ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಫಿಟ್ ಇಂಡಿಯಾ ಕ್ವಿಜ್ ಗೆ 2 ಲಕ್ಷ ಶಾಲಾ ವಿದ್ಯಾರ್ಥಿಗಳ ಉಚಿತ ನೋಂದಣಿ ಪ್ರಕಟಿಸಿದ ಕ್ರೀಡಾ ಸಚಿವಾಲಯ


Posted On: 14 SEP 2021 11:23AM by PIB Bengaluru

ಪ್ರಮುಖ ಮುಖ್ಯಾಂಶ

 

  • ಶಾಲೆಗೆ ಹೋಗುವ ಮಕ್ಕಳಲ್ಲಿ ದೈಹಿಕ ಕ್ಷಮತೆ ಮತ್ತು ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದ ಕುರಿತಂತೆ ರಾಷ್ಟ್ರವ್ಯಾಪಿ ನಡೆಯುತ್ತಿರುವ ಮೊದಲ ಫಿಟ್ ಇಂಡಿಯಾ ಕ್ವಿಜ್ ಸೆಪ್ಟೆಂಬರ್ 1 ರಿಂದ ಆರಂಭವಾಗಿದೆ.

ದೇಶದಲ್ಲಿನ ಶಾಲಾ ಮಕ್ಕಳಿಗಾಗಿ ಇದೇ ಮೊದಲ ಬಾರಿಗೆ ದೈಹಿಕ ಕ್ಷಮತೆ ಮತ್ತು ಕ್ರೀಡೆ ಕುರಿತಂತೆ ನಡೆಸುತ್ತಿರುವ ರಸಪ್ರಶ್ನೆ ಕಾರ್ಯಕ್ರಮ ಫಿಟ್ ಇಂಡಿಯಾ ಕ್ವಿಜ್ ಅನ್ನು ಹೆಚ್ಚು ಆಕರ್ಷಕವನ್ನಾಗಿ ಮಾಡಲಾಗಿದೆ. ದೇಶಾದ್ಯಂತ ಶಾಲಾ ಮಕ್ಕಳನ್ನು ಪ್ರೋತ್ಸಾಹಿಸಲು ಪ್ರಮುಖ ಕ್ರಮವನ್ನು ಪ್ರಕಟಿಸಿರುವ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ರಾಷ್ಟ್ರವ್ಯಾಪಿ ನಡೆಯಲಿರುವ ಕ್ವಿಜ್ ನಲ್ಲಿ ಒಂದು ಲಕ್ಷ ಶಾಲೆಗಳು ನಾಮ ನಿರ್ದೇಶನ ಮಾಡಲಿರುವ ಮೊದಲ ಎರಡು ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ನೋಂದಣಿ ಮಾಡುವುದಾಗಿ ಪ್ರಕಟಿಸಿದೆ. ಪ್ರತಿಯೊಂದು ಶಾಲೆಯು ಮೊದಲು ಬಂದವರಿಗೆ ಮೊದಲ ಆದ್ಯತಾ ರೂಪದಲ್ಲಿ ಕ್ವಿಜ್ ಗೆ ಗರಿಷ್ಠ ಇಬ್ಬರು ವಿದ್ಯಾರ್ಥಿಗಳನ್ನು ಉಚಿತವಾಗಿ ನಾಮ ನಿರ್ದೇಶನ ಮಾಡಬಹುದು.

