ಸಂಸ್ಕೃತಿ ಸಚಿವಾಲಯ
azadi ka amrit mahotsav

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ದೇಶದ ಮೊದಲ ಭಾರತೀಯ ಮಹಿಳಾ ಫೆನ್ಸಿಂಗ್‌ ಪಟು ಭವಾನಿ ದೇವಿ ಅವರ ಕತ್ತಿಯು ಈಗ ಪ್ರಧಾನಮಂತ್ರಿಯವರು ಸ್ವೀಕರಿಸಿದ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಇ-ಹರಾಜಿನ ವಸ್ತುಗಳಲ್ಲಿ ಒಂದಾಗಿದೆ

ಈ ಹರಾಜು ಪ್ರಕ್ರಿಯೆಯಲ್ಲಿ ಬಂದ ಹಣವು 'ನಮಾಮಿ ಗಂಗೆ ನಿಧಿʼಗೆ ಸೇರುತ್ತದೆ

Posted On: 28 SEP 2021 2:17PM by PIB Bengaluru

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಫೆನ್ಸಿಂಗ್‌ ಪಟುವೆಂಬ ಹೆಗ್ಗಳಿಕೆಗೆ ಭವಾನಿ ದೇವಿ ಅವರು ಪಾತ್ರರಾಗಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ತಮ್ಮ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಅವರು ಇತಿಹಾಸ ನಿರ್ಮಿಸಿದರು. ಯಾವುದೇ ಭಾರತೀಯ ಮಹಿಳಾ ಫೆನ್ಸರ್‌ ಹಂತವನ್ನು ತಲುಪದ ಕಾರಣ ಇದೊಂದು ಅಮೋಘ ಸಾಧನೆಯಾಗಿದೆ. ಮುಂದಿನ ಪಂದ್ಯದಲ್ಲಿ ಪದಕದ ಸ್ಪರ್ಧೆಯಿಂದ ಅವರು ಹೊರಬಿದ್ದರೂ, ಭಾರತದ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಹುರಿದುಂಬಿಸಲು ಅಷ್ಟು ಸಾಕಾಗಿತ್ತು.

ತಮಿಳುನಾಡು ಮೂಲದ ಭವಾನಿ ದೇವಿಯ ಪೂರ್ಣ ಹೆಸರು ಚಡಲವಾಡ  ಆನಂದ್  ಸುಂದರ ರಾಮನ್ ಭವಾನಿ ದೇವಿ. ಅವರು 2003ರಲ್ಲಿ ತಮ್ಮ ಕ್ರೀಡಾ ವೃತ್ತಿಜೀವನವನ್ನು ಪ್ರಾರಂಭಿಸಿದರು, ಆದರೆ ಫೆನ್ಸಿಂಗ್‌ಲ್ಲಿ ಆಸಕ್ತಿ ಹೊಂದಿರಲಿಲ್ಲ. ಭವಾನಿ ದೇವಿ ಅವರ ಫೆನ್ಸಿಂಗ್ ಆಯ್ಕೆ ಹಿಂದೆ ಬಹಳ ಆಸಕ್ತಿದಾಯಕ ಕಥೆ ಇದೆ. ಅವರು ಶಾಲಾ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದಾಗ, ಪ್ರತಿ ತರಗತಿಯಿಂದ ಕೇವಲ ಆರು ಮಕ್ಕಳನ್ನು ಮಾತ್ರ ಆಟಗಳಿಗೆ ಆಯ್ಕೆ ಮಾಡಲಾಗುತ್ತದೆ ಎಂಬ ವಿಷಯ ಅವರಿಗೆ ಗೊತ್ತಾಯಿತು. ಭವಾನಿ ಸರದಿ ಬರುವ ಹೊತ್ತಿಗೆ ಎಲ್ಲ ಕ್ರೀಡೆಗಳಿಗೂ ಮಕ್ಕಳ ಆಯ್ಕೆ ಮುಗಿಯುತ್ತಿತ್ತು. ವಿಧಿ ನಿರ್ಧರಿತವೋ ಎಂಬಂತೆ, ಯಾವ ಮಗುವೂ ಫೆನ್ಸಿಂಗ್‌ಗೆ ನೋಂದಾಯಿಸಿ ಕೊಂಡಿರಲಿಲ್ಲ. ಯಾವ ಹಿಂಜರಿಕೆಯನ್ನೂ ತೋರದೆ ತಕ್ಷಣ ಅವರು ಹೊಸ ಆಟಕ್ಕೆ ನೋಂದಾಯಿಸಿಕೊಂಡು ತರಬೇತಿ ಪ್ರಾರಂಭಿಸಿದರು. ನಂತರ ನಡೆದಿದ್ದೆಲ್ಲಾ ಇತಿಹಾಸ.

