ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗ್ಲಾಸ್ಗೋದಲ್ಲಿ ಸಿಒಪಿ26 ಶೃಂಗಸಭೆಯ ವೇಳೆ “ದ್ವೀಪ ರಾಷ್ಟ್ರಗಳ ಸ್ಥಿತಿಸ್ಥಾಪಕತ್ವ ಮೂಲಸೌಕರ್ಯ” ಉಪಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

Posted On: 02 NOV 2021 8:11PM by PIB Bengaluru

ಗೌರವಾನ್ವಿತರೇ,

 • ದ್ವೀಪ ರಾಷ್ಟ್ರಗಳಿಗೆ ಸ್ಥಿತಿಸ್ಥಾಪಕತ್ವ ಮೂಲಸೌಕರ್ಯ’-ಐಆರ್ ಐಎಸ್ ಆರಂಭ ಹೊಸ ಭರವಸೆ ಮತ್ತು ಹೊಸ ವಿಶ್ವಾಸವನ್ನು ಮೂಡಿಸುತ್ತದೆ. ಅದು ಅತ್ಯಂತ ದುರ್ಬಲ ರಾಷ್ಟ್ರಗಳಿಗೆ ಏನಾದರೂ ಮಾಡಿದರೂ ತೃಪ್ತಿ ನೀಡುತ್ತದೆ.
 • ಅದಕ್ಕಾಗಿ ನಾನು ವಿಪತ್ತು ನಿರ್ವಹಣಾ ಮೂಲಸೌಕರ್ಯ ಸ್ಥಿತಿಸ್ಥಾಪಕತ್ವ (ಸಿಡಿಆರ್ ) ಮೈತ್ರಿಯನ್ನು ಅಭಿನಂದಿಸುತ್ತೇನೆ.
 • ಪ್ರಮುಖ ವೇದಿಕೆಯಲ್ಲಿ ನಾನು ಆಸ್ಟ್ರೇಲಿಯಾ ಮತ್ತು ಯುಕೆ ಸೇರಿದಂತೆ ಎಲ್ಲ ಮೈತ್ರಿ ರಾಷ್ಟ್ರಗಳ ನಾಯಕರಿಗೆ ಮತ್ತು ಮಾರಿಷಸ್ ಮತ್ತು ಜಮೈಕಾ ಸೇರಿದಂತೆ ಸಣ್ಣ ದ್ವೀಪ ರಾಷ್ಟ್ರಗಳ ಗುಂಪಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ.
 • ಉದ್ಘಾಟನಾ ಸಮಾರಂಭಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ನೀಡಿದ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅವರಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ.

ಗೌರವಾನ್ವಿತರೇ,

 • ಹವಾಮಾನ ಬದಲಾವಣೆಯ ಕ್ರೋಧದಿಂದ ಯಾರೊಬ್ಬರೂ ತಪ್ಪಿಸಿಕೊಳ್ಳಲಾಗುತ್ತಿಲ್ಲ ಎಂಬುದು ಕಳೆದೊಂದು ದಶಕದಿಂದ ಸಾಬೀತಾಗಿದೆ. ಅದು ಅಭಿವೃದ್ಧಿ ಶೀಲ ರಾಷ್ಟ್ರಗಳಾಗಿರಬಹುದು ಅಥವಾ ನೈಸರ್ಗಿಕ ಸಂಪನ್ಮೂಲಗಳಲ್ಲಿ ಶ್ರೀಮಂತರ ರಾಷ್ಟ್ರವಾಗಿರಬಹುದು, ಎಲ್ಲ ರಾಷ್ಟ್ರಗಳಿಗೂ ಇದು ಅತಿದೊಡ್ಡ ಅಪಾಯವಾಗಿದೆ.
 • ಆದರೆ ಇಲ್ಲಿಯೂ ಸಹ, “ಸಣ್ಣ ದ್ವೀಪ ಅಭಿವೃದ್ಧಿ ಶೀಲ ರಾಷ್ಟ್ರಗಳು-ಎಸ್ ಐಡಿಎಸ್’’ ಹವಾಮಾನ ಬದಲಾವಣೆಯ ದೊಡ್ಡ ಅಪಾಯವನ್ನು ಎದುರಿಸುತ್ತಿವೆ. ಅದು ಅವುಗಳಿಗೆ ಸಾವು, ಬದುಕಿನ ನಡುವಿನ ಹೋರಾಟದ ವಿಷಯವಾಗಿದೆ, ಅದು ಅವುಗಳ ಉಳಿವಿಗೆ ಸವಾಲಾಗಿದೆ. ಹವಾಮಾನ ವೈಪರೀತ್ಯದಿಂದ ಆಗುವ ವಿಪತ್ತುಗಳನ್ನು ಅಕ್ಷರಶಃ ಅವುಗಳನ್ನು ದುರಂತದ ರೂಪವನ್ನು ಪಡೆಯಬಹುದು
 • ಅಂತಹ ದೇಶಗಳಲ್ಲಿ ಹವಾಮಾನ ವೈಪರೀತ್ಯ ಅವುಗಳ ಜೀವನ ಭದ್ರತೆಗೆ ಮಾತ್ರವಲ್ಲ, ಅವುಗಳ ಆರ್ಥಿಕತೆಗೂ ಪ್ರಮುಖ ಸವಾಲಾಗಿದೆ.
 • ಅಂತಹ ದೇಶಗಳು ಪ್ರವಾಸೋದ್ಯಮದ ಮೇಲೆ ಹೆಚ್ಚು ಅವಲಂಬಿತವಾಗಿವೆ, ಆದರೆ ಪ್ರಕೃತಿ ವಿಕೋಪಗಳಿಂದ ಪ್ರವಾಸಿಗರೂ ಸಹ ಅಲ್ಲಿಗೆ ಬರಲು ಹೆದರುತ್ತಾರೆ.

ಮಿತ್ರರೇ,

 • ಎಸ್ ಐಡಿಎಸ್ ದೇಶಗಳು ಶತಮಾನಗಳಿಂದ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬಾಳುತ್ತಿದ್ದರೂ ಸಹ, ಅವುಗಳಿಗೆ ನೈಸರ್ಗಿಕ ಏರುಪೇರುಗಳಿಗೆ ಹೇಗೆ ಹೊಂದಿಕೊಳ್ಳಬೇಕೆಂಬುದು ತಿಳಿದಿದೆ.
 • ಆದರೆ ಕಳೆದ ಕೆಲವು ದಶಕಗಳಲ್ಲಿ ತೋರಿದ ಸ್ವಾರ್ಥದ ನಡವಳಿಕೆಯಿಂದಾಗಿ, ಪ್ರಕೃತಿಯ ಅಸ್ವಾಭಾವಿಕ ರೂಪವು ಮುನ್ನೆಲೆಗೆ ಬಂದಿದೆ, ಅದರ ಪರಿಣಾಮವನ್ನು ಇಂದು ಮುಗ್ಧ ಸಣ್ಣ ದ್ವೀಪ ರಾಷ್ಟ್ರಗಳು ಎದುರಿಸುವಂತಾಗಿದೆ
 • ಮತ್ತು ಆದ್ದರಿಂದ ನನಗೆ, ಸಿಡಿಆರ್ ಮತ್ತು ಐಆರ್ ಐಎಸ್ ಕೇವಲ ಮೂಲಸೌಕರ್ಯ ವಿಷಯಗಳಲ್ಲ, ಆದರೆ ಇದು ಮಾನವ ಕಲ್ಯಾಣದ ಅತ್ಯಂತ ಗಂಭೀರ ಜವಾಬ್ದಾರಿಯ ಭಾಗವಾಗಿದೆ.
 • ಇದು ಮನುಕುಲದ ಕಡೆಗೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ.
 • ಒಂದು ರೀತಿಯಲ್ಲಿ ಇದು ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತವಾಗಿದೆ

ಮಿತ್ರರೇ,

 • ಸಿಡಿಆರ್ ಎನ್ನುವುದು ವಿಚಾರಸಂಕಿರಣದಿಂದ ಹೊರಹೊಮ್ಮುವ ಮಾಯಾಲೋಕವನ್ನು, ಆದರೆ ಸಿಡಿಆರ್ ಹುಟ್ಟು ಹಲವು ವಿಷಯಗಳ ಚಿಂತನೆ ಮತ್ತು ಅನುಭವಗಳ ಫಲಿತಾಂಶವಾಗಿದೆ.
 • ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ಹವಾಮಾನ ವೈಪರೀತ್ಯದ ಅಪಾಯವನ್ನು ಗ್ರಹಿಸಿದ ಭಾರತವು, ಫೆಸಿಪಿಕ್ ದ್ವೀಪಗಳು ಮತ್ತು ಕ್ಯಾರಿಕೋಮ್ ರಾಷ್ಟ್ರಗಳೊಂದಿಗೆ ಸಹಕಾರಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.
 • ನಾವು ಅವುಗಳ ಪ್ರಜೆಗಳಿಗೆ ಸೌರ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡಿದ್ದೇವೆ ಮತ್ತು ಅಲ್ಲಿ ಮೂಲಸೌಕರ್ಯ ವೃದ್ಧಿಗೆ ನಿರಂತರವಾಗಿ ಕೊಡುಗೆ ನೀಡುತ್ತಿದ್ದೇವೆ.
 • ಅದರ ಮುಂದುವರಿದ ಭಾಗವಾಗಿ ಇಂದು, ನಾನು ಭಾರತದ ಮತ್ತೊಂದು ಉಪಕ್ರಮವನ್ನು ಪ್ರಕಟಿಸುತ್ತಿದ್ದೇನೆ.
 • ಭಾರತದ ಬಾಹ್ಯಾಕಾಶ ಸಂಸ್ಥೆ-ಇಸ್ರೋ ಎಸ್ ಐಡಿಎಸ್ ಗಾಗಿ ವಿಶೇಷ ದತ್ತಾಂಶ ವಿಂಡೋ ಅನ್ನು ಅಭಿವೃದ್ಧಿಪಡಿಸಲಿದೆ.
 • ಇದರೊಂದಿಗೆ ಐಎಸ್ ಡಿಎಸ್ ಉಪಗ್ರಹದ ಮೂಲಕ ಚಂಡಮಾರುತಗಳು, ಹವಳದ ಬಂಡೆಗಳ ಮೇಲ್ವಿಚಾರಣೆ, ಕರಾವಳಿ ರೇಖೆಯ ಮೇಲೆ ನಿಗಾ ಇತ್ಯಾದಿಗಳ ಬಗ್ಗೆ ಸಮಯೋಚಿತ ಮಾಹಿತಿಯನ್ನು ಪಡೆಯುವುದನ್ನು ಮುಂದುವರಿಸುತ್ತದೆ.

