ಗೃಹ ವ್ಯವಹಾರಗಳ ಸಚಿವಾಲಯ

ರಾಜ್ಯ ವಿಪತ್ತು ಪರಿಹಾರ ನಿಧಿಗೆ (ಎಸ್‌ಡಿಆರ್‌ಎಫ್) ಕೇಂದ್ರ ಪಾಲಿನ 2ನೇ ಕಂತನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಿದ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


ಮೋದಿ ಸರಕಾರದ ಈ ಕ್ರಮವು ಕೋವಿಡ್-19ನಿಂದ ಮೃತಪಟ್ಟವರ ಸಂಬಂಧಿಕರಿಗೆ ಪರಿಹಾರ ನೀಡಿಕೆ ವೆಚ್ಚವನ್ನು ಪೂರೈಸಲು ರಾಜ್ಯ ಸರಕಾರಗಳು ತಮ್ಮ ʻಎಸ್‌ಡಿಆರ್‌ಎಫ್ʼನಲ್ಲಿ ಸಾಕಷ್ಟು ಹಣ ಹೊಂದಲು ಅನುಕೂಲ ಮಾಡಿಕೊಡುತ್ತದೆ

ಭಾರತ ಸರಕಾರವು 25.09.2021ರಂದು ಹೊರಡಿಸಿದ ತನ್ನ ಆದೇಶದಲ್ಲಿ ʻಎಸ್‌ಡಿಆರ್‌ಎಫ್ʼ ಅಡಿಯಲ್ಲಿ ನೀಡಬಹುದಾದ ಸಹಾಯದ ಅಂಶಗಳು ಮತ್ತು ನಿಯಮಗಳನ್ನು ಪರಿಷ್ಕರಿಸಿತ್ತು ಮತ್ತು ಆ ಮೂಲಕ ಕೋವಿಡ್-19 ಕಾರಣದಿಂದಾಗಿ ಮೃತಪಟ್ಟವರ ಸಂಬಂಧಿಕರಿಗೆ ಪರಿಹಾರ ಪಾವತಿಯನ್ನು ಮಂಜೂರು ಮಾಡಲು ಅವಕಾಶ ಕಲ್ಪಿಸಿತ್ತು.

ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯದ ಆದೇಶಾನುಸಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಹೊರಡಿಸಿದ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ಅನುವು ಮಾಡಿಕೊಡಲಾಗಿದೆ

Posted On: 01 OCT 2021 1:08PM by PIB Bengaluru

ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್) ಅಡಿಯಲ್ಲಿ ಸಹಾಯದ ಅಂಶಗಳು ಮತ್ತು ನಿಯಮಗಳನ್ನು ಪರಿಷ್ಕರಿಸಿ 25.09.2021ರಂದು ಭಾರತ ಸರಕಾರವು ಆದೇಶ ಹೊರಡಿಸಿತ್ತು, ಆ ಮೂಲಕ ಕೋವಿಡ್-19 ಕಾರಣದಿಂದಾಗಿ ಮೃತಪಟ್ಟವರ ಸಂಬಂಧಿಕರಿಗೆ ಪರಿಹಾರ ಪಾವತಿಯನ್ನು ಮಂಜೂರು ಮಾಡಲು ಅವಕಾಶ ಕಲ್ಪಿಸಿತ್ತು. ಸರ್ವೋಚ್ಛ ನ್ಯಾಯಾಲಯಲ್ಲಿ ಸಲ್ಲಿಸಲಾದ ರಿಟ್‌ ಅರ್ಜಿಗಳ (ಸಿವಿಲ್ ಸಂಖ್ಯೆ 539/2021 ಮತ್ತು 554/2021) ವಿಚಾರಣೆ ವೇಳೆ 30.06.2021ರಂದು ನ್ಯಾಯಾಲಯ ನೀಡಿದ ಆದೇಶಾನುಸಾರ ʻರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರʼ (ಎನ್‌ಡಿಎಂಎ) ದಿನಾಂಕ 11.09.2021ರಂದು ಹೊರಡಿಸಿದ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ʻಎಸ್‌ಡಿಆರ್‌ಎಫ್ʼ ನಿಯಮಗಳ ಬದಲಾವಣೆಗೆ ಇದರಿಂದ ಅನುವಾಗಲಿದೆ. 
ಮೋದಿ ಸರಕಾರದ ಈ ಕ್ರಮವು ರಾಜ್ಯ ಸರಕಾರಗಳು ತಮ್ಮ ʻಎಸ್‌ಡಿಆರ್‌ಎಫ್ʼನಲ್ಲಿ ಸಾಕಷ್ಟು ಹಣವನ್ನು ಹೊಂದಲು ಅನುಕೂಲ ಮಾಡಿಕೊಡುತ್ತದೆ. ʻಎಸ್‌ಡಿಆರ್‌ಎಫ್‌ʼನಲ್ಲಿ ಕೇಂದ್ರ ಪಾಲಿನ 2ನೇ ಕಂತಿನ 7,274.40 ಕೋಟಿ ರೂ.ಗಳನ್ನು 23 ರಾಜ್ಯಗಳಿಗೆ ಮುಂಚಿತವಾಗಿ ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಅನುಮೋದನೆ ನೀಡಿದ್ದಾರೆ.  5 ರಾಜ್ಯಗಳಿಗೆ 1,599.20 ಕೋಟಿ ರೂ.ಗಳ ಮೋತ್ತದ 2ನೇ ಕಂತನ್ನು ಮುಂಚಿತವಾಗಿ  ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಕೋವಿಡ್-19 ಕಾರಣದಿಂದಾಗಿ ಮೃತಪಟ್ಟವರ ಸಂಬಂಧಿಕರಿಗೆ ಪರಿಹಾರ ನೀಡಲು ಮತ್ತು ಇತರ ಅಧಿಸೂಚಿತ ವಿಪತ್ತುಗಳಿಗೆ ಪರಿಹಾರ ಒದಗಿಸುವ ಸಲುವಾಗಿ, ರಾಜ್ಯ ಸರಕಾರಗಳು ತಮ್ಮ ʻಎಸ್‌ಡಿಆರ್‌ಎಫ್‌ʼ ನಿಧಿಯಲ್ಲಿ  ಹಾಲಿ ಲಭ್ಯವಿರುವ ಆರಂಭಿಕ ಬಾಕಿಯ ಮೊತ್ತದ ಜೊತೆಗೆ, 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ರಾಜ್ಯ ಸರಕಾರಗಳ ಪಾಲೂ ಸೇರಿದಂತೆ ಒಟ್ಟು 23,186.40 ಕೋಟಿ ರೂ.ಗಳನ್ನು ʻಎಸ್‌ಡಿಆರ್‌ಎಫ್ʼನಲ್ಲಿ ಹೊಂದಿರಲಿವೆ

***

 



(Release ID: 1760015) Visitor Counter : 226