ಪ್ರಧಾನ ಮಂತ್ರಿಯವರ ಕಛೇರಿ

ಸಿಂಗಾಪುರದ ಪ್ರಧಾನ ಮಂತ್ರಿಯವರೊಂದಿಗೆ ಭಾರತದ ಪ್ರಧಾನ ಮಂತ್ರಿಯವರ ಮಾತುಕತೆ

Posted On: 30 OCT 2021 9:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಂಗಾಪುರದ ಪ್ರಧಾನಮಂತ್ರಿ ಶ್ರೀ ಲೀ ಹಸೀನ್ ಲೂಂಗ್ ಅವರೊಂದಿಗೆ 30 ಅಕ್ಟೋಬರ್ 2021 ರಂದು ಇಟಲಿಯ ರೋಮ್ನಲ್ಲಿ G-20 ಶೃಂಗಸಭೆಯ  ಸಂದರ್ಭದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. 

ಸಾಂಕ್ರಾಮಿಕ ರೋಗದ ನಂತರದ ಅವಧಿಯಲ್ಲಿ ಇದು ಅವರ ಮೊದಲ ವೈಯಕ್ತಿಕ ಸಭೆಯಾಗಿದೆ. ಇಬ್ಬರೂ ನಾಯಕರು ಹವಾಮಾನ ಬದಲಾವಣೆಯನ್ನು ಎದುರಿಸಲು ಜಾಗತಿಕ ಪ್ರಯತ್ನಗಳು ಮತ್ತು ಮುಂಬರುವ ಸಿಒಪಿ26 ರ ಬಗ್ಗೆ  ಚರ್ಚಿಸಿದರು. ತ್ವರಿತ ಲಸಿಕೆ ನೀಡುವ ಪ್ರಯತ್ನಗಳು ಮತ್ತು ನಿರ್ಣಾಯಕ ಔಷಧಿಗಳ ಪೂರೈಕೆಯನ್ನು ಖಾತ್ರಿಪಡಿಸುವ ಮೂಲಕ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ನಡೆಯುತ್ತಿರುವ ಪ್ರಯತ್ನಗಳ ಕುರಿತು ಅವರು ಚರ್ಚಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿ ಅವರು ಎರಡನೇ ಅಲೆಯ ಸಮಯದಲ್ಲಿ ಭಾರತಕ್ಕೆ ಕೋವಿಡ್ ನೆರವು ನೀಡಲು ಸಿಂಗಾಪುರದ  ಮುಂದೆ ಬಂದಿದ್ದನ್ನು ಶ್ಲಾಘಿಸಿದರು. ಭಾರತದಲ್ಲಿ ಕ್ಷಿಪ್ರ ಲಸಿಕೆ ನೀಡುವ ಅಭಿಯಾನಕ್ಕಾಗಿ  ಪ್ರಧಾನ ಮಂತ್ರಿ ಲೀ ಅವರು ಪ್ರಧಾನ ಮಂತ್ರಿ ಮೋದಿಯವರನ್ನು ಅಭಿನಂದಿಸಿದರು.

ಎರಡೂ ದೇಶಗಳ ನಡುವಿನ ಸಾಮಾನ್ಯ ಪ್ರಯಾಣ ಮತ್ತು ಸಾರಿಗೆಯ ಶೀಘ್ರ ಆರಂಭವೂ ಸೇರಿದಂತೆ ಜನರೊಂದಿಗಿನ ಸಂಬಂಧಗಳನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಅವರು ಚರ್ಚಿಸಿದರು.

***



(Release ID: 1768021) Visitor Counter : 156