ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ದೂರಸಂಪರ್ಕ ಇಲಾಖೆ ದೂರಸಂಪರ್ಕ ಸುಧಾರಣೆಗಳನ್ನು ಆರಂಭಿಸಿದ್ದು, ʻಕೆವೈಸಿʼ ಪ್ರಕ್ರಿಯೆಗಳನ್ನು ಸರಳಗೊಳಿಸಿದೆ

Posted On: 21 SEP 2021 8:03PM by PIB Bengaluru

ದೂರಸಂಪರ್ಕ ಖಾತೆ ಸಚಿವ ಶ್ರೀ ಅಶ್ವಿನಿ ವೈಷ್ಣವ್‌ ಅವರು ಇತ್ತೀಚೆಗೆ ಹೇಳಿದಂತೆ, "ತಳಮಟ್ಟದಲ್ಲಿರುವ ವರ್ಗಕ್ಕೆ ವಿಶ್ವದರ್ಜೆಯ ಅಂತರ್ಜಾಲ ಮತ್ತು ದೂರವಾಣಿ ಸಂಪರ್ಕ ಒದಗಿಸುವುದು ದೂರಸಂಪರ್ಕ ಸುಧಾರಣೆಗಳ ಗುರಿಯಾಗಿದೆ.” ಉದ್ದೇಶವನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ, ಭಾರತ ಸರಕಾರದ ಸಂವಹನ ಸಚಿವಾಲಯದ ದೂರಸಂಪರ್ಕ ಇಲಾಖೆಯು ಇಂದು ʻಕೆವೈಸಿʼ ಪ್ರಕ್ರಿಯೆಗಳನ್ನು ಸರಳೀಕರಿಸುವ ಸರಣಿ ಆದೇಶಗಳನ್ನು ಹೊರಡಿಸಿದ್ದು, ಮೂಲಕ ಸಂಪುಟವು 15.09.2021 ರಂದು ಘೋಷಿಸಿದ ದೂರಸಂಪರ್ಕ ಸುಧಾರಣೆಗಳಿಗೆ ಚಾಲನೆ ನೀಡಿದೆ.

ಪ್ರಸ್ತುತ, ಚಂದಾದಾರರು ಹೊಸ ಮೊಬೈಲ್ ಸಂಪರ್ಕವನ್ನು ಪಡೆಯಲು ಅಥವಾ ಪ್ರೀ ಪೇಯ್ಡ್‌ನಿಂದ ಪೋಸ್ಟ್ ಪೇಯ್ಡ್‌ಗೆ/ ಪೋಸ್ಟ್‌ ಪೇಯ್ಡ್‌ನಿಂದ ಪ್ರೀ ಪೇಯ್ಡ್‌ಗೆ ಮೊಬೈಲ್ ಸಂಪರ್ಕವನ್ನು ಪರಿವರ್ತಿಸಲು ತಮ್ಮ ಗುರುತು ಹಾಗೂ ವಿಳಾಸದ ಪುರಾವೆಯ ಮೂಲ ದಾಖಲೆಗಳೊಂದಿಗೆ ಮಾರಾಟ ಕೇಂದ್ರಕ್ಕೆ ಖುದ್ದು ಭೇಟಿ ನೀಡಿ ʻಕೆವೈಸಿʼ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಸೇವಾ ವಿತರಣೆಯು ಸಾಮಾನ್ಯ ಮಾನದಂಡವಾಗಿದ್ದು, ಹೆಚ್ಚಿನ ಗ್ರಾಹಕ ಸೇವೆಗಳನ್ನು ʻಒಟಿಪಿʼ ದೃಢೀಕರಣದೊಂದಿಗೆ ಇಂಟರ್ನೆಟ್ ಮೂಲಕ ನೀಡಲಾಗುತ್ತಿದೆ. ಕೋವಿಡ್ ಯುಗದಲ್ಲಿ ಚಂದಾದಾರರ ಅನುಕೂಲಕ್ಕಾಗಿ ಮತ್ತು ಸುಗಮ ವ್ಯವಹಾರಕ್ಕಾಗಿ ಸಂಪರ್ಕರಹಿತ ಸೇವೆಗಳನ್ನು ಉತ್ತೇಜಿಸುವುದು ಅಗತ್ಯವಾಗಿದೆ.

ಆಧಾರ್‌ ಪ್ರಾಧಿಕಾರದಿಂದ (ಯುಐಡಿಎಐ) ಜನಸಂಖ್ಯೆ ಸಂಬಂಧಿತ ವಿವರಗಳನ್ನು ವಿದ್ಯುನ್ಮಾನ ರೂಪದಲ್ಲಿ ಪಡೆಯಲು ಆಧಾರ್ ಸಂಖ್ಯೆ ಬಳಸುತ್ತಿದ್ದರೆಅಂತಹ ಸಂದರ್ಭದಲ್ಲಿ ಗ್ರಾಹಕರ ಸಮ್ಮತಿಯನ್ನು ಕಡ್ಡಾಯಗೊಳಿಸಲಾಗಿದೆ.

