ಪ್ರಧಾನ ಮಂತ್ರಿಯವರ ಕಛೇರಿ

ಡೆನ್ಮಾರ್ಕ್ ಪ್ರಧಾನ ಮಂತ್ರಿಯವರ ಭಾರತ ಭೇಟಿಯ ಸಮಯದಲ್ಲಿ ವಿನಿಮಯ ಮಾಡಿಕೊಳ್ಳಲಾದ ತಿಳಿವಳಿಕೆ ಒಪ್ಪಂದಗಳು/ ಒಪ್ಪಂದಗಳ ಪಟ್ಟಿ

Posted On: 09 OCT 2021 3:23PM by PIB Bengaluru

ಕ್ರ.ಸಂ

ಎಂಒಯು/ ಒಪ್ಪಂದದ ಹೆಸರು

ಭಾರತದ ಪರ ವಿನಿಮಯ ಮಾಡಿಕೊಂಡವರು

ಡೆನ್ಮಾರ್ಕ್  ಪರ ವಿನಿಮಯ ಮಾಡಿಕೊಂಡವರು

1

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ- ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಹೈದರಾಬಾದ್, ಆರ್ಹಸ್ ಯೂನಿವರ್ಸಿಟಿ, ಡೆನ್ಮಾರ್ಕ್ ಮತ್ತು ಜಿಯೋಲಾಜಿಕಲ್ ಸರ್ವೆ ಆಫ್ ಡೆನ್ಮಾರ್ಕ್ ಮತ್ತು ಗ್ರೀನ್ಲ್ಯಾಂಡ್ ನಡುವೆ ಅಂತರ್ಜಲ ಸಂಪನ್ಮೂಲಗಳು ಮತ್ತು ಜಲಶಿಲೆಗಳ ಮ್ಯಾಪಿಂಗ್ ಕುರಿತು ತಿಳಿವಳಿಕೆ ಒಪ್ಪಂದ

ಡಾ.ವಿ.ಎಂ. ತಿವಾರಿ ನಿರ್ದೇಶಕರು, ಸಿಎಸ್‌ಐಆರ್ - ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಉಪ್ಪಲ್ ರಸ್ತೆ, ಹೈದರಾಬಾದ್ (ತೆಲಂಗಾಣ)

ಆ್ಯಂಬ್ ಫ್ರೆಡ್ಡಿ ಸ್ವಾನೆ

2

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಮತ್ತು ಡ್ಯಾನಿಶ್ ಪೇಟೆಂಟ್ ಮತ್ತು ಟ್ರೇಡ್‌ಮಾರ್ಕ್ ಕಚೇರಿ ನಡುವೆ ಸಾಂಪ್ರದಾಯಿಕ ಜ್ಞಾನ ಡಿಜಿಟಲ್ ಗ್ರಂಥಾಲಯ ಪ್ರವೇಶ ಒಪ್ಪಂದ.

ಡಾ. ವಿಶ್ವಜನನಿ ಜೆ ಸತ್ತಿಗೇರಿ, ಮುಖ್ಯಸ್ಥರು, ಸಿಎಸ್‌ಐಆರ್ ಸಾಂಪ್ರದಾಯಿಕ ಜ್ಞಾನ ಡಿಜಿಟಲ್ ಗ್ರಂಥಾಲಯ ಘಟಕ 14, ಸತ್ಸಂಗ್ ವಿಹಾರ್ ಮಾರ್ಗ, ನವದೆಹಲಿ

ಆ್ಯಂಬ್ ಫ್ರೆಡ್ಡಿ ಸ್ವಾನೆ

3

ಸಂಭಾವ್ಯ ಅನ್ವಯಿಕೆಗಳೊಂದಿಗೆ ಉಷ್ಣವಲಯದ ಹವಾಮಾನಕ್ಕಾಗಿ ನೈಸರ್ಗಿಕ ಶೈತ್ಯೀಕರಣ ಕೇಂದ್ರವನ್ನು ಸ್ಥಾಪಿಸಲು.ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಮತ್ತು ಡ್ಯಾನ್‌ಫೋಸ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ನಡುವಿನ ತಿಳಿವಳಿಕೆ ಒಪ್ಪಂದ

