ಹಣಕಾಸು ಸಚಿವಾಲಯ

ಸಾರ್ವಜನಿಕ ದಾಸ್ತಾನು ಮತ್ತು ಯೋಜನಾ ನಿರ್ವಹಣೆಯ ಸುಧಾರಣೆಗಳ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಹಣಕಾಸು ಖಾತೆ ಕಾರ್ಯದರ್ಶಿ ಡಾ. ಟಿ ವಿ ಸೋಮನಾಥನ್


ಮಾರ್ಗಸೂಚಿಗಳು ಸಾರ್ವಜನಿಕ ದಾಸ್ತಾನು, ಯೋಜನೆಗಳ ತ್ವರಿತ, ದಕ್ಷ ಮತ್ತು ಪಾರದರ್ಶಕ ಅನುಷ್ಠಾನಕ್ಕಾಗಿ ನಾವೀನ್ಯತೆಯ ನಿಯಮಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತವೆ

Posted On: 29 OCT 2021 5:17PM by PIB Bengaluru

ಹಣಕಾಸು ಖಾತೆ ಕಾರ್ಯದರ್ಶಿ ಡಾ. ಟಿ ವಿ ಸೋಮನಾಥನ್‌ ಅವರು ಇಂದು ಸಾರ್ವಜನಿಕ ದಾಸ್ತಾನು ಮತ್ತು ಯೋಜನಾ ನಿರ್ವಹಣೆಯಲ್ಲಿ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದರು. ಈ ವರ್ಷದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಾನ್ಯ ಪ್ರಧಾನಮಂತ್ರಿಯವರು ಪ್ರತಿಪಾದಿಸಿದ್ದಂತೆ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಕಾರ್ಯವಿಧಾನಗಳ ಪರಿಶೀಲನೆಯ ನಿರಂತರ ಪ್ರಕ್ರಿಯೆಯ ಭಾಗವಾಗಿ ಈ ಮಾರ್ಗಸೂಚಿಗಳನ್ನು ರೂಪಿಸಿ, ಬಿಡುಗಡೆ ಮಾಡಲಾಗಿದೆ. ಸಂಪುಟ ಕಾರ್ಯದರ್ಶಿಯವರು  2021ರ ಅಕ್ಟೋಬರ್ 2ರಿಂದ ಅಕ್ಟೋಬರ್ 31ರ ನಡುವೆ ವಿಶೇಷ ಅಭಿಯಾನವಾಗಿ ಇದರ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಸಾರ್ವಜನಿಕ ದಾಸ್ತಾನು ಮತ್ತು ಯೋಜನಾ ನಿರ್ವಹಣೆಯ ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡಂತೆ ವಿವರವಾದ ಸಮಾಲೋಚನಾ ಪ್ರಕ್ರಿಯೆಯ ನಂತರ ಸೆಂಟ್ರಲ್‌ ವಿಜಿಲೆನ್ಸ್‌ ಕಮಿಶನ್‌ - ಕೇಂದ್ರ ವಿಚಕ್ಷಣ ಆಯೋಗದ ಅಡಿಯಲ್ಲಿ ಮಾರ್ಗಸೂಚಿಗಳ ಕರಡನ್ನು ತಯಾರಿಸಲಾಗಿದೆ. ಸಚಿವಾಲಯಗಳು/ ಇಲಾಖೆಗಳ ಅಭಿಪ್ರಾಯಗಳನ್ನು ಕೋರಿ, ವಿವರವಾದ ಪರಿಗಣನೆಯ ತರುವಾಯ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ (ಡಿಒಇ) ಮಾರ್ಗಸೂಚಿಗಳನ್ನು ಹೊರಡಿಸಲು ನಾಮಾಂಕನ ಮಾಡಲಾಗಿದೆ.

