸಂವಾದ ನಡೆಸುವ ಗೌರವ ನನಗೆ ದೊರೆತಿತ್ತು. ಕೆಲವು ತಿಂಗಳ ಹಿಂದೆ ಅವರ ಶತಮಾನೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದೆನು.

ಶಿವಶಾಹೀರ್ ಬಾಬಾಸಾಹೀಬ್ ಪುರಂದರೆ ಅವರು ತಮ್ಮ ವ್ಯಾಪಕ ಕಾರ್ಯಗಳಿಂದಾಗಿ ಜೀವಂತವಾಗಿ ಉಳಿಯುತ್ತಾರೆ. ಈ ಶೋಕದ ಸಂದರ್ಭದಲ್ಲಿ ಅವರ ಕುಟುಂಬ ಮತ್ತು ಅವರ ಅಸಂಖ್ಯಾತ ಅನುಯಾಯಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ’’.

***



(Release ID: 1772093) Visitor Counter : 174