ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19ಕ್ಕೆ ಅಗತ್ಯ ಔಷಧಗಳ ಲಭ್ಯತೆ ಮತ್ತು ಅವುಗಳ ಕಾಪು ದಾಸ್ತಾನಿನ ಪರಾಮರ್ಶೆ ನಡೆಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ


8 ಔಷಧಗಳ ಕಾಪು ದಾಸ್ತಾನು, ಸೂಕ್ತ ಪ್ರಮಾಣದ ದಾಸ್ತಾನು ಮತ್ತು ದೇಶದಲ್ಲಿ ಲಭ್ಯವಿರುವ ಕಚ್ಚಾ ವಸ್ತುಗಳ ಪರಾಮರ್ಶೆ

Posted On: 01 SEP 2021 6:21PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಅವರಿಂದು ದೇಶದಲ್ಲಿ ಕೋವಿಡ್ -19 ಸಂಬಂಧಿತ ಅಗತ್ಯ ಔಷಧಗಳ ಲಭ್ಯತೆಯ ಪರಾಮರ್ಶೆ ನಡೆಸಿದರು. 

ಪರಾಮರ್ಶೆಯ ವೇಳೆ, ಎಲ್ಲ ಅಗತ್ಯ ಔಷಧಗಳ ದಾಸ್ತಾನು ಲಭ್ಯವಿದೆ ಎಂಬುದನ್ನು ಗಮನಿಸಲಾಯಿತು. ಈ ಔಷಧಗಳಿಗೆ ಅಗತ್ಯವಾದ ಕಚ್ಚಾವಸ್ತುಗಳೂ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ.

8 ಔಷಧಗಳಿಗೆ ವ್ಯೂಹಾತ್ಮಕ ಕಾಪು ದಾಸ್ತಾನನ್ನು ರೂಪಿಸಲಾಗಿದ್ದು, ಈ ಎಲ್ಲವೂ ದೇಶದಲ್ಲಿ ಲಭ್ಯವಿವೆ. 

ಆ 8 ಔಷಧಗಳ ಪಟ್ಟಿ ಇಲ್ಲಿದೆ:

  1. ಟುಸಿಲಿಜುಮಾಬ್
  2. ಮೀಥೈಲ್ ಪ್ರೆಡಿನಿಸೊಲೋನ್
  3. ಎನಾಕ್ಸೊಪಿರಿನ್
  4. ಡೆಕ್ಸಮೆಥಾಸೊನ್
  5. ರೆಮ್ಡಿಸಿವೀರ್
  6. ಆಂಫೋಟೆರಿಸಿನ್ ಬಿ ಡಿಯೋಕ್ಸಿಕೋಲೇಟ್
  7. ಪೊಸಕೊನಜೋಲ್
  8. ಇಂಟ್ರಾವೀನಸ್ ಇಮ್ಯುನೊಗ್ಲೋಬಿಲಿನ್ (IVIG) 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಪರಾಮರ್ಶಾ ಸಭೆಯಲ್ಲಿ ಉಪಸ್ಥಿತರಿದ್ದರು.

***



(Release ID: 1751259) Visitor Counter : 244