ಈ ಮಾರ್ಗಸೂಚಿಗಳು ಭಾರತದಲ್ಲಿ ಸಾರ್ವಜನಿಕ ದಾಸ್ತಾನು, ಯೋಜನೆಗಳ ತ್ವರಿತ, ದಕ್ಷ ಮತ್ತು ಪಾರದರ್ಶಕ ಅನುಷ್ಠಾನಕ್ಕೆ ನಾವೀನ್ಯತೆಯ ನಿಯಮಗಳನ್ನು ಅಳವಡಿಸಲು ಮತ್ತು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ತ್ವರಿತ ಮತ್ತು ಹೆಚ್ಚು ಪರಿಣಾಮಕಾರಿ ನಿರ್ಧಾರವನ್ನು ಕೈಗೊಳ್ಳಲು ಅನುಷ್ಠಾನ ಸಂಸ್ಥೆಗಳಿಗೆ ಅಧಿಕಾರ ನೀಡಲು ಪ್ರಯತ್ನಿಸುತ್ತವೆ. ಬಾಕಿ ಇದ್ದಾಗ ಕಾಲಮಿತಿಯಲ್ಲಿ ಪಾವತಿಸುವುದು ಕೂಡ ಮಾಡಲಾಗಿರುವ ಕೆಲವು ಸುಧಾರಣೆಗಳಲ್ಲಿ ಸೇರಿದೆ. ಭಾಗಶಃ (ಅಡ್ ಹಾಕ್) ಪಾವತಿಗಳ ಸಕಾಲಿಕ ಬಿಡುಗಡೆ (ಶೇ.70 ಅಥವಾ ಅದಕ್ಕಿಂತ ಹೆಚ್ಚಿನ ಬಿಲ್ ಗಳು) ಗುತ್ತಿಗೆದಾರರೊಂದಿಗೆ ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳೊಂದಿಗೆ (ಎಂಎಸ್ ಎಂಇಗಳು) ನಗದು ಹರಿವನ್ನು ಸುಧಾರಿಸುವ ನಿರೀಕ್ಷೆಯಿದೆ.

ಸರ್ಕಾರದ ಡಿಜಿಟಲ್ ಪ್ರಸರಿಸುವಿಕೆಯ ಭಾಗವಾಗಿ, ವಿದ್ಯುನ್ಮಾನ ಮಾಪನ ಪುಸ್ತಕಗಳನ್ನು ಕಾಮಗಾರಿಗಳ ಪ್ರಗತಿಯನ್ನು ದಾಖಲಿಸುವ ಸಾಧನವಾಗಿ ಶಿಫಾರಸು ಮಾಡಲಾಗಿದೆ. ಈ ವ್ಯವಸ್ಥೆಯು, ಮಾರ್ಗಸೂಚಿಗಳಲ್ಲಿ ಪ್ರಸ್ತಾಪಿಸಲಾದ ಇತರ ಐಟಿ ಆಧಾರಿತ ಪರಿಹಾರಗಳೊಂದಿಗೆ, ದಕ್ಷ ಡಿಜಿಟಲ್ ಭಾರತದ ಕನಸನ್ನು ಸಾಕಾರಗೊಳಿಸಲು, ಗುತ್ತಿಗೆದಾರರಿಗೆ ತ್ವರಿತ ಪಾವತಿಗಳನ್ನು ಸುಗಮಗೊಳಿಸಲು ಮತ್ತು ವಿವಾದಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ.

ಗುತ್ತಿಗೆದಾರರ ಆಯ್ಕೆಗೆ ಪರ್ಯಾಯ ವಿಧಾನಗಳನ್ನು ಅನುಮತಿಸಲಾಗಿದ್ದು, ಇದು ಯೋಜನೆಗಳ ಅನುಷ್ಠಾನದಲ್ಲಿ ವೇಗ ಮತ್ತು ದಕ್ಷತೆಯನ್ನು ಸುಧಾರಿಸುತ್ತದೆ. ಸೂಕ್ತ ಸಂದರ್ಭಗಳಲ್ಲಿ, ಸಾಂಪ್ರದಾಯಿಕ ಎಲ್ 1 ವ್ಯವಸ್ಥೆಗೆ ಪರ್ಯಾಯವಾಗಿ ಗುಣಮಟ್ಟ ಸಹಿತ ದರ ಆಧಾರಿತ ಆಯ್ಕೆ (ಕ್ಯು.ಸಿ.ಬಿ.ಎಸ್) ಮೂಲಕ ಪಾರದರ್ಶಕ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಪ್ರಸ್ತಾಪದ ಮೌಲ್ಯಮಾಪನದ ಸಮಯದಲ್ಲಿ ಗುಣಮಟ್ಟದ ತೂಕದ ನಿಯತಾಂಕಗಳನ್ನು ನೀಡಬಹುದಾಗಿದೆ.

ಸಾರ್ವಜನಿಕ ಯೋಜನೆಗಳನ್ನು ಸಕಾಲದಲ್ಲಿ, ಅನುಮೋದಿತ ವೆಚ್ಚದೊಳಗೆ ಮತ್ತು ಉತ್ತಮ ಗುಣಮಟ್ಟದೊಂದಿಗೆ  ಕಾರ್ಯಗತಗೊಳಿಸುವುದು ಸದಾ ಸವಾಲಾಗಿದೆ. ಆರ್ಥಿಕ ಅಭಿವೃದ್ಧಿಯ ವೇಗ ಹೆಚ್ಚುತ್ತಿರುವಾಗ, ಅನಗತ್ಯ ಅಡೆತಡೆಗಳನ್ನು ತೆಗೆದುಹಾಕಲಾಗಿದೆ ಮತ್ತು ತೆರಿಗೆದಾರರ ಹಣಕ್ಕೆ ಮೌಲ್ಯವನ್ನು ಹೆಚ್ಚಿಸಲು ಹೊಸ ಆವಿಷ್ಕಾರಗಳನ್ನು ಬಳಸಲಾಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಕಾರ್ಯವಿಧಾನಗಳು ಮತ್ತು ನಿಯಮಗಳ ಎಚ್ಚರಿಕೆಯಿಂದ ಪರಿಶೀಲಿಸುವುದು ಅತ್ಯಗತ್ಯವಾಗಿದೆ.

ಕೇಂದ್ರೀಯ ವಿಚಕ್ಷಣ ಆಯೋಗ (ಸಿವಿಸಿ), ಮಹಾಲೇಖಪಾಲರು ಮತ್ತು ಲೆಕ್ಕ ಪರಿಶೋಧಕರು (ಸಿಎಜಿ) ಮತ್ತು ಭಾರತ ಪರಿವರ್ತನೆ ಕುರಿತ ರಾಷ್ಟ್ರೀಯ ಸಂಸ್ಥೆ (ನೀತಿ ಆಯೋಗ)ಯು ಸಾರ್ವಜನಿಕ ದಾಸ್ತಾನು ಮತ್ತು ಯೋಜನಾ ನಿರ್ವಹಣೆಯ ಕಾರ್ಯವಿಧಾನಗಳು ಮತ್ತು ನಿಯಮಗಳ ವಿವರವಾದ ವಿಶ್ಲೇಷಣೆಯನ್ನು ನಡೆಸಿದ್ದು, ಪ್ರಸ್ತುತ ಮತ್ತು ಭವಿಷ್ಯದ ಸಾರ್ವಜನಿಕ ದಾಸ್ತಾನಿನ ಸವಾಲುಗಳನ್ನು ಎದುರಿಸುವ ಕಾರ್ಯತಂತ್ರಗಳಲ್ಲಿ ಬದಲಾವಣೆಗಳನ್ನು ಸೂಚಿಸಿದೆ

https://doe.gov.in/sites/default/files/General%20Instructions%20on%20Procurement%20and%20Project%20Management.pdf

***



(Release ID: 1767566) Visitor Counter : 237