ಪ್ರಧಾನ ಮಂತ್ರಿಯವರ ಕಛೇರಿ

ಕ್ವಾಡ್ ಸಭೆಯ ಉದ್ಘಾಟನೆಯಲ್ಲಿ ಪ್ರಧಾನ ಮಂತ್ರಿ ಅವರ ಪ್ರತಿಕ್ರಿಯೆ

Posted On: 25 SEP 2021 4:46AM by PIB Bengaluru

ಅಧ್ಯಕ್ಷ ಬೈಡೆನ್!

ಪ್ರಧಾನ ಮಂತ್ರಿ ಮೊರಿಸನ್!

ಪ್ರಧಾನ ಮಂತ್ರಿ ಸುಗಾ!

ಮೊದಲ ಭೌತಿಕ ಕ್ವಾಡ್ ಶೃಂಗವನ್ನು ಸಂಘಟಿಸಲು ಕೈಗೊಂಡ ಚಾರಿತ್ರಿಕ ಉಪಕ್ರಮಗಳಿಗಾಗಿ ಅಧ್ಯಕ್ಷ ಬೈಡೆನ್ ಅವರಿಗೆ ಬಹಳ ಕೃತಜ್ಞತೆಗಳು

2004 ರ ಸುನಾಮಿ ಬಳಿಕ ಇಂಡೋ -ಫೆಸಿಫಿಕ್ ವಲಯಕ್ಕೆ ಸಹಾಯ ಮಾಡಲು ನಾವು ನಾಲ್ಕು ದೇಶಗಳು ಮೊದಲ ಬಾರಿಗೆ ಒಗ್ಗೂಡಿದೆವು.

ಇಂದು ಜಗತ್ತು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವಾಗ ಚತುರ್ಭುಜವಾಗಿ (ಕ್ವಾಡ್) ನಾವು ಮತ್ತೊಮ್ಮೆ ಮಾನವತೆಯ ಹಿತಾಸಕ್ತಿಗಾಗಿ ಕೈಜೋಡಿಸಿದ್ದೇವೆ.

ನಮ್ಮ ಕ್ವಾಡ್ ಲಸಿಕೆ ಉಪಕ್ರಮ ಇಂಡೋ –ಫೆಸಿಫಿಕ್ ದೇಶಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಪರಸ್ಪರ ಹಂಚಿಕೊಂಡ ಪ್ರಜಾಪ್ರಭುತ್ವದ ಮೌಲ್ಯಗಳಿಂದಾಗಿ ಕ್ವಾಡ್ ಧನಾತ್ಮಕ ಚಿಂತನೆಯೊಂದಿಗೆ ಮತ್ತು ಧನಾತ್ಮಕ ಧೋರಣೆಯೊಂದಿಗೆ ಮುನ್ನಡೆ ಸಾಧಿಸಲು ನಿರ್ಧರಿಸಿದೆ.

ಅದು ಪೂರೈಕೆ ಸರಪಳಿ ಇರಲಿ, ಅಥವಾ ಜಾಗತಿಕ ಭದ್ರತೆ ಇರಲಿ, ವಾತಾವರಣ ಕ್ರಮಗಳಿರಲಿ ಅಥವಾ ಕೋವಿಡ್ -19 ಅಥವಾ ತಂತ್ರಜ್ಞಾನದಲ್ಲಿ ಸಹಕಾರ ಇರಲಿ, ಈ ಎಲ್ಲಾ ವಿಷಯಗಳನ್ನು ನನ್ನ ಸಹೋದ್ಯೋಗಿಗಳ ಜೊತೆ ಚರ್ಚಿಸಲು ನಾನು ಬಹಳ ಸಂತೋಷಪಡುತ್ತೇನೆ.

ನಮ್ಮ ಕ್ವಾಡ್ “ಜಾಗತಿಕ ಒಳಿತಿಗಾಗಿರುವ ಶಕ್ತಿಯಾಗಿ” ತನ್ನ ಪಾತ್ರವನ್ನು ನಿಭಾಯಿಸಲು ಕಾರ್ಯತತ್ಪರವಾಗಲಿದೆ.

ಕ್ವಾಡ್ ನಲ್ಲಿ ನಮ್ಮ ಸಹಕಾರ ಇಂಡೋ-ಫೆಸಿಫಿಕ್ ಮತ್ತು ಇಡೀ ಜಗತ್ತಿನಲ್ಲಿ ಶಾಂತಿ ಮತ್ತು ಸಮೃದ್ಧಿಯನು ಖಾತ್ರಿಪಡಿಸುತ್ತದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.

ಧನ್ಯವಾದಗಳು.

ಘೋಷಣೆ: ಪ್ರಧಾನ ಮಂತ್ರಿ ಅವರ ಪ್ರತಿಕ್ರಿಯೆಯ ಸರಿಸುಮಾರಾದ ಭಾಷಾಂತರ ಇದು. ಮೂಲ ಪ್ರತಿಕ್ರಿಯೆಯನ್ನು ಹಿಂದಿಯಲ್ಲಿ ನೀಡಲಾಗಿದೆ.

***



(Release ID: 1758997) Visitor Counter : 174