ಪ್ರಧಾನ ಮಂತ್ರಿಯವರ ಕಛೇರಿ

ಇಂಧನ ಪರಿವರ್ತನೆಯಲ್ಲಿ ಇಟಲಿ-ಭಾರತದ ಕಾರ್ಯತಂತ್ರದ ಸಹಯೋಗ ಕುರಿತು ಜಂಟಿ ಹೇಳಿಕೆ

Posted On: 30 OCT 2021 2:24PM by PIB Bengaluru

2021ರ ಅಕ್ಟೋಬರ್ 30-31 ರಂದು ಇಟಲಿಯು ರೋಮ್‌ ನಲ್ಲಿ ಆಯೋಜಿಸಲಾಗಿರುವ ಜಿ20 ನಾಯಕರ ಶೃಂಗಸಭೆಯ ವೇಳೆ ಇಟಾಲಿ ಗಣರಾಜ್ಯದ ಮಂತ್ರಿ ಪರಿಷತ್ತಿನ ಅಧ್ಯಕ್ಷ ಘನತೆವೆತ್ತ ಶ್ರೀ ಮಾರಿಯೋ ಡ್ರಾಘಿ, ಮತ್ತು ಭಾರತದ ಪ್ರಧಾನಮಂತ್ರಿ ಮಾನ್ಯ ಶ್ರೀ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಸಭೆ ನಡೆಸಿದರು.
2020ರ ನವೆಂಬರ್ 6, ರಂದು ಭಾರತ ಮತ್ತು ಇಟಲಿ (2020-2024) ನಡುವೆ ವರ್ಧಿತ ಪಾಲುದಾರಿಕೆಗಾಗಿ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಂಡ ನಂತರ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳಲ್ಲಿ ಆಗಿರುವ ಗಮನಾರ್ಹ ಪ್ರಗತಿಯನ್ನು ಅಂಗೀಕರಿಸಿದರು. ರೋಮ್‌ ನಲ್ಲಿನ ಜಿ20 ನಾಯಕರ ಶೃಂಗಸಭೆ ಮತ್ತು ಗ್ಲಾಸ್ಗೋದಲ್ಲಿ ಸಿ.ಓ.ಪಿ.26 ಎರಡಕ್ಕೂ ಕೇಂದ್ರವಾಗಿರುವ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಶುದ್ಧ ಇಂಧನದ ಪರಿವರ್ತನೆಯನ್ನು ವೇಗಗೊಳಿಸುವ ಮಹತ್ವದ ವಿಷಯಗಳು ಒಳಗೊಂಡಂತೆ ಅವರು ಕಾರ್ಯತಂತ್ರದ ವಲಯಗಳಲ್ಲಿ ಸಹಕಾರವನ್ನು ಬಲಪಡಿಸಲು ತಮ್ಮ ಸಂಕಲ್ಪವನ್ನು ವ್ಯಕ್ತಪಡಿಸಿದರು.
2021ರ ಮೇ 8ರಂದು ಪೋರ್ಟೊದಲ್ಲಿ ನಡೆದ ಭಾರತ-ಐರೋಪ್ಯ ಒಕ್ಕೂಟದ ನಾಯಕರ ಸಭೆಯನ್ನು ಅವರು ಸ್ಮರಿಸಿದರು, ಅಲ್ಲಿ ಐರೋಪ್ಯ ಒಕ್ಕೂಟ ಮತ್ತು ಭಾರತವು ಹವಾಮಾನ ಬದಲಾವಣೆ, ಜೀವವೈವಿಧ್ಯದ ನಷ್ಟ ಮತ್ತು ಮಾಲಿನ್ಯದ ಪರಸ್ಪರ ಅವಲಂಬಿತ ಸವಾಲುಗಳನ್ನು ಎದುರಿಸುವ ತುರ್ತು ಅಗತ್ಯವನ್ನು ಪ್ರತಿಪಾದಿಸಿದ್ದವು ಮತ್ತು ನೀರಿನಲ್ಲಿ ಅಳವಡಿಸಬಹುದಾದ ಪವನ ವಿದ್ಯುತ್ ನಂತಹ ನಾವೀನ್ಯಪೂರ್ಣ ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳ ನಿಯೋಜನೆ ಮತ್ತು ಹಸುರು ಹೈಡ್ರೋಜನ್‌ ನ ಸಾಮರ್ಥ್ಯವನ್ನು