ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಶೂಟಿಂಗ್‌ ಪಂದ್ಯದಲ್ಲಿ ಕಂಚಿನ ಪದಕ ಗೆದ್ದ ಸಿಂಗ್‌ರಾಜ್ ಅಧಾನ ಅವರಿಗೆ ಪ್ರಧಾನಿ ಅಭಿನಂದನೆ

ಪ್ರಕಟಣಾ ದಿನಾಂಕ: 31 AUG 2021 12:