ಹಣಕಾಸು ಸಚಿವಾಲಯ

ಸರಕು ಮತ್ತು ಸಲಹಾಯೇತರ ಸೇವೆಗಳ ಖರೀದಿಗಾಗಿ ಮಾದರಿ ಟೆಂಡರು ದಾಖಲೆಗಳನ್ನು (ಎಂಟಿಡಿ) ಬಿಡುಗಡೆ ಮಾಡಿದ ಹಣಕಾಸು ಖಾತೆ ಕಾರ್ಯದರ್ಶಿ ಡಾ. ಟಿ.ವಿ.ಸೋಮನಾಥನ್


ಎಂಟಿಡಿಗಳು ನಿರ್ದಿಷ್ಟವಾಗಿ ಇ-ದಾಸ್ತಾನು ಅಗತ್ಯಗಳನ್ನು ಪೂರೈಸಲಿದ್ದು, ಸಾರ್ವಜನಿಕ ಸಂಗ್ರಹಣೆಯ ಡಿಜಿಟಲೀಕರಣ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಡಿಜಿಟಲ್ ಭಾರತದ ಗುರಿಯನ್ನು ಸಾಧಿಸಲು ನೆರವಾಗುತ್ತದೆ

Posted On: 29 OCT 2021 4:27PM by PIB Bengaluru

ಈ ಬಾರಿಯ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಾನ್ಯ ಪ್ರಧಾನಮಂತ್ರಿಯವರು ಪ್ರತಿಪಾದಿಸಿದ್ದ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಕಾರ್ಯವಿಧಾನಗಳ ನಿರಂತರ ಪರಿಶೀಲನೆಯ ಭಾಗವಾಗಿ ಸರಕು ಮತ್ತು ಸಲಹಾಯೇತರ ಸೇವೆಗಳ ಖರೀದಿಗಾಗಿ ಮಾದರಿ ಟೆಂಡರ್ ದಾಖಲೆಗಳನ್ನು (ಎಂಟಿಡಿಗಳು) ಹಣಕಾಸು ಖಾತೆ ಕಾರ್ಯದರ್ಶಿ ಡಾ. ಟಿ.ವಿ. ಸೋಮನಾಥನ್‌ ನವದೆಹಲಿಯಲ್ಲಿಂದು ಬಿಡುಗಡೆ ಮಾಡಿದರು.

ಎಂಟಿಡಿಗಳು ನಿರ್ದಿಷ್ಟವಾಗಿ ಇ-ದಾಸ್ತಾನಿಗೆ ಸಂಬಂಧಿಸಿದ ಅಗತ್ಯಗಳನ್ನು ಪೂರೈಸುತ್ತವೆ, ಆ ಮೂಲಕ ಇ-ದಾಸ್ತಾನಿನ ಪ್ರಕ್ರಿಯೆಗಳನ್ನು ಸುಗಮಗೊಳಿಸುತ್ತದೆ ಮತ್ತು ಸರ್ಕಾರದ ಅನುಕೂಲಕರ ಮತ್ತು ದಕ್ಷ ಇ-ಆಡಳಿತದ ಮಹತ್ವಾಕಾಂಕ್ಷೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸಾರ್ವಜನಿಕ ದಾಸ್ತಾನಿನ ಡಿಜಿಟಲೀಕರಣ ಪ್ರಕ್ರಿಯೆಯನ್ನು ಸುಗಮಗೊಳಿಸುವ ಮತ್ತು ಪ್ರಮಾಣೀಕರಿಸುವ ಮೂಲಕ ಡಿಜಿಟಲ್ ಭಾರತದ ಗುರಿಯನ್ನು ಸಾಧಿಸಲು ಇಂತಹ ಉಪಕ್ರಮಗಳು ನೆರವಾಗುತ್ತವೆ.