ಮಿತ್ರರೇ,

 • ಸಿಡಿಆರ್ ಮತ್ತು ಎಸ್ ಐಡಿಎಸ್ ಎರಡೂ ಐಆರ್ ಐಎಸ್ ಸಾಕಾರಕ್ಕಾಗಿ ಒಗ್ಗೂಡಿ ಕಾರ್ಯನಿರ್ವಹಿಸುತ್ತಿವೆ, ಇದು ಸಹ-ಸೃಷ್ಟಿ ಮತ್ತು ಸಹ-ಪ್ರಯೋಜನಕ್ಕೆ ಉತ್ತಮ ಉದಾಹರಣೆಯಾಗಿದೆ.
 • ಅದೇ ಕಾರಣಕ್ಕೆ ನಾನು ಐಆರ್ ಐಎಸ್ ಉದ್ಘಾಟನೆ ಅತ್ಯಂತ ಪ್ರಮುಖ ಭಾಗ ಎಂದು ಭಾವಿಸಿದ್ದೇನೆ.
 • ಐಆರ್ ಐಎಸ್ ಮೂಲಕ, ತಂತ್ರಜ್ಞಾನ, ಹಣಕಾಸು ಮತ್ತು ಅಗತ್ಯ ಮಾಹಿತಿಯನ್ನು ಎಸ್ ಐಡಿಎಸ್ ಸುಲಭ ಮತ್ತು ವೇಗವಾಗಿ ಕ್ರೂಡೀಕರಿಸಲು ಸಾಧ್ಯವಾಗಲಿದೆ. ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ಗುಣಮಟ್ಟದ ಮೂಲಸೌಕರ್ಯದ ಉತ್ತೇಜನದಿಂದ ಅಲ್ಲಿನ ಜೀವನ ಮತ್ತು ಜೀವನೋಪಾಯ ಎರಡಕ್ಕೂ ಪ್ರಯೋಜನವನ್ನು ನೀಡುತ್ತದೆ.
 • ಪ್ರಪಂಚವು ದೇಶಗಳನ್ನು ಕಡಿಮೆ ಜನಸಂಖ್ಯೆಯ ಸಣ್ಣ ದ್ವೀಪಗಳೆಂದು ಪರಿಗಣಿಸುತ್ತದೆ ಎಂದು ನಾನು ಮೊದಲೇ ಹೇಳಿದ್ದೇನೆ. ಆದರೆ ನಾನು ದೇಶಗಳನ್ನು ದೊಡ್ಡ ಸಾಗರಗಳನ್ನು ಹೊಂದಿರುವ ಸಾಮರ್ಥ್ಯದ ದೊಡ್ಡ ರಾಷ್ಟ್ರಗಳೆಂದು ಭಾವಿಸುತ್ತೇನೆ. ಸಮುದ್ರದಿಂದ ಬಂದ ಮುತ್ತುಗಳ ಹಾರವು ಪ್ರತಿಯೊಬ್ಬರನ್ನೂ ಅಲಂಕರಿಸುವಂತೆ, ಸಮುದ್ರದ ಎಸ್ ಐಡಿಎಸ್ ಜಗತ್ತನ್ನು ಅಲಂಕರಿಸುತ್ತದೆ
 • ಭಾರತವು ಹೊಸ ಯೋಜನೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಮತ್ತು ಅದರ ಯಶಸ್ಸಿಗಾಗಿ ಸಿಐಡಿಆರ್ ಹಾಗೂ ಇತರ ಪಾಲುದಾರ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.
 • ಹೊಸ ಉಪಕ್ರಮಕ್ಕಾಗಿ ನಾನು ಸಿಡಿಆರ್ ಮತ್ತು ಎಲ್ಲಾ ಸಣ್ಣ ದ್ವೀಪ ರಾಷ್ಟ್ರಗಳ ಗುಂಪುಗಳಿಗೆ ಶುಭಾಶಯಗಳನ್ನು ಕೋರುತ್ತೇನೆ.

ತುಂಬಾ ತುಂಬಾ ಧನ್ಯವಾದಗಳು

ಘೋಷಣೆ: ಇದು ಪ್ರಧಾನಮಂತ್ರಿಯವರ  ಭಾಷಣದ ಯಥಾವತ್ ಅನುವಾದವಲ್ಲ, ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.

***(Release ID: 1769200) Visitor Counter : 100