ನೀತಿ ಆಯೋಗ
'ಭಾರತದಲ್ಲಿ ನಗರ ಯೋಜನಾ ಸಾಮರ್ಥ್ಯದಲ್ಲಿ ಸುಧಾರಣೆಗಳು' ಕುರಿತ ವರದಿ ಬಿಡುಗಡೆ ಮಾಡಲಿರುವ ನೀತಿ ಆಯೋಗ
Posted On:
15 SEP 2021 1:45PM by PIB Bengaluru
ನೀತಿ ಆಯೋಗವು ನಾಳೆ ಸೆಪ್ಟೆಂಬರ್ 16ರಂದು 'ಭಾರತದಲ್ಲಿ ನಗರ ಯೋಜನಾ ಸಾಮರ್ಥ್ಯದಲ್ಲಿ ಸುಧಾರಣೆಗಳು' ಕುರಿತ ವರದಿಯನ್ನು ಬಿಡುಗಡೆ ಮಾಡಲಿದೆ.
ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಮತ್ತು ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ನೀತಿ ಆಯೋಗದ ಸಿಇಒ ಶ್ರೀ ಅಮಿತಾಬ್ ಕಾಂತ್ , ವಿಶೇಷ ಕಾರ್ಯದರ್ಶಿ ಡಾ.ಕೆ. ರಾಜೇಶ್ವರ ರಾವ್ ಹಾಗೂ ಸಂಬಂಧಪಟ್ಟ ಸಚಿವಾಲಯಗಳ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಿದ್ದಾರೆ.
ನೀತಿ ಆಯೋಗವು ಅಕ್ಟೋಬರ್ 2020ರಲ್ಲಿ 'ಭಾರತದಲ್ಲಿ ನಗರ ಯೋಜನಾ ಶಿಕ್ಷಣದಲ್ಲಿ ಸುಧಾರಣೆಗಳು' ಕುರಿತ ಸಲಹಾ ಸಮಿತಿಯನ್ನು ರಚಿಸಿತ್ತು. ಸಮಿತಿಯು ಈ ವರದಿಯೊಂದಿಗೆ ತನ್ನ ಉದ್ದೇಶವನ್ನು ಪೂರ್ಣಗೊಳಿಸಿದೆ.
ಆರೋಗ್ಯಕರ ನಗರಗಳನ್ನು ಯೋಜಿಸಲು ಉಪಕ್ರಮಗಳಾದ - ನಗರ ಭೂಮಿಯ ಗರಿಷ್ಠ ಬಳಕೆ, ಮಾನವ ಸಂಪನ್ಮೂಲ ಸಾಮರ್ಥ್ಯವನ್ನು ಹೆಚ್ಚಿಸುವುದು, ನಗರ ಆಡಳಿತವನ್ನು ಬಲಪಡಿಸುವುದು, ಸ್ಥಳೀಯ ನಾಯಕತ್ವ ಬೆಳೆಸುವುದು, ಖಾಸಗಿ ವಲಯದ ಪಾತ್ರವನ್ನು ಹೆಚ್ಚಿಸುವುದು ಮತ್ತು ನಗರ ಯೋಜನಾ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದು ಮುಂತಾದ ನಗರ ಯೋಜನೆಯ ವಿವಿಧ ಅಂಶಗಳ ಬಗ್ಗೆ ಈ ವರದಿಯು ಶಿಫಾರಸುಗಳನ್ನು ಒಳಗೊಂಡಿದೆ.
***
(Release ID: 1755047)