ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಯುಷ್ಮಾನ್ ಭಾರತ್  ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಗೆ 3  ವರ್ಷ ಪೂರ್ಣ; ಪ್ರಧಾನ ಮಂತ್ರಿ ಶ್ಲಾಘನೆ

Posted On: 23 SEP 2021 4:15PM by PIB Bengaluru

ವಿಶ್ವದಲ್ಲೇ ಅತಿದೊಡ್ಡ ಆರೋಗ್ಯ ಸಂರಕ್ಷಣಾ ಯೋಜನೆಯಾಗಿರುವ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ ಆರಂಭವಾಗಿ ಮೂರು ವರ್ಷ ಪೂರ್ಣಗೊಳಿಸಿರುವುದಕ್ಕೆ  ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಮೈಗವ್ಇಂಡಿಯಾದಲ್ಲಿ ಉತ್ತರಿಸಿರುವ ಪ್ರಧಾನ ಮಂತ್ರಿ ಅವರು;
ಆರೋಗ್ಯ ಸಂಕ್ಷಣೆಯ ಮಹತ್ವ ಏನೆಂಬುದು ಇತ್ತೀಚಿನ ವರ್ಷಗಳಲ್ಲಿ ಎಲ್ಲರಿಗೂ ಮನವರಿಕೆಯಾಗಿದೆ. ಕೋವಿಡ್ ನಂತರದ ಕಾಲಘಟ್ಟದಲ್ಲಿ ಎಲ್ಲರೂ ಹೆಚ್ಚಾಗಿ ತಿಳಿದುಕೊಂಡಿದ್ದಾರೆ.
ನಮ್ಮ ನಾಗರೀಕರಿಗೆ ಗುಣಮಟ್ಟದ ಮತ್ತು ಕೈಗೆಟಕುವ ಬೆಲೆಗೆ ಆರೋಗ್ಯ ಸಂರಕ್ಷಣೆ ಒದಗಿಸುವುದು, ಖಾತ್ರಿಪಡಿಸುವುದು ನಮ್ಮ ಬದ್ಧತೆಯಾಗಿದೆ.
ಆಯಷ್ಮಾನ್ ಪಿಎಂ-ಜೆಎವೈ ಈ ಬದ್ಧತೆಯನ್ನು ಮತ್ತು ದ್ರಷ್ಟಿಕೋನವನ್ನು ನನಸು ಮಾಡುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.

***


(Release ID: 1757355) Visitor Counter : 254