  ಹಿನ್ನೆಲೆಯಲ್ಲಿ ಸಂಪರ್ಕರಹಿತ, ಗ್ರಾಹಕ ಕೇಂದ್ರಿತ ಮತ್ತು ಸುರಕ್ಷಿತ ʻಕೆವೈಸಿʼ ಪ್ರಕ್ರಿಯೆಗಳನ್ನು ಜಾರಿಗೆ ತರಲು ತಕ್ಷಣದಿಂದ ಜಾರಿಯಾಗುವಂತೆ ದೂರ ಸಂಪರ್ಕ ಇಲಾಖೆ ಆದೇಶಗಳನ್ನು ಹೊರಡಿಸಿದೆ: -

) ʻಆಧಾರ್ʼ ಆಧಾರಿತ ʻ-ಕೆವೈಸಿʼ

ಹೊಸ ಮೊಬೈಲ್ ಸಂಪರ್ಕಗಳನ್ನು ನೀಡಲು ʻಆಧಾರ್ʼ ಆಧಾರಿತ ʻ-ಕೆವೈಸಿʼ ಪ್ರಕ್ರಿಯೆಯನ್ನು ಮರು ಪರಿಚಯಿಸಲಾಗಿದೆ. ಟೆಲಿಕಾಂ ಸೇವಾ ಪೂರೈಕೆದಾರರಿಗೆ ಪ್ರತಿ ಗ್ರಾಹಕ ದೃಢೀಕರಣಕ್ಕೆ ಯುಐಡಿಎಐ 1/- ರೂ. ಶುಲ್ಕ ವಿಧಿಸುತ್ತದೆ. ಇದು ಸಂಪೂರ್ಣ ಕಾಗದರಹಿತ ಮತ್ತು ಡಿಜಿಟಲ್ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಗ್ರಾಹಕರ ಭಾವಚಿತ್ರ ಸಮೇತ ಗ್ರಾಹಕನ ವಿವರಗಳನ್ನು ದೂರಸಂಪರ್ಕ ಸೇವಾ ಪೂರೈಕೆದಾರರು (ಟಿಎಸ್‌ಪಿ) ಯುಐಡಿಎಐನಿಂದ ಆನ್‌ಲೈನ್‌ನಲ್ಲಿ ಪಡೆದುಕೊಳ್ಳುತ್ತಾರೆ.

) ʻಸ್ವಯಂ-ಕೆವೈಸಿʼ

ವಿಧಾನದಲ್ಲಿ, ಗ್ರಾಹಕರಿಗೆ ಮೊಬೈಲ್ ಸಂಪರ್ಕವನ್ನು ನೀಡುವ ಕಾರ್ಯವನ್ನು ಅಪ್ಲಿಕೇಶನ್/ಪೋರ್ಟಲ್ ಆಧಾರಿತ ಆನ್‌ಲೈನ್ ಪ್ರಕ್ರಿಯೆಯ ಮೂಲಕ ಮಾಡಲಾಗುತ್ತದೆ. ಇದರಲ್ಲಿ ಗ್ರಾಹಕರು ಮನೆ/ಕಚೇರಿಯಲ್ಲಿ ಕುಳಿತು ಮೊಬೈಲ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದು ಮತ್ತು ʻಯುಐಡಿಎಐʼ ಅಥವಾ ʻಡಿಜಿಲಾಕರ್‌ʼನಿಂದ ವಿದ್ಯುನ್ಮಾನವಾಗಿ ದಾಖಲೆಗಳನ್ನು ಪರಿಶೀಲಿಸಿದ ಬಳಸಿಕೊಂಡು ʻಸಿಮ್ʼ ಅನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಬಹುದು.

) ಮೊಬೈಲ್ ಸಂಪರ್ಕವನ್ನು ಪ್ರೀಪೇಯ್ಡ್ ನಿಂದ ಪೋಸ್ಟ್ ಪೇಯ್ಡ್‌ಗೆ/ಪೋಸ್ಟ್‌ ಪೇಯ್ಡ್‌ನಿಂದ ಪ್ರೀ ಪೇಯ್ಡ್‌ಗೆ ʻಒಟಿಪಿʼ ಆಧಾರಿತವಾಗಿ ಪರಿವರ್ತನೆ

ʻಒಟಿಪಿʼ ಆಧಾರಿತ ಪರಿವರ್ತನೆ ಪ್ರಕ್ರಿಯೆಯ ಅನುಷ್ಠಾನದಿಂದ ಚಂದಾದಾರರು ತಮ್ಮ ಮನೆ/ಕಚೇರಿಯಲ್ಲೇ ಕುಳಿತು ʻಒಟಿಪಿʼ ಆಧಾರಿತ ದೃಢೀಕರಣದ ಮೂಲಕ ಮೊಬೈಲ್ ಸಂಪರ್ಕವನ್ನು ಪ್ರಿಪೇಯ್ಡ್ ನಿಂದ ಪೋಸ್ಟ್ ಪೇಯ್ಡ್‌ಗೆ ಅಥವಾ ಪೋಸ್ಟ್‌ ಪೇಯ್ಡ್‌ನಿಂದ ಪ್ರೀ ಪೇಯ್ಡ್‌ಗೆ ಪರಿವರ್ತಿಸಲು ಅನುವಾಗುತ್ತದೆ.

ಕುರಿತ ವಿವರವಾದ ಆದೇಶದ ಪ್ರತಿಗಳನ್ನು ದೂರಸಂಪರ್ಕ ಇಲಾಖೆ ವೆಬ್‌ಸೈಟ್‌ (ಲಿಂಕ್- https://dot.gov.in/relatedlinks/telecom-reforms-2021) ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

***


(Release ID: 1756940) Visitor Counter : 456