ಟೆಂಡರ್ ದಾಖಲೆಗಳು ಉದ್ಯಮದೊಂದಿಗೆ ಸರ್ಕಾರಕ್ಕೆ ನಿರ್ಣಾಯಕ ಸ್ಪರ್ಶ ಬಿಂದುವಾಗಿವೆ ಮತ್ತು ಹೀಗಾಗಿ, ವಾಸ್ತವಿಕ ನೆಲೆಯಲ್ಲಿ ನೀತಿ ಉಪಕ್ರಮಗಳನ್ನು ಜಾರಿಗೆ ತರಲು ನಿರ್ಣಾಯಕ ವಾಹಕವಾಗಿದೆ. ಏಕರೂಪದ ಟೆಂಡರ್ ದಾಖಲೆಗಳ ಗುಚ್ಛಗಳು ಸರ್ಕಾರವು ತನ್ನ ನೀತಿಗಳನ್ನು ಪರಿಣಾಮಕಾರಿಯಾಗಿ, ಸ್ಥಿರವಾಗಿ ಮತ್ತು ಏಕರೂಪವಾಗಿ ವ್ಯಕ್ತಪಡಿಸಲು ಅನುಮತಿಸುತ್ತದೆ. ಸಾರ್ವಜನಿಕ ಸಂಗ್ರಹಣೆ ನೀತಿಗಳು ಮತ್ತು ಉಪಕ್ರಮಗಳ ವ್ಯಾಖ್ಯಾನ ಮತ್ತು ಅನ್ವಯದಲ್ಲಿ ಏಕರೂಪತೆಯು ಅನ್ವಯದ ಸ್ಪಷ್ಟತೆಯನ್ನು ಪ್ರತಿಬಿಂಬಿಸುತ್ತದೆ, ಆ ಮೂಲಕ ಅನುಸರಣೆಯನ್ನು ಹೆಚ್ಚಿಸುತ್ತದೆ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ, ಉತ್ತಮ ಖರೀದಿ ರೂಢಿಗಳನ್ನು ಹಂಚಿಕೊಳ್ಳುವುದರ ಜೊತೆಗೆ, ಏಕರೂಪದ ಟೆಂಡರ್ ದಾಖಲೆಗಳು ನೀತಿ ಉಪಕ್ರಮಗಳ ಧನಾತ್ಮಕ ಪರಿಣಾಮವನ್ನು ಹೆಚ್ಚಿಸುತ್ತವೆ, ಆರ್ಥಿಕತೆಗಳನ್ನು ಹೆಚ್ಚಿಸುತ್ತವೆ ಮತ್ತು ಸ್ಪರ್ಧೆಯನ್ನು ಹೆಚ್ಚಿಸುತ್ತವೆ. ತೆರಿಗೆ ಪಾವತಿದಾರರ ಹಣಕ್ಕೆ ಮೌಲ್ಯವನ್ನು ಸಾಕಾರಗೊಳಿಸುವುದಕ್ಕಾಗಿ ಅವು ಹೆಚ್ಚು ಪರಿಣಾಮಕಾರಿ ಮಾರುಕಟ್ಟೆ ಪರಿಸ್ಥಿತಿಗಳನ್ನು ಸೃಷ್ಟಿಸುತ್ತವೆ.  ಇದರಿಂದ ಬಿಡ್ಡರ್ ಗಳು ತಮ್ಮ ಉತ್ಪನ್ನಗಳಿಗೆ ವಿಶಾಲ ಮಾರುಕಟ್ಟೆ ಪ್ರವೇಶವನ್ನು ಸಹ ಪಡೆಯುತ್ತಾರೆ.

ಆ ಪ್ರಕಾರವಾಗಿ, ಸರಕು ಮತ್ತು ಸಲಹೆಯೇತರ ಸೇವೆಗಳ ಖರೀದಿಗಾಗಿ ಮಾದರಿ ಟೆಂಡರ್ ದಾಖಲೆಗಳನ್ನು (ಎಂಟಿಡಿಗಳು) ಈಗ ಅಭಿವೃದ್ಧಿಪಡಿಸಲಾಗಿದೆ. ಈ ಎಂಟಿಡಿಗಳು ಟೆಂಡರ್ ದಾಖಲೆಗಳ ರಚನೆಯನ್ನು ತರ್ಕಬದ್ಧಗೊಳಿಸುತ್ತವೆ ಮತ್ತು ಸರಳೀಕರಿಸುತ್ತದೆ. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಸಂಬಂಧಿಸಿದ ನೀತಿಗಳು, ಮೇಕ್ ಇನ್ ಇಂಡಿಯಾಗೆ ಆದ್ಯತೆ ಮತ್ತು ನವೋದ್ಯಮಗಳಿಗೆ ಪ್ರಯೋಜನಗಳಂತಹ ಸರ್ಕಾರದ ವಿವಿಧ ಖರೀದಿ ನೀತಿಗಳೊಂದಿಗೆ ನಿಬಂಧನೆಗಳನ್ನು ಹೊಂದಿಸುವುದಲ್ಲದೆ, ಎಂಟಿಡಿಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಉತ್ತಮ ರೂಢಿಗಳನ್ನು ಅಳವಡಿಸಿಕೊಳ್ಳುತ್ತವೆ. ಸಚಿವಾಲಯಗಳು/ ಇಲಾಖೆಗಳು/ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು, ಇತರ ಸಂಸ್ಥೆಗಳು  ಮತ್ತು ವೈಯಕ್ತಿಕ ತಜ್ಞರೊಂದಿಗೆ ವ್ಯಾಪಕ ಸಮಾಲೋಚನೆಯ ನಂತರ ಎಂಟಿಡಿಗಳನ್ನು ಎರಡು ಹಂತದ ನಂತರ ಅಭಿವೃದ್ಧಿಪಡಿಸಲಾಗಿದೆ.

ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ಹೊರಡಿಸಿದ ಎಂಟಿಡಿಗಳು ಮಾರ್ಗದರ್ಶಿ ಮಾದರಿಗಳಾಗಿವೆ. ಸರ್ಕಾರದ ಡಿಜಿಟಲ್ ಭಾರತದ ಪ್ರಸರಿಸುವಿಕೆಗೆ ಅನುಗುಣವಾಗಿ, ಬಳಕೆದಾರ ಇಲಾಖೆಗಳು ಸುಲಭವಾಗಿ ಕಸ್ಟಮೈಸೇಶನ್ ಮಾಡಲು ಅನುವು ಮಾಡಿಕೊಡುವುದಕ್ಕಾಗಿ ಎಂಟಿಡಿಗಳನ್ನು ಮೃದು ಮಾದರಿ (ಸಾಫ್ಟ್ ಟೆಂಪ್ಲೇಟ್)ಯಲ್ಲಿ ನೀಡಲಾಗುತ್ತಿದೆ. ಸಚಿವಾಲಯಗಳು/ಇಲಾಖೆಗಳು, ಸ್ಥಳೀಯ/ ವಿಶೇಷ ಅಗತ್ಯಗಳಿಗೆ ಅನುಗುಣವಾಗಿ ಈ ದಾಖಲೆಯನ್ನು ಸೂಕ್ತವಾಗಿ ಕಸ್ಟಮೈಸ್ ಮಾಡಲು ಸಮರ್ಥರಾಗಿರಬೇಕು. ಪ್ರತಿ ಎಂಟಿಡಿಯನ್ನು ಬಳಸಿಕೊಳ್ಳಲು ಸಂಗ್ರಹಿಸುವ ಅಧಿಕಾರಿಗಳಿಗೆ ಸಹಾಯ ಮಾಡಲು ಪ್ರತಿ ಎಂಟಿಡಿಯನ್ನು ಬಳಸಲು ಮಾರ್ಗದರ್ಶಿಯಾಗಿ ಪ್ರತ್ಯೇಕ ವಿವರವಾದ ಮಾರ್ಗದರ್ಶಕ ಟಿಪ್ಪಣಿಯನ್ನು ಸಹ ತಯಾರಿಸಲಾಗಿದೆ. ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ (ಡಿಒಇ) ಬಿಡುಗಡೆ ಮಾಡಿದ ಮಾದರಿ ಟೆಂಡರ್ ದಾಖಲೆಗಳು ಮಾರ್ಗದರ್ಶಿ ಮಾದರಿ (ಟೆಂಪ್ಲೇಟ್)ಗಳಾಗಿವೆ.

