ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆರ್.ಕೆ. ಲಕ್ಷ್ಮಣ್ ಅವರ 100ನೇ ಜನ್ಮ ದಿನಾಚರಣೆಯಂದು ಅವರನ್ನು ಸ್ಮರಿಸಿದ ಪ್ರಧಾನಿ

Posted On: 24 OCT 2021 10:30AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರ 100ನೇ ಜನ್ಮದಿನಾಚರಣೆಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. 2018ರಲ್ಲಿ "ಟೈಮ್‌ಲೆಸ್‌ ಲಕ್ಷ್ಮಣ್' ಪುಸ್ತಕವನ್ನು ಲೋಕಾರ್ಪಣೆ ಮಾಡಿದಾಗ ಶ್ರೀ ತಾವು ಮಾಡಿದ ಭಾಷಣದ ವಿಡಿಯೊವನ್ನು ಮೋದಿ ಅವರು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಬಹುಮುಖ ಪ್ರತಿಭೆ ಆರ್.ಕೆ.ಲಕ್ಷ್ಮಣ್ ಅವರ 100ನೇ ಜನ್ಮ ದಿನಾಚರಣೆಯಂದು ಅವರನ್ನು ಸ್ಮರಿಸಲಾಗುತ್ತಿದೆ. ತಮ್ಮ ವ್ಯಂಗ್ಯಚಿತ್ರಗಳ ಮೂಲಕ ಆ ಕಾಲದ ಸಾಮಾಜಿಕ-ರಾಜಕೀಯ ವಾಸ್ತವಗಳನ್ನು ಸುಂದರವಾಗಿ ಅವರು ಬಿಡಿಸಿಟ್ಟರು. ನಾನು 2018ರಲ್ಲಿ 'ಟೈಮ್‌ಲೆಸ್‌ ಲಕ್ಷ್ಮಣ್' ಪುಸ್ತಕವನ್ನು ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಮಾಡಿದ ಭಾಷಣವನ್ನು ಇಲ್ಲಿ ಹಂಚಿಕೊಂಡಿದ್ದೇನೆ https://t.co/S0srPeZ4hL" ಎಂದಿದ್ದಾರೆ.

***


(Release ID: 1766203) Visitor Counter : 244