ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಟೋಕಿಯೊ ಪ್ಯಾರಾಲಿಂಪಿಕ್ಸ್ ಪದಕ ವಿಜೇತರನ್ನು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಸನ್ಮಾನಿಸಿದರು
ಪ್ಯಾರಾಲಿಂಪಿಕ್ ಕ್ರೀಡೆಗಳ ಹೊಸ ಯುಗ ಆರಂಭವಾಗಿದೆ; 2024 ಮತ್ತು 2028 ರಲ್ಲಿ ‘ಟಾರ್ಗೆಟ್ ಪೋಡಿಯಂ ಫಿನಿಶ್’ಗೆ ಸರ್ಕಾರದ ಬೆಂಬಲವಿರುತ್ತದೆ: ಶ್ರೀ ಅನುರಾಗ್ ಠಾಕೂರ್
ಪ್ಯಾರಾ ಅಥ್ಲೀಟ್‌ಗಳ ಅಸಾಧಾರಣ ಪ್ರದರ್ಶನವು ದೇಶದ ಕ್ರೀಡೆಗಳ ಬಗೆಗಿನ ಮನೋಭಾವವನ್ನು ಬದಲಿಸಿದೆ: ಕ್ರೀಡಾ ಸಚಿವರು
Posted On:
08 SEP 2021 5:50PM by PIB Bengaluru
ಮುಖ್ಯಾಂಶಗಳು:
- ಕೇಂದ್ರ ಕಾನೂನು ಸಚಿವ ಶ್ರೀ ಕಿರಣ್ ರಿಜಿಜು ಮತ್ತು ರಾಜ್ಯ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಸಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
- ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಅಥ್ಲೀಟ್ ಗಳು 5 ಚಿನ್ನ ಮತ್ತು 8 ಬೆಳ್ಳಿ ಸಹಿತ 19 ಪದಕಗಳನ್ನು ಪಡೆದು ಐತಿಹಾಸಿಕವಾಗಿ ಗೆಲುವು ಸಾಧಿಸಿದ್ದಾರೆ
ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ 5 ಚಿನ್ನ ಮತ್ತು 8 ಬೆಳ್ಳಿ ಸೇರಿದಂತೆ ಐತಿಹಾಸಿಕ 19 ಪದಕಗಳನ್ನು ಪಡೆದು ಐತಿಹಾಸಿಕ ಗೆಲುವನ್ನು ಸಾಧಿಸಿದ ಭಾರತದ ಪ್ಯಾರಾ ಅಥ್ಲೀಟ್ ಗಳನ್ನು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಸನ್ಮಾನಿಸಿದರು. ಕೇಂದ್ರ ಕಾನೂನು ಸಚಿವ ಶ್ರೀ ಕಿರಣ್ ರಿಜಿಜು ಮತ್ತು ರಾಜ್ಯ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕ್ರೀಡಾ ಇಲಾಖೆಯ ಕಾರ್ಯದರ್ಶಿ ಶ್ರೀ ರವಿ ಮಿತ್ತಲ್, ಇಲಾಖೆಯ ಯುವ ವ್ಯವಹಾರಗಳ ಕಾರ್ಯದರ್ಶಿ ಶ್ರೀಮತಿ ಉಷಾ ಶರ್ಮಾ ಮತ್ತು ಸಚಿವಾಲಯದ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಶ್ರೀ ಅನುರಾಗ್ ಠಾಕೂರ್ ತಮ್ಮ ಭಾಷಣದಲ್ಲಿ ಅದ್ಭುತ ಪ್ರದರ್ಶನಕ್ಕಾಗಿ ಎಲ್ಲಾ ಕ್ರೀಟಾಪಟುಗಳನ್ನು ಅಭಿನಂದಿಸಿದರು ಮತ್ತು "ನಾನು 2016 ರ ಪ್ಯಾರಾಲಿಂಪಿಕ್ಸ್ ಅನ್ನು ನೆನೆಯುತ್ತಿದ್ದೇನೆ, ಆಗ ಭಾರತೀಯ ತಂಡದಲ್ಲಿ 19 ಜನರಿದ್ದರು, ಆದರೆ ಈ ವರ್ಷ ದೇಶವು 19 ಪದಕಗಳನ್ನು ಗೆದ್ದಿದೆ! ಮಾನವ ಚೈತನ್ಯವು ಎಲ್ಲಕ್ಕಿಂತ ಶಕ್ತಿಶಾಲಿಯಾಗಿದೆ ಎಂದು ನಮಗೆ ತೋರಿಸಿದ್ದೀರ! ನಮ್ಮ ಪದಕದ ಸಂಖ್ಯೆ ಸುಮಾರು ಐದು ಪಟ್ಟು ಹೆಚ್ಚಾಗಿದೆ. ಮೊದಲ ಬಾರಿಗೆ ನಾವು ಟೇಬಲ್ ಟೆನಿಸ್‌ನಲ್ಲಿ ಪದಕಗಳನ್ನು ಗೆದ್ದಿದ್ದೇವೆ, ಬಿಲ್ಲುಗಾರಿಕೆಯಲ್ಲಿ ಪದಕಗಳನ್ನು ಗೆದ್ದಿದ್ದೇವೆ, ಕ್ಯಾನೋಯಿಂಗ್ ಮತ್ತು ಪವರ್‌ಲಿಫ್ಟಿಂಗ್‌ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದೇವೆ ನಾವು ಎರಡು ವಿಶ್ವ ದಾಖಲೆಗಳನ್ನು ಸಮಗೊಳಿಸಿದ್ದೇವೆ ಮತ್ತು ಇನ್ನೂ ಹೆಚ್ಚಿನದನ್ನು ಮುರಿದಿದ್ದೇವೆ. ಭಾರತದ ಪ್ಯಾರಾ ಅಥ್ಲೀಟ್‌ಗಳು ಪರಿಪೂರ್ಣವಾದ ಪೋಡಿಯಂ ಫಿನಿಶ್ ನೀಡಿದರು!" ಎಂದರು.
ಶ್ರೀ ಠಾಕೂರ್ ಮುಂದುವರಿದು "ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಕ್ರೀಡಾಪಟುಗಳಿಗೆ ಬೆಂಬಲವನ್ನು ನೀಡುವಲ್ಲಿ ಸರ್ಕಾರದ ವಿಧಾನವು ಪರಿವರ್ತನೆಯ ಬದಲಾವಣೆಗೆ ಒಳಗಾಗಿದೆ. ಸರ್ಕಾರವು ಭಾರತದ ಪ್ಯಾರಾಲಿಂಪಿಯನ್‌ಗಳಿಗೆ ಸೌಲಭ್ಯಗಳು ಮತ್ತು ಧನಸಹಾಯದೊಂದಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ. ಇದರಿಂದ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠತೆಯನ್ನು ಸಾಧಿಸಬಹುದು. ನಾವು ಇನ್ನಷ್ಟು ಪ್ರೋತ್ಸಾಹಿಸಲು ಬಯಸುತ್ತೇವೆ. ನಮ್ಮ ಪ್ಯಾರಾಲಿಂಪಿಯನ್‌ಗಳಿಗಾಗಿ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಂದ್ಯಾವಳಿಗಳನ್ನು ನಡೆಸುತ್ತೇವೆ ಇದರಿಂದಾಗಿ ಅವರು ನಿಯಮಿತವಾಗಿ ಸ್ಪರ್ಧಿಸಬಹುದು ಮತ್ತು ಅವರ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬಹುದು." ಅವರು ಹೇಳಿದರು, "2024 ಮತ್ತು 2028 ಒಲಿಂಪಿಕ್ಸ್‌ಗಳಲ್ಲಿ ಪ್ಯಾರಾ ಅಥ್ಲೀಟ್‌ಗಳು ಇನ್ನೂ ಹೆಚ್ಚಿನ ಪದಕಗಳನ್ನು ಸಾಧಿಸಲು ಸರ್ಕಾರವು ಭಾರತದ ಪ್ಯಾರಾಲಿಂಪಿಯನ್‌ಗಳಿಗೆ ಬೆಂಬಲ ಮತ್ತು ಧನಸಹಾಯವನ್ನು ನೀಡುವುದನ್ನು ಮುಂದುವರಿಸುತ್ತದೆ. ಈ ಯೋಜನೆಯಡಿ ಕ್ರೀಡಾಪಟುಗಳಿಗೆ ಹೆಚ್ಚಿನ ಬೆಂಬಲವನ್ನು ನೀಡಲು ಯೋಜನೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಇದೂ ಸಹ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅಂತರ್ಗತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಮ್ಮ ಬದ್ಧತೆಯ ಒಂದು ಭಾಗವಾಗಿದೆ.
ಕ್ರೀಡಾಪಟುಗಳ ಅಸಾಧಾರಣ ಪ್ರದರ್ಶನವು ದೇಶದಲ್ಲಿ ಪ್ಯಾರಾ -ಕ್ರೀಡೆಗಳ ಬಗೆಗಿನ ಮನೋಭಾವವನ್ನು ಬದಲಿಸಿದೆ ಎಂದು ಶ್ರೀ ಠಾಕೂರ್ ಹೇಳಿದರು. ಸರ್ಕಾರವು ವಿಶ್ವ ದರ್ಜೆಯ ಸೌಲಭ್ಯಗಳನ್ನು ಖಾತ್ರಿಪಡಿಸಿದೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸ್ವತಃ ಕ್ರೀಡಾಪಟುಗಳೊಂದಿಗೆ ಮಾತನಾಡಿ ಅವರನ್ನು ಪ್ರೋತ್ಸಾಹಿಸಿದರು; ಕೊನೆಯ ಸಂವಾದದಲ್ಲಿ ಪ್ರಧಾನ ಮಂತ್ರಿಯವರು ಪ್ಯಾರಾ-ಅಥ್ಲೀಟ್‌ಗಳು ಮತ್ತು ಅವರ ಕುಟುಂಬಗಳೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಮಾತನಾಡಿದರು. ಇದು ವೈಯಕ್ತಿಕ, ಕಾರ್ಪೊರೇಟ್, ಕ್ರೀಡಾ ಸಂಘಗಳು ಅಥವಾ ಯಾವುದೇ ಇತರ ಸಂಸ್ಥೆಯಾಗಿದ್ದರೂ ಸಮಾಜದ ಪ್ರತಿಯೊಂದು ಭಾಗದ ಮೇಲೆ ಪ್ರಭಾವ ಬೀರುತ್ತದೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಶ್ರೀ ರಿಜಿಜು ಎಲ್ಲಾ ಪದಕ ವಿಜೇತರನ್ನು ಅಭಿನಂದಿಸಿದರು ಮತ್ತು ನೀವು ಭಾರತವನ್ನು ಹೆಮ್ಮೆಪಡಿಸಿದ್ದೀರಿ ಎಂದು ಹೇಳಿದರು. ಟೋಕಿಯೊದಲ್ಲಿ ಭಾರತವನ್ನು ಪ್ರತಿನಿಧಿಸಿದ ಎಲ್ಲಾ ಪ್ಯಾರಾ ಅಥ್ಲೀಟ್‌ಗಳು ಎಲ್ಲರೂ ನಮ್ಮ ನಾಯಕರು. ನೀವೆಲ್ಲರೂ ಎಲ್ಲರಿಗೂ ಸ್ಫೂರ್ತಿ. ಕನಸು ಕಾಣಲು ಧೈರ್ಯ ಮಾಡಿದರೆ ಎಲ್ಲವೂ ಸಾಧ್ಯ ಎನ್ನುವುದನ್ನು ನೀವು ತೋರಿಸಿದ್ದೀರಿ'' ಎಂದು ಅವರು ಹೇಳಿದರು. ಪ್ರತಿಯೊಬ್ಬ ಆಟಗಾರನ ಕಥೆಯು ಸ್ಫೂರ್ತಿದಾಯಕವಾಗಿದೆ ಎಂದು ಶ್ರೀ ರಿಜಿಜು ಪುನರುಚ್ಚರಿಸಿದರು. ಆಟಗಾರರನ್ನು ಹೀರೋ ಎಂದು ಪರಿಗಣಿಸಿದಾಗ ದೇಶದಲ್ಲಿ ಕ್ರೀಡಾ ಸಂಸ್ಕೃತಿ ಆರಂಭವಾಗುತ್ತದೆ.
ಕ್ರೀಡಾ ಸಂಸ್ಕೃತಿ ಈಗ ಭಾರತಕ್ಕೆ ಬಂದಿದೆ ಮತ್ತು ಪ್ರಧಾನ ಮಂತ್ರಿಯವರು ಅವರ ಮುಂದಾಳತ್ವದಿಂದಾಗಿ ಈ ಪರಿವರ್ತನೆಗೆ ಕಾರಣರಾಗಿದ್ದಾರೆ ಎಂದು ನಾನು ಹೇಳಬಲ್ಲೆ ಎಂದು ಶ್ರೀ ಕಿರಣ್ ರಿಜಿಜು ಅವರು ಹೇಳಿದರು.