ಶಾಲಾ ಮಕ್ಕಳಲ್ಲಿ ದೈಹಿಕ ಕ್ಷಮತೆ ಮತ್ತು ಕ್ರೀಡೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಪ್ರಕಟಿಸಿದ್ದಾರೆ. “ಸದೃಢ ಜೀವನ ನಡೆಸಲು ದೈಹಿಕ ಕ್ಷಮತೆ ಕಾಯ್ದುಕೊಳ್ಳುವಲ್ಲಿ ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಮಹತ್ವದ ಪಾತ್ರದ ಬಗ್ಗೆ ಪ್ರಧಾನಮಂತ್ರಿಯವರ ಆಶಯದಂತೆ ಫಿಟ್ ಇಂಡಿಯಾ ಚಳವಳಿಯ ಭಾಗವಾಗಿ ಫಿಟ್ ಇಂಡಿಯಾ ಕ್ವಿಜ್ ಅನ್ನು ಆರಂಭಿಸಲಾಗಿದೆ. ಮೊದಲ ಫಿಟ್ ಇಂಡಿಯಾ ಕ್ವಿಜ್ ನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸೇರ್ಪಡೆಯಾಗುವಂತೆ ಪ್ರೇರೇಪಿಸಲು ಮೊದಲ ಒಂದು ಲಕ್ಷ ಶಾಲೆಗಳಿಂದ ನೋಂದಣಿ ಮಾಡಿಕೊಳ್ಳುವ ಎರಡು ಲಕ್ಷ ವಿದ್ಯಾರ್ಥಿಗಳಿಗೆ ನೋಂದಣಿ ಶುಲ್ಕ ಮನ್ನಾ ಮಾಡಲಾಗಿದೆ” ಎಂದು ಶ್ರೀ ಠಾಕೂರ್ ತಿಳಿಸಿದ್ದಾರೆ.

 ಸೆಪ್ಟೆಂಬರ್ 1 ರಂದು  ಶ್ರೀ ಅನುರಾಗ್ ಠಾಕೂರ್ ಅವರು, ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರ ಸಮಕ್ಷಮದಲ್ಲಿ ಕ್ರೀಡೆ ಮತ್ತು ದೈಹಿಕ ಕ್ಷಮತೆ ಕುರಿತ ಮೊದಲ  ರಾಷ್ಟ್ರವ್ಯಾಪಿ  ರಸಪ್ರಶ್ನೆ ಕಾರ್ಯಕ್ರಮ ಫಿಟ್ ಇಂಡಿಯಾ ಕ್ವಿಜ್ ಗೆ ಚಾಲನೆ ನೀಡಿದ್ದರು. ರಾಷ್ಟ್ರವ್ಯಾಪಿ ನಡೆಯಲಿರುವ ಈ ಕ್ವಿಜ್ ನ ರಾಷ್ಟ್ರೀಯ ಸುತ್ತು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಗಲಿದ್ದು, 3.25 ಕೋಟಿ ರೂಪಾಯಿ ನಗದು ಬಹುಮಾನ ಒಳಗೊಂಡಿರಲಿದೆ.

ಈ ಕ್ವಿಜ್ ನಲ್ಲಿ ದೇಶದ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವಿದ್ಯಾರ್ಥಿಗಳು ಪ್ರತಿನಿಧಿಸಲಿದ್ದಾರೆ ಮತ್ತು ಆನ್ ಲೈನ್ ಹಾಗೂ ಪ್ರಸಾರ ಸುತ್ತು ಎರಡೂ ಒಳಗೊಂಡಿವೆ. ಈ ವಿಧಾನದಲ್ಲಿ ದೇಶಾದ್ಯಂತ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಲ್ಲಿನ ದೈಹಿಕ ಕ್ಷಮತೆ ಮತ್ತು ಕ್ರೀಡಾಜ್ಞಾನ ಕುರಿತ ಜಾಗೃತಿಯನ್ನು ಪರೀಕ್ಷಿಸುವ ಅವಕಾಶವಾಗಿ ವಿಶೇಷ ರೀತಿಯಲ್ಲಿ ರೂಪಿಸಲಾಗಿದೆ.

 ಫಿಟ್ ಇಂಡಿಯಾ ಕ್ವಿಜ್ ನಲ್ಲಿ ಭಾಗವಹಿಸುವ ಕುರಿತು ಹೆಚ್ಚಿನ ವಿವರಗಳು ಫಿಟ್ ಇಂಡಿಯಾ ವೆಬ್ ಸೈಟ್ ನಲ್ಲಿ ಲಭ್ಯವಿದೆ.


(Release ID: 1754765) Visitor Counter : 297