ಪ್ರಧಾನ ಮಂತ್ರಿಯವರ ಕಛೇರಿ
ಸುಬ್ರಮಣ್ಯ ಭಾರತಿ ಅವರ 100ನೇ ಪುಣ್ಯತಿಥಿ; ಪ್ರಧಾನ ಮಂತ್ರಿ ಅವರಿಂದ ಗೌರವ ನಮನ
Posted On:
11 SEP 2021 11:08PM by PIB Bengaluru
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ವಿದ್ವಾಂಸ ಮತ್ತು ಮಹಾಕವಿ ಸುಬ್ರಮಣ್ಯ ಭಾರತಿ ಅವರ 100ನೇ ಪುಣ್ಯತಿಥಿ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು: ಸುಬ್ರಮಣ್ಯ ಭಾರತಿ ಅವರು ಶ್ರೀಮಂತ ಪಾಂಡಿತ್ಯ ಹೊಂದಿದ್ದ ಬಹುಮುಖ ಪ್ರತಿಭೆ. ವಿದ್ವಾಂಸರಾಗಿ, ಮಹಾಕವಿಯಾಗಿ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ ದೇಶಕ್ಕೆ ಅವರು ಬಹುಮುಖದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. 100ನೇ ಪುಣ್ಯತಿಥಿ ಅಂಗವಾಗಿ ಅವರು ಗೌರವಪೂರ್ಣ ನಮನಗಳು. ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಅವರಿಗಿದ್ದ ಚಿಂತನೆಗಳು ಮತ್ತು ಪರಿಕಲ್ಪನೆಗಳು ಉದಾತ್ತವಾಗಿದ್ದವು. 2020 ಡಿಸೆಂಬರ್|ನಲ್ಲಿ ನಾನು ಮಾಡಿದ್ದ ಭಾಷಣ ಇಲ್ಲಿದೆ.
***
(Release ID: 1754444)
Visitor Counter : 214
Read this release in:
English
,
Urdu
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam