ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೋವಿಡ್ ಲಸಿಕೆಯ ಮೊದಲ ಡೋಸ್ 100% ಪೂರೈಸಿದ್ದಕ್ಕಾಗಿ ದೇವ್‌ಭೂಮಿ ಜನತೆಗೆ ಪ್ರಧಾನಮಂತ್ರಿ ಅಭಿನಂದನೆ

प्रविष्टि तिथि: 18 OCT 2021 2:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 18+ ವಯೋಮಾನದ ಜನರಿಗೆ ಕೋವಿಡ್-19 ಲಸಿಕೆಯ ಮೊದಲ ಡೋಸ್ ಅನ್ನು 100% ಪೂರೈಸಿದ್ದಕ್ಕಾಗಿ ದೇವ್‌ಭೂಮಿ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೋವಿಡ್-19 ವಿರುದ್ಧದ ದೇಶದ ಹೋರಾಟದಲ್ಲಿ ಉತ್ತರಾಖಂಡದ ಸಾಧನೆ ಬಹಳ ಮಹತ್ತರವಾದುದು ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.

ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಮಿ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ:

ದೇವ್‌ಭೂಮಿ ಜನತೆಗೆ ಅಭಿನಂದನೆಗಳು. ಕೋವಿಡ್ ವಿರುದ್ಧದ ದೇಶದ ಹೋರಾಟದಲ್ಲಿ ಉತ್ತರಾಖಂಡದ ಸಾಧನೆ ಬಹಳ ಮಹತ್ತರವಾದುದು. ಜಾಗತಿಕವಾಗಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಮ್ಮ ಲಸಿಕೆ ಅಭಿಯಾನವು ಅತ್ಯಂತ ಪರಿಣಾಮಕಾರಿಯಾಗಿರಲಿದೆ ಮತ್ತು  ಇದರಲ್ಲಿ ಜನರ ಪಾಲ್ಗೊಳ್ಳುವಿಕೆಯೂ ಅಷ್ಟೇ ಮುಖ್ಯ ಎಂಬ ನಂಬಿಕೆ ನನ್ನದು.

***


(रिलीज़ आईडी: 1765025) आगंतुक पटल : 261
इस विज्ञप्ति को इन भाषाओं में पढ़ें: Tamil , Odia , English , Urdu , Marathi , हिन्दी , Bengali , Manipuri , Punjabi , Gujarati , Telugu , Malayalam