ಸರ್ಕಾರಿ ಸಂಸ್ಥೆಗಳು ತಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಅನುಸರಿಸುವ ಸಲುವಾಗಿ ವಿವಿಧ ಸರಕುಗಳು ಮತ್ತು ಸಮಾಲೋಚನೆರಹಿತ ಸೇವೆಗಳನ್ನು ದಾಸ್ತಾನು ಮಾಡುತ್ತವೆ. ಉತ್ತಮ ಆಡಳಿತ, ಪಾರದರ್ಶಕತೆ, ನ್ಯಾಯಸಮ್ಮತತೆ, ಸ್ಪರ್ಧಾತ್ಮಕತೆ ಮತ್ತು ಸಾರ್ವಜನಿಕ ದಾಸ್ತಾನಿನಲ್ಲಿ ಹಣದ ಮೌಲ್ಯವನ್ನು ಸುಧಾರಿಸಲು, ಭಾರತ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸಂಗ್ರಹಣೆಯಲ್ಲಿ ಹಲವಾರು ಮಹತ್ವದ ನೀತಿ ಉಪಕ್ರಮಗಳನ್ನು ಕೈಗೊಂಡಿದೆ.  2017ರ ಮಾರ್ಚ್ ನಲ್ಲಿ ಸಮಗ್ರ ಪರಿಶೀಲನೆಯ ನಂತರ ಸಾಮಾನ್ಯ ಹಣಕಾಸು ನಿಯಮಗಳನ್ನು ಹೊರಡಿಸಲಾಗಿತ್ತು. ಹೆಚ್ಚುವರಿಯಾಗಿ ಮೂರು ಖರೀದಿ ಕೈಪಿಡಿಗಳು, ಸರಕುಗಳ ಸಂಗ್ರಹಣೆಯ ಕೈಪಿಡಿ, 2017, ಸಮಾಲೋಚನೆ ಮತ್ತು ಇತರ ಸೇವೆಗಳ ಸಂಗ್ರಹಣೆಯ ಕೈಪಿಡಿ, 2017 ಮತ್ತು ಕಾಮಗಾರಿಗಳ ದಾಸ್ತಾನಿಗಾಗಿ ಕೈಪಿಡಿ, 2019 ಅನ್ನು ಸಹ ಅಭಿವೃದ್ಧಿಪಡಿಸಲಾಗಿದೆ.

ಈ ಮಾದರಿ ಟೆಂಡರ್ ದಾಖಲೆಗಳನ್ನು ರೂಪಿಸುವುದು ಮತ್ತು ಬಿಡುಗಡೆ ಮಾಡುವುದು ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಕಾರ್ಯವಿಧಾನಗಳ ಪರಿಶೀಲನೆಯ ನಿರಂತರ ಪ್ರಕ್ರಿಯೆಯ ಭಾಗವಾಗಿದೆ ಮತ್ತು 2021ರ ಅಕ್ಟೋಬರ್ 2 ರಿಂದ 2021ರ ಅಕ್ಟೋಬರ್   31ರವರೆಗಿನ, ಅವಧಿಯಲ್ಲಿ ವಿಶೇಷ ಅಭಿಯಾನವಾಗಿ ಸಂಪುಟ ಕಾರ್ಯದರ್ಶಿಯವರಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ.

https://doe.gov.in/sites/default/files/Model%20Tender%20Document%20for%20Procurement%20of%20Goods_0.pdf

https://doe.gov.in/sites/default/files/Model%20Tender%20Document%20for%20Procurement%20of%20Non%20Consultancy%20Services.pd

***



(Release ID: 1767574) Visitor Counter : 214