ಅವರು ಫೆನ್ಸಿಂಗ್‌ನಲ್ಲಿ ಎಂಟು ಬಾರಿ ರಾಷ್ಟ್ರೀಯ ಚಾಂಪಿಯನ್. ಒಲಿಂಪಿಕ್ಸ್‌ನಲ್ಲಿ ತಮ್ಮ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಭವಾನಿ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಸನ್ಮಾನಿಸಲ್ಪಟ್ಟ ಹಲವು ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ಸಂದರ್ಭದಲ್ಲಿ, ಅವರು ತಾವು ಬಳಸಿದ ಅದೇ ಕತ್ತಿಯನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿದರು.

ಈಗ ದೇಶದ ಹೆಮ್ಮೆಯಾಗಿರುವ ಐತಿಹಾಸಿಕ ಕತ್ತಿಯನ್ನು ನಿಮ್ಮದಾಗಿಸಿ ಕೊಳ್ಳಬಹುದು. ನೀವು ಕ್ಷಣವನ್ನು ಜೀವನಪರ್ಯಂತ ಪ್ರೀತಿಸಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಕರಿಸಿದ ಉಡುಗೊರೆಗಳು ಮತ್ತು ಸ್ಮರಣಿಕೆಗಳ -ಹರಾಜಿನ ವಸ್ತುಗಳ ಪಟ್ಟಿಗೆ ಕತ್ತಿಯನ್ನು ಸೇರಿಸಲಾಗಿದೆ. ನೀವು ಕತ್ತಿಯನ್ನು ಪಡೆಯಲು ಬಯಸಿದರೆ, ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7, 2021ರವರೆಗೆ pmmementos.gov.in/ ಪೋರ್ಟಲ್‌ ಮೂಲಕ ನಡೆಯುತ್ತಿರುವ -ಹರಾಜಿನಲ್ಲಿ ಭಾಗವಹಿಸಿ.

ಹಿಂದೆಯೂ ಪ್ರಧಾನಿ ಪಡೆದ ಉಡುಗೊರೆಗಳನ್ನು ಹರಾಜಿಗೆ ಇಡಲಾಗಿತ್ತು. ಕೊನೆಯ ಬಾರಿಗೆ ಅಂತಹ ಹರಾಜು ನಡೆದದ್ದು 2019ರಲ್ಲಿ. ಹರಾಜಿನಲ್ಲಿ ಸರಕಾರವು 15.13 ಕೋಟಿ ರೂ. ಗಳಿಸಿತುಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿರ್ದೇಶದಂತೆ ಸಂಪೂರ್ಣ ಮೊತ್ತವನ್ನು ಗಂಗಾ ನದಿಯನ್ನು ಶುದ್ಧ ಮತ್ತು ಪವಿತ್ರಗೊಳಿಸುವ ಉದ್ದೇಶದ ʻನಮಾಮಿ ಗಂಗೆ ನಿಧಿʼಗೆ ಜಮಾಮಾಡಲಾಯಿತು. ಬಾರಿಯೂ ಹರಾಜಿನ ಮೂಲಕ ಸಂಗ್ರಹವಾಗುವ ಆದಾಯವು 'ನಮಾಮಿ ಗಂಗೆ ನಿಧಿʼಗೆ ಸೇರಲಿದೆ.

***(Release ID: 1758970) Visitor Counter : 115