ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೇರಳದ ಕೊಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ಸೋಂಕು ಪ್ರಕರಣ ಪತ್ತೆ
ಆರೋಗ್ಯ ಕ್ರಮಗಳ ನೆರವಿಗಾಗಿ ಕೇರಳಕ್ಕೆ ತಂಡವನ್ನು ನಿಯೋಜಿಸಿದ ಕೇಂದ್ರ ಸರ್ಕಾರ
Posted On:
05 SEP 2021 8:00AM by PIB Bengaluru
ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಒಂದು ನಿಫಾ ಸೋಂಕು ಪ್ರಕರಣ ಪತ್ತೆಯಾಗಿದೆ.
ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ 2021ರ ಸೆಪ್ಟೆಂಬರ್ 3ರಂದು ಮೆದುಳು ಜ್ವರ ಮತ್ತು ಮಯೋಕಾರ್ಡಿಯಾಕ್ ಲಕ್ಷಣಗಳನ್ನು ಹೊಂದಿರುವ ಹನ್ನೆರಡು ವರ್ಷದ ಬಾಲಕನಲ್ಲಿ ಶಂಕಿತ ನಿಫಾ ಪ್ರಕರಣ ವರದಿಯಾಗಿದೆ.
ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.
ಕೇಂದ್ರ ಸರ್ಕಾರ ಎನ್ ಸಿಡಿಸಿ ತಂಡವನ್ನು ರಾಜ್ಯಕ್ಕೆ ಕಳುಹಿಸಿದ್ದು ಅದು ಇಂದು ಕೇರಳ ತಲುಪಲಿದೆ. ತಂಡ ರಾಜ್ಯಕ್ಕೆ ತಾಂತ್ರಿಕ ನೆರವು ನೀಡಲಿದೆ.
ಹಣ್ಣಿನ ಬಾವಲಿಗಳ ಜೊಲ್ಲಿನಿಂದ ಹರಡುವ ಈ ತಡೆಗೆ ಸರ್ಕಾರ ಈ ಕೆಳಗಿನ ತುರ್ತು ಸಾರ್ವಜನಿಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
1. ಗ್ರಾಮ ಮತ್ತು ಕುಟುಂಬಗಳು ಹಾಗೂ ಕುಟುಂಬದೊಳಗೆ ಸಮಾನ ಭೌಗೋಳಿಕ ಅಂಶಗಳಿರುವ ಪ್ರದೇಶದಲ್ಲಿನ ಸಕ್ರಿಯ ಪ್ರಕರಣಗಳನ್ನು ಪತ್ತೆಹಚ್ಚುವುದು. (ವಿಶೇಷವಾಗಿ ಮಲಪ್ಪುರಂ)
2. ಕಳೆದ 12 ದಿನಗಳ ಅವಧಿಯ ಸಕ್ರಿಯ ಸಂಪರ್ಕಗಳನ್ನು(ಯಾವುದೇ ಸಂಪರ್ಕಗಳಿದ್ದಲ್ಲಿ) ಪತ್ತೆ ಹಚ್ಚುವುದು.
3. ಸಂಪರ್ಕಗಳು ಕಟ್ಟುನಿಟ್ಟಿನ ಕ್ವಾರಂಟೈನ್ ನಿಯಮಗಳನ್ನು ಪಾಲಿಸಬೇಕು ಮತ್ತು ಯಾವುದೇ ಶಂಕಿತ ಪ್ರಕರಣಗಳಿದ್ದರೆ ಐಸೋಲೇಶನ್ ಗೆ ಒಳಗಾಗಬೇಕು.
4. ಪ್ರಯೋಗಾಲಯ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಬೇಕು ಮತ್ತು ಸಾಗಣೆ ಮಾಡಬೇಕು.
2018ರಲ್ಲೂ ಕೂಡ ಕೇರಳದ ಕೋಯಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ನಿಫಾ ಸೋಂಕು ಕಾಣಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
***
(Release ID: 1752307)
Visitor Counter : 366