ಪ್ರಧಾನ ಮಂತ್ರಿಯವರ ಕಛೇರಿ
ಆತ್ಮನಿರ್ಭರ ಭಾರತ ಸ್ವಯಂಪೂರ್ಣ ಗೋವಾ ಕಾರ್ಯಕ್ರಮದ ಫಲಾನುಭವಿಗಳು ಮತ್ತು ಪಾಲುದಾರರೊಂದಿಗೆ ಅಕ್ಟೋಬರ್ 23ರಂದು ಸಂವಾದ ನಡೆಸಲಿರುವ ಪ್ರಧಾನಮಂತ್ರಿ
प्रविष्टि तिथि:
22 OCT 2021 2:30PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಅಕ್ಟೋಬರ್ 23ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಆತ್ಮನಿರ್ಭರ ಭಾರತ ಸ್ವಯಂಪೂರ್ಣ ಗೋವಾ ಕಾರ್ಯಕ್ರಮದ ಫಲಾನುಭವಿಗಳು ಮತ್ತು ಪಾಲುದಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಸಂವಾದದ ನಂತರ ಪ್ರಧಾನಮಂತ್ರಿಯವರು ಭಾಗವಹಿಸಿದ್ದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಮಂತ್ರಿ ಅವರ ‘ಆತ್ಮನಿರ್ಭರ ಭಾರತ’ ಕರೆಯಿಂದ ಸ್ಫೂರ್ತಿ ಪಡೆದು 2020ರ ಅಕ್ಟೋಬರ್ 1ರಂದು ಸ್ವಯಂಪೂರ್ಣ ಗೋವಾ ಉಪಕ್ರಮ ಆರಂಭಿಸಲಾಯಿತು. ಈ ಕಾರ್ಯಕ್ರಮದಡಿ ರಾಜ್ಯ ಸರ್ಕಾರಿ ಅಧಿಕಾರಿಯನ್ನು ‘ಸ್ವಯಂಪೂರ್ಣ ಮಿತ್ರ’ರನ್ನಾಗಿ ನೇಮಿಸಲಾಗುವುದು. ಈ ಮಿತ್ರರು ಗೊತ್ತುಪಡಿಸಿದ ಪಂಚಾಯ್ತಿ ಅಥವಾ ಮುನಿಸಿಪಾಲಿಟಿಗೆ ಭೇಟಿ ನೀಡಿ, ಜನರೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಹಲವು ಸರ್ಕಾರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲಿದ್ದಾರೆ ಹಾಗು ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳು ಮತ್ತು ಪ್ರಯೋಜನಗಳು ಲಭ್ಯವಿರುವುದನ್ನು ಖಾತ್ರಿಪಡಿಸುತ್ತಾರೆ.
ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಉಪಸ್ಥಿತರಿರಲಿದ್ದಾರೆ.
***
(रिलीज़ आईडी: 1765748)
आगंतुक पटल : 276
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam