ಗೃಹ ವ್ಯವಹಾರಗಳ ಸಚಿವಾಲಯ
ʻಆಜಾ಼ದಿ ಕಾ ಅಮೃತ ಮಹೋತ್ಸವ'ದ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ (ಎನ್ಎಸ್ಜಿ) ಅಖಿಲ ಭಾರತ ಕಾರು ರ‍್ಯಾಲಿ 'ಸುರ‍್ಶನ ಭಾರತ್ ಪರಿಕ್ರಮ'ಕ್ಕೆ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಿಂದ ಶನಿವಾರ ಚಾಲನೆ ನೀಡಲಿದ್ದಾರೆ
ದಂಡಿ, ಈಶಾನ್ಯ ಭಾರತ ಮತ್ತು ಲೇಹ್ ನಿಂದ ಕನ್ಯಾಕುಮಾರಿಯವರೆಗೆ ದೇಶದ ವಿವಿಧ ಭಾಗಗಳಿಂದ ಶುರುವಾದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಸೈಕಲ್ ರ‍್ಯಾಲಿಗಳನ್ನು ಶ್ರೀ ಅಮಿತ್ ಶಾ ಸ್ವಾಗತಿಸಲಿದ್ದಾರೆ ಮತ್ತು ಈ ರ‍್ಯಾಲಿಯು ಶನಿವಾರ ನವದೆಹಲಿಯಲ್ಲಿ ಸಂಪನ್ನವಾಗಲಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರಕಾರವು ʻಅಜಾ಼ದಿ ಕಾ ಅಮೃತ ಮಹೋತ್ಸವʼವನ್ನು ಆಚರಿಸುತ್ತದೆ
ಟೋಕಿಯೋ ಒಲಿಂಪಿಕ್ ಪದಕ ವಿಜೇತರಾದ ಶ್ರೀ ನೀರಜ್ ಚೋಪ್ರಾ, ಶ್ರೀ ರವಿ ಕುಮಾರ್ ದಹಿಯಾ ಮತ್ತು ಶ್ರೀ ಭಜರಂಗ ಪುನಿಯಾ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ
೭,೫೦೦ ಕಿ.ಮೀ. ಉದ್ದದ ಪ್ರಯಾಣದ ವೇಳೆ, `ಎನ್ಎಸ್ಜಿ ಕಾರು ರ‍್ಯಾ ಲಿಯು ೧೨ ರಾಜ್ಯಗಳ ೧೮ ನಗರಗಳಲ್ಲಿ ರಾಷ್ಟ್ರದ ಸ್ವಾತಂತ್ರ‍್ಯ ಚಳವಳಿ ಮತ್ತು ಸ್ವಾತಂತ್ರ‍್ಯ ಹೋರಾಟಗಾರರಿಗೆ ಸಂಬಂಧಿಸಿದ ಪ್ರಮುಖ ಮತ್ತು ಐತಿಹಾಸಿಕ ಸ್ಥಳಗಳ ಮೂಲಕ ಹಾದುಹೋಗಲಿದೆ ಮತ್ತು ಅಕ್ಟೋಬರ್ ೩೦ ರಂದು ನವದೆಹಲಿಯ ಪೊಲೀಸ್ ಸ್ಮಾರಕದಲ್ಲಿ ಕೊನೆಗೊಳ್ಳಲಿದೆ
ಆಗಸ್ಟ್ ೧೫ರಂದು ಪ್ರಾರಂಭವಾದ ಸಿಎಪಿಎಫ್’ ಅಧಿಕಾರಿಗಳು ಮತ್ತು ಯೋಧರು ಸೇರಿದಂತೆ ಸುಮಾರು ೯೦೦ ಸೈಕಲ್ ಸವಾರರನ್ನು ಒಳಗೊಂಡ ಸೈಕಲ್ ರ‍್ಯಾಲಿಗಳು ೨೧ ರಾಜ್ಯಗಳ ಮೂಲಕ ೪೧,೦೦೦ ಕಿ.ಮೀ. ಕ್ರಮಿಸಿ ದಿಲ್ಲಿ ತಲುಪಲಿವೆ
Posted On:
01 OCT 2021 3:36PM by PIB Bengaluru
ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಅಕ್ಟೋಬರ್ ಶನಿವಾರ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಿಂದ ರಾಷ್ಟ್ರೀಯ ಭದ್ರತಾ ಪಡೆಯ (ಎನ್ಎಸ್ಜಿ) ಅಖಿಲ ಭಾರತ ಕಾರು ರ‍್ಯಾ ಲಿ 'ಸುರ‍್ಶನ ಭಾರತ್ ಪರಿಕ್ರಮ'ಕ್ಕೆ ಚಾಲನೆ ನೀಡಲಿದ್ದಾರೆ. ಭಾರತದ ಸ್ವಾತಂತ್ರ‍್ಯದ ೭೫ನೇ ರ‍್ಷಾಚರಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ 'ಆಜಾ಼ದಿ ಕಾ ಅಮೃತ ಮಹೋತ್ಸವ'ದ ಭಾಗವಾಗಿ ಈ ರ‍್ಯಾ ಲಿ ಆಯೋಜಿಸಲಾಗಿದೆ. ಇದೇ ವೇಳೆ, ಶ್ರೀ ಅಮಿತ್ ಶಾ ಅವರು ಶನಿವಾರ ನವದೆಹಲಿಯಲ್ಲಿ ಸಮಾಪ್ತಿಗೊಳ್ಳಲಿರುವ ದಾಂಡಿ, ಈಶಾನ್ಯ ಮತ್ತು ಲೇಹ್ ನಿಂದ ಕನ್ಯಾಕುಮಾರಿಯವರೆಗಿನ ದೇಶದ ವಿವಿಧ ಭಾಗಗಳಿಂದ ಪ್ರಾರಂಭವಾದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಸೈಕಲ್ ರ‍್ಯಾ ಲಿಗಳನ್ನು ಬರಮಾಡಿಕೊಳ್ಳಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತರಾದ ಶ್ರೀ ನೀರಜ್ ಚೋಪ್ರಾ, ಶ್ರೀ ರವಿ ಕುಮಾರ್ ದಹಿಯಾ ಮತ್ತು ಶ್ರೀ ಭಜರಂಗ ಪುನಿಯಾ ಅವರು ಈ ಸಂರ‍್ಭದಲ್ಲಿ ಗೌರವಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭಾರತ ಸರಕಾರದ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಪಡೆಗಳು ಈ ಸಂರ‍್ಭ ಉಪಸ್ಥಿತರಿರಲಿದ್ದಾರೆ.
ಹುತಾತ್ಮರು ಮತ್ತು ಸ್ವಾತಂತ್ರ‍್ಯ ಹೋರಾಟಗಾರರ ಸ್ಫರ‍್ತಿ ಮತ್ತು ತ್ಯಾಗವನ್ನು ಇಂದಿನ ಯುವಜನರಲ್ಲಿ ಪುನರುಜ್ಜೀವಗೊಳಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರಕಾರವು ʻಆಜಾ಼ದಿ ಕಾ ಅಮೃತ ಮಹೋತ್ಸವʼವನ್ನು ಆಚರಿಸುತ್ತಿದೆ. ʻಎನ್ಎಸ್ಜಿʼಯ ಕಾರು ರ‍್ಯಾ ಲಿಯು ಅದರ ೭,೫೦೦ ಕಿ.ಮೀ. ಸುದರ‍್ಘ ಪ್ರಯಾಣದ ಸಮಯದಲ್ಲಿ, ದೇಶದ ಸ್ವಾತಂತ್ರ‍್ಯ ಚಳುವಳಿ ಮತ್ತು ಸ್ವಾತಂತ್ರ‍್ಯ ಹೋರಾಟಗಾರರಿಗೆ ಸಂಬಂಧಿಸಿದ ಪ್ರಮುಖ ಮತ್ತು ಐತಿಹಾಸಿಕ ಸ್ಥಳಗಳ ಮೂಲಕ ಹಾದುಹೋಗಲಿದೆ. ಅಕ್ಟೋಬರ್ ೩೦, ೨೦೨೧ರಂದು ನವದೆಹಲಿಯ ಪೊಲೀಸ್ ಸ್ಮಾರಕದಲ್ಲಿ ಸಮಾಪ್ತಿಗೊಳ್ಳಲಿದೆ. ʻಎನ್ಎಸ್ಜಿʼಯ ಕಾರು ರ‍್ಯಾ ಲಿ ರಾಷ್ಟ್ರದ ೧೨ ರಾಜ್ಯಗಳ ೧೮ ನಗರಗಳ ಮೂಲಕ ಹಾದುಹೋಗಲಿದೆ ಮತ್ತು ಕಾಕೋರಿ ಸ್ಮಾರಕ (ಲಖನೌ), ಭಾರತ್ ಮಾತಾ ಮಂದಿರ (ವಾರಾಣಸಿ), ನೇತಾಜಿ ಭವನ್ ಬ್ಯಾರಕ್ಪೋರ್ (ಕೋಲ್ಕತ್ತಾ), ಸ್ವರಾಜ್ ಆಶ್ರಮ (ಭುವನೇಶ್ವರ), ತಿಲಕ್ ಘಾಟ್ (ಚೆನ್ನೈ), ಫ್ರೀಡಂ ಪರ‍್ಕ್ (ಬೆಂಗಳೂರು), ಮಣಿ ಭವನ್ / ಆಗಸ್ಟ್ ಕ್ರಾಂತಿ ಮೈದಾನ (ಮುಂಬೈ) ಮತ್ತು ಸಾಬರಮತಿ ಆಶ್ರಮ (ಅಹಮದಾಬಾದ್) ನಂತಹ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಿದೆ.
ಆಜಾ಼ದಿ ಕಾ ಅಮೃತ್ ಮಹೋತ್ಸವದ ನೆನಪಿಗಾಗಿ ಕೇಂದ್ರ ಸಶಸ್ತ್ರ ಭದ್ರತಾ ಪಡೆಗಳು ದೇಶದ ವಿವಿಧ ಭಾಗಗಳಲ್ಲಿ ಸೈಕಲ್ ರ‍್ಯಾ ಲಿಗಳನ್ನು ಆಯೋಜಿಸಿವೆ. ಅಧಿಕಾರಿಗಳು ಮತ್ತು ಯೋಧರು ಸೇರಿದಂತೆ ಸುಮಾರು ೯೦೦ ಸೈಕಲ್ ಸವಾರರನ್ನು ಒಳಗೊಂಡ ಆಗಸ್ಟ್ ೧೫ರಂದು ಪ್ರಾರಂಭವಾದ `ಸಿಎಪಿಎಫ್’ ಸೈಕಲ್ ರ‍್ಯಾ ಲಿ ಯನ್ನು ೨೧ ರಾಜ್ಯಗಳ ಮೂಲಕ ಹಾದು, ಸುಮಾರು ೪೧,೦೦೦ ಕಿ.ಮೀ ದೂರವನ್ನು ಕ್ರಮಿಸಿ ದೆಹಲಿಯನ್ನು ತಲುಪಲಿದೆ. ʻಇಂಡೋ-ಟಿಬೆಟಿಯನ್ ಬರ‍್ಡರ್ ಪೊಲೀಸ್ʼ ಪಡೆ ಒಂದು ರ‍್ಯಾ ಲಿ ಯನ್ನು ಆಯೋಜಿಸಿದರೆ, ಕೇಂದ್ರ ಮೀಸಲು ಪೊಲೀಸ್ ಪಡೆ ನಾಲ್ಕು, ʻಸಶಸ್ತ್ರ ಸೀಮಾ ಬಲ್ʼ ಹತ್ತುಗಳು, ಅಸ್ಸಾಂ ರೈಫಲ್ಸ್ ಒಂದು ರ‍್ಯಾ ಲಿಯನ್ನು ಆಯೋಜಿಸಿದೆ. ಇದೇ ವೇಳೆ, ʻಕೇಂದ್ರ ಕೈಗಾರಿಕಾ ಭದ್ರತಾ ಪಡೆʼ ಒಂಬತ್ತು ರ‍್ಯಾ ಲಿಗಳನ್ನು ಆಯೋಜಿಸಿತು ಮತ್ತು ಗಡಿ ಭದ್ರತಾ ಪಡೆ ಹದಿನೈದು ಸೈಕಲ್ ರ‍್ಯಾ ಲಿ ಗಳನ್ನು ಆಯೋಜಿಸಿದೆ.
ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಈ ರ‍್ಯಾ ಲಿ ಗಳನ್ನು ಆಯೋಜಿಸಲಾಗಿದೆ. ದೇಶದ ಸ್ವಾತಂತ್ರ‍್ಯದ ೭೫ನೇ ರ‍್ಷವನ್ನು 'ಆಜಾ಼ದಿ ಕಾ ಅಮೃತ ಮಹೋತ್ಸವ'ವಾಗಿ ಆಚರಿಸುವುದು ಮತ್ತು ಆ ಮೂಲಕ ಸ್ವಾತಂತ್ರ‍್ಯ ಹೋರಾಟಕ್ಕೆ ಸಂಬಂಧಿಸಿದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಸಹೋದರತ್ವದ ಸಂದೇಶವನ್ನು ಸಾರುವುದು, ಯುವಕರನ್ನು ಭೇಟಿ ಮಾಡುವ ಮೂಲಕ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವುದು ಮತ್ತು ದೇಶ ಪ್ರೇಮದ ಸ್ಫರ‍್ತಿ ತುಂಬುವುದು, ಸ್ವಾತಂತ್ರ‍್ಯ ಚಳವಳಿಯ ಎಲ್ಲ ಹೋರಾಟಗಾರರು ಮತ್ತು ಹುತಾತ್ಮರಿಗೆ ಗೌರವ ನಮನ ಸಲ್ಲಿಸುವುದು ಮತ್ತು ನಾಗರಿಕರು ಹಾಗೂ ಯುವಕರಲ್ಲಿ ರಾಷ್ಟ್ರೀಯ ಏಕೀಕರಣ, ದೇಶಪ್ರೇಮ ಮತ್ತು ಸಹೋದರತ್ವದ ಮನೋಭಾವವನ್ನು ಬಲಪಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ.
***
(Release ID: 1760688)
Visitor Counter : 275