ಪ್ರೊ.ಗೋವಿಂದನ್ ರಂಗರಾಜನ್, ನಿರ್ದೇಶಕರು, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು

ಶ್ರೀ ರವಿಚಂದ್ರನ್ ಪುರುಷೋತ್ತಮನ್,

 

ಅಧ್ಯಕ್ಷರು, ಡ್ಯಾನ್‌ಫೋಸ್ ಇಂಡಿಯಾ

4

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ, ಭಾರತ ಸರ್ಕಾರ ಮತ್ತು ಡೆನ್ಮಾರ್ಕ್ ಸರ್ಕಾರದ ನಡುವಿನ ಜಂಟಿ ಬಾಧ್ಯತಾ ಪತ್ರ

ಶ್ರೀ ರಾಜೇಶ್ ಅಗರ್ವಾಲ್, ಕಾರ್ಯದರ್ಶಿ,

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ

ಆ್ಯಂಬ್ ಫ್ರೆಡ್ಡಿ ಸ್ವಾನೆ

ಇವುಗಳಲ್ಲದೆ, ಕೆಳಗಿನ ವಾಣಿಜ್ಯ ಒಪ್ಪಂದಗಳನ್ನು ಸಹ ಪ್ರಕಟಿಸಲಾಗಿದೆ:

ಎ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಸ್ಟೈಸ್ಡಾಲ್ ಫ್ಯೂಯಲ್ ಟೆಕ್ನಾಲಜೀಸ್ ನಡುವೆ ಹೈಡ್ರೋಜನ್ ಎಲೆಕ್ಟ್ರೋಲೈಜರ್ ಅಭಿವೃದ್ಧಿ ಮತ್ತು ಭಾರತದಲ್ಲಿ ಹೈಡ್ರೋಜನ್ ಎಲೆಕ್ಟ್ರೋಲೈಜರ್ ಉತ್ಪಾದನೆ ಮತ್ತು ನಿಯೋಜನೆ ಕುರಿತು ತಿಳಿವಳಿಕೆ ಒಪ್ಪಂದ.

ಬಿ. ಡೆನ್ಮಾರ್ಕ್ ನಲ್ಲಿ ‘ಸ್ಥಿರ ಪರಿಹಾರಗಳಿಗಾಗಿ ಶ್ರೇಷ್ಠತಾ ಕೇಂದ್ರ’ ಸ್ಥಾಪಿಸಲು ಇನ್ಫೋಸಿಸ್ ಟೆಕ್ನಾಲಜೀಸ್ ಮತ್ತು ಆರ್ಹಸ್ ಯೂನಿವರ್ಸಿಟಿ ನಡುವಿನ ಒಪ್ಪಂದ

ಸಿ. ಕಾರ್ಯತಂತ್ರದ ಸಹಕಾರದ ಬಗೆಗಿನ ತಿಳಿವಳಿಕೆಯು ಪರಿಹಾರಗಳ ಕುರಿತು ಜ್ಞಾನ ಹಂಚಿಕೆಯನ್ನು ಉತ್ತೇಜಿಸಲು ಮತ್ತು ಆರ್ಥಿಕತೆಯ ಹಸಿರು ಪರಿವರ್ತನೆಯ ಕುರಿತು ಸಂಶೋಧನೆಯನ್ನು ಸುಲಭಗೊಳಿಸಲು 'ಅಬ್ಸರ್ವರ್ ರಿಸರ್ಚ್ ಫೌಂಡೇಶನ್' ಮತ್ತು 'ಸ್ಟೇಟ್ ಆಫ್ ಗ್ರೀನ್' ನಡುವಿನ ತಿಳಿವಳಿಕೆ ಒಪ್ಪಂದ

***



(Release ID: 1762558) Visitor Counter : 215