ಬಳಸಿಕೊಳ್ಳುವುದು, ಇಂಧನ ದಕ್ಷತೆಯನ್ನು ಉತ್ತೇಜಿಸುವುದು, ಸ್ಮಾರ್ಟ್ ಗ್ರಿಡ್‌ ಗಳು ಮತ್ತು ಶೇಖರಣಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು, ವಿದ್ಯುತ್ ಮಾರುಕಟ್ಟೆಯನ್ನು ಆಧುನೀಕರಿಸುವುದು ಸೇರಿದಂತೆ ನವೀಕರಿಸಬಹುದಾದ ಇಂಧನದ ನಿಯೋಜನೆಯನ್ನು ವೇಗಗೊಳಿಸಲು ಸಹಕಾರವನ್ನು ಆಳಗೊಳಿಸಲು ಸಮ್ಮತಿಸಿದರು.
ಇದರ ಜೊತೆಗೆ, ಎರಡೂ ಕಡೆಯವರು ತಮ್ಮ ತಮ್ಮ ವಿದ್ಯುತ್ ವ್ಯವಸ್ಥೆಗಳಲ್ಲಿ ಬೆಳೆಯುತ್ತಿರುವ ನವೀಕರಿಸಬಹುದಾದ ಇಂಧನ ವೆಚ್ಚದ ಪರಿಣಾಮಕಾರಿ ಏಕೀಕರಣದ ಪ್ರಾಮುಖ್ಯವನ್ನು ಒಪ್ಪಿಕೊಂಡರು, ಪರಿಣಾಮಕಾರಿ ಶುದ್ಧ ಪರಿವರ್ತನೆಗೆ ಪ್ರಮುಖ ಆಸ್ತಿಯಾಗಿ ಉದ್ಯೋಗಗಳು, ಜಿಡಿಪಿ ವೃದ್ಧಿ, ಇಂಧನ ದಾರಿದ್ರ್ಯ ನಿರ್ಮೂಲನೆ ಮಾಡುವಾಗ ಸಾರ್ವತ್ರಿಕ ಇಂಧನದ ಪ್ರವೇಶವನ್ನು ಬಲಪಡಿಸುತ್ತದೆ. 
ಈ ದೃಷ್ಟಿಕೋನದಲ್ಲಿ, ಉಭಯ ಪ್ರಧಾನಮಂತ್ರಿಗಳು 2030ರ ವೇಳೆಗೆ 450 ಗಿ.ವ್ಯಾ. ನವೀಕರಿಸಬಹುದಾದ ಇಂಧನವನ್ನು ನಿಯೋಜಿಸುವ ಭಾರತದ ಸಂಕಲ್ಪವನ್ನು ಹಾಗೂ ಇಟಲಿಯ ಪ್ರಾಮಾಣಿಕ ಅನುಮೋದನೆಯನ್ನು ಮತ್ತು ಅಂತಾರಾಷ್ಟ್ರೀಯ ಸೌರ ಸಹಯೋಗಕ್ಕೆ ಸಕ್ರಿಯ ಬೆಂಬಲವನ್ನು ಶ್ಲಾಘಿಸಿದರು ಮತ್ತು ಇಂಧನ ಪರಿವರ್ತನೆಯ ಕ್ಷೇತ್ರದಲ್ಲಿ ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಪ್ರಾರಂಭಿಸಲು ಸಮ್ಮತಿಸಿದರು.
ಅಂತಹ ಪಾಲುದಾರಿಕೆಯನ್ನು, ಇಟಾಲಿಯ ಪರಿಸರ ಪರಿವರ್ತನೆಯ ಸಚಿವಾಲಯ ಮತ್ತು ಅದರ ಭಾರತೀಯ ಸಹವರ್ತಿ ಸಚಿವಾಲಯಗಳು ಅಂದರೆ,  ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ವಿದ್ಯುತ್ ಸಚಿವಾಲಯ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಗಳ ನಡುವೆ ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಯ ಸಹಕಾರಕ್ಕೆ ಹೊಸ ಪ್ರಚೋದನೆಯನ್ನು ನೀಡುವ ಮೂಲಕ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಕಾರ್ಯವಿಧಾನಗಳ ಮೇಲೆ ನಿರ್ಮಿಸಬಹುದಾಗಿದೆ.


ಇಂಧನ ಪರಿವರ್ತನೆಯಲ್ಲಿ ತಮ್ಮ ಪಾಲುದಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಇಟಲಿ ಮತ್ತು ಭಾರತ ಎರಡೂ:
•    ಸ್ಮಾರ್ಟ್ ಸಿಟಿಗಳು; ಚಲನಶೀಲತೆ; ಸ್ಮಾರ್ಟ್-ಗ್ರಿಡ್‌ಗಳು, ವಿದ್ಯುತ್ ವಿತರಣೆ ಮತ್ತು ಶೇಖರಣಾ ಪರಿಹಾರಗಳು; ಅನಿಲ ಸಾಗಣೆ ಮತ್ತು ಇಂಧನ ಪೂರಕ ಇಂಧನವಾಗಿ ನೈಸರ್ಗಿಕ ಅನಿಲ ಉತ್ತೇಜನ, ಸಮಗ್ರ ತ್ಯಾಜ್ಯ ನಿರ್ವಹಣೆ (ತ್ಯಾಜ್ಯದಿಂದ ಸಂಪತ್ತು); ಮತ್ತು  ಹಸುರು ಇಂಧನಗಳು (ಹಸುರು ಹೈಡ್ರೋಜನ್; ಸಿಎನ್.ಜಿ ಮತ್ತು ಎಲ್.ಎನ್.ಜಿ.; ಜೈವಿಕ-ಮೀಥೇನ್; ಜೈವಿಕ-ಸಂಸ್ಕರಣಾಗಾರ; ಎರಡನೇ ತಲೆಮಾರಿನ ಜೈವಿಕ-ಎಥೆನಾಲ್; ಕ್ಯಾಸ್ಟರ್ ಆಯಿಲ್; ಜೈವಿಕ ತೈಲ – ತ್ಯಾಜ್ಯದಿಂದ ಇಂಧನ) ದಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಅನ್ವೇಷಿಸಲು, 2017ರ ಅಕ್ಟೋಬರ್ 30ರಂದು ದೆಹಲಿಯಲ್ಲಿ ಸಹಿ ಮಾಡಲಾದ ಇಂಧನ ಕ್ಷೇತ್ರದಲ್ಲಿನ ಸಹಕಾರದ ತಿಳಿವಳಿಕೆ ಒಪ್ಪಂದದಿಂದ ಸ್ಥಾಪಿಸಲಾದ "ಜಂಟಿ ಕಾರ್ಯ ಸಮೂಹ" ವನ್ನು ಕಾರ್ಯಗತಗೊಳಿಸುವ ಸವಾಲು.
•    ಭಾರತದಲ್ಲಿ ಹಸುರು ಹೈಡ್ರೋಜನ್ ಮತ್ತು ಸಂಬಂಧಿತ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ನಿಯೋಜನೆಯನ್ನು ಬೆಂಬಲಿಸಲು ಮಾತುಕತೆಯ ಆರಂಭ.
•    2030ರ ವೇಳೆಗೆ 450ಗಿ.ವ್ಯಾ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸುವ ಮತ್ತು ಸಂಯೋಜಿಸುವ ಭಾರತದ ಗುರಿಯ ಲಾಭ ಪಡೆಯಲು ಭಾರತದಲ್ಲಿ ದೊಡ್ಡ ಗಾತ್ರದ ಹಸಿರು ಕಾರಿಡಾರ್ ಯೋಜನೆಯನ್ನು ಬೆಂಬಲಿಸಲು ಒಗ್ಗೂಡಿ ಕೆಲಸ ಮಾಡುವುದನ್ನು ಪರಿಗಣಿಸಲು.
•    ನೈಸರ್ಗಿಕ ಅನಿಲ ವಲಯದಲ್ಲಿ ಜಂಟಿ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಇಟಲಿಯ ಮತ್ತು ಭಾರತೀಯ ಕಂಪನಿಗಳನ್ನು ಪ್ರೋತ್ಸಾಹಿಸುವುದು, ಡಿಕಾರ್ಬನೈಸೇಶನ್‌ ಗಾಗಿ ತಾಂತ್ರಿಕ ಆವಿಷ್ಕಾರ, ಸ್ಮಾರ್ಟ್ ಸಿಟಿಗಳು ಮತ್ತು ಇತರ ನಿರ್ದಿಷ್ಟ ಕ್ಷೇತ್ರಗಳು (ಅಂದರೆ: ನಗರ ಸಾರ್ವಜನಿಕ ಸಾರಿಗೆಯ ವಿದ್ಯುದ್ದೀಕರಣ).
•    ಇಂಧನ ಪರಿವರ್ತನೆ-ಸಂಬಂಧಿತ ಕ್ಷೇತ್ರಗಳಲ್ಲಿ ಭಾರತೀಯ ಮತ್ತು ಇಟಲಿಯ ಕಂಪನಿಗಳ ಜಂಟಿ ಹೂಡಿಕೆಗಳನ್ನು ಪ್ರೋತ್ಸಾಹಿಸಲು.
•    ಶುದ್ಧ ಮತ್ತು ವಾಣಿಜ್ಯಾತ್ಮಕವಾಗಿ ಕಾರ್ಯಸಾಧ್ಯವಾದ ಇಂಧನಗಳು/ತಂತ್ರಜ್ಞಾನಗಳು, ದೀರ್ಘಾವಧಿಯ ಗ್ರಿಡ್ ಯೋಜನೆ, ನವೀಕರಿಸಬಹುದಾದ ಮತ್ತು ದಕ್ಷತೆಯ ಕ್ರಮಗಳಿಗಾಗಿ ಪ್ರೋತ್ಸಾಹಿಸುವ ಯೋಜನೆಗಳು, ಜೊತೆಗೆ ಶುದ್ಧ ಇಂಧನದ ಪರಿವರ್ತನೆಯನ್ನು ವೇಗಗೊಳಿಸಲು ಹಣಕಾಸಿನ ಸಾಧನಗಳಿಗೆ ಸಂಬಂಧಿಸಿದ್ದೂ ಸೇರಿದಂತೆ ಉಪಯುಕ್ತ ಮಾಹಿತಿಗಳು ಮತ್ತು ಅನುಭವಗಳನ್ನು ಅದರಲ್ಲೂ ವಿಶೇಷವಾಗಿ ನೀತಿ ಮತ್ತು ನಿಯಂತ್ರಣ ಚೌಕಟ್ಟಿನ ಕ್ಷೇತ್ರದಲ್ಲಿನ ಉಪಯುಕ್ತ ಮಾಹಿತಿ ಮತ್ತು ಅನುಭವ ಹಂಚಿಕೊಳ್ಳಲು.

***(Release ID: 1767989) Visitor Counter : 233