“ಕಳೆದ ಪ್ಯಾರಾಲಿಂಪಿಕ್ ನಲ್ಲಿ ಸರ್ಕಾರದ ಬೆಂಬಲದಿಂದ ಹೆಚ್ಚಿನ ಕ್ರೀಡಾಪಟುಗಳು ಪ್ರೇರಣೆ ಪಡೆದಿದ್ದಾರೆ ಎಂದು ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವ ಶ್ರೀ ಪ್ರಮಾಣಿಕ್ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನಮಂತ್ರಿಯವರ ವಿಡಿಯೋ ಸಂವಾದ ಮತ್ತು ಪದಕಗಳನ್ನು ಗೆಲ್ಲಲು ಪ್ರತಿ ಕ್ರೀಡಾಪಟುವಿಗೆ ನೀಡಿದ ಕರೆಗಳು ನಿಜವಾಗಿಯೂ ಅವರನ್ನು ಪ್ರೋತ್ಸಾಹಿಸಿವೆ"ಎಂದು ಅವರು ಹೇಳಿದರು.
ಭಾರತದ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ದೀಪಾ ಮಲಿಕ್ ದಿವ್ಯಾಂಗ್ ಕ್ರೀಡಾಪಟುಗಳನ್ನು ಸಮಾಜದಲ್ಲಿ ಒಳಗೊಳ್ಳುವಂತೆ ಮಾಡಲು ಸರ್ಕಾರದ ಪ್ರಧಾನ ಮಂತ್ರಿಗಳ ಪ್ರಯತ್ನಗಳು ಮತ್ತು ಉಪಕ್ರಮಗಳನ್ನು ಶ್ಲಾಘಿಸಿದರು. ಟಾಪ್ಸ್ ಅಡಿಯಲ್ಲಿ ಪ್ಯಾರಾ ಅಥ್ಲೀಟ್ ಗಳಿಗೆ ನೀಡಿದ ಬೆಂಬಲ ಇತಿಹಾಸ ಸೃಷ್ಟಿಸಿದೆ ಮತ್ತು ಇಂದು ಎಲ್ಲರೂ ಪ್ಯಾರಾ ಅಥ್ಲೀಟ್ ಗಳ ಯಶಸ್ಸಿನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು. ಶ್ರೀಮತಿ ದೀಪಾ ವಿಶೇಷವಾಗಿ ಮಹಿಳಾ ಕ್ರೀಡಾಪಟುಗಳ ಪ್ರಾತಿನಿಧ್ಯದಲ್ಲಿ ಗಣನೀಯ ಹೆಚ್ಚಳ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕಗಳೊಂದಿಗೆ ಅವರ ಯಶಸ್ಸನ್ನು ಮುಖ್ಯವಾಗಿ ಹೇಳಿದರು.
ಟೋಕಿಯೊ 2020 ರಲ್ಲಿ, ಭಾರತವು 19 ಪದಕಗಳನ್ನು ಗೆದ್ದುಕೊಂಡಿತು, ಟೋಕಿಯೊ 2020 ರಲ್ಲಿ ಸ್ಪರ್ಧಿಸುತ್ತಿರುವ 162 ರಾಷ್ಟ್ರಗಳಲ್ಲಿ ಒಟ್ಟಾರೆ ಪದಕ ಪಟ್ಟಿಯಲ್ಲಿ 24 ನೇ ಸ್ಥಾನವನ್ನು ಗಳಿಸಿತು ಮತ್ತು ಗೆದ್ದ ಒಟ್ಟು ಪದಕಗಳ ಆಧಾರದ ಮೇಲೆ 20 ನೇ ಸ್ಥಾನದಲ್ಲಿದೆ. ಭಾರತವು ಪ್ಯಾರಾಲಿಂಪಿಕ್ ಕ್ರೀಡಾಕೂಟವನ್ನು 1968 ರಲ್ಲಿ ಆರಂಭಿಸಿದ ನಂತರ 2016 ರವರೆಗೆ ಕೇವಲ 12 ಪದಕಗಳನ್ನು ಗೆದ್ದಿತ್ತು.
***
(Release ID: 1753454)
Visitor Counter : 241
Read this release in:
Urdu
,
English
,
Marathi
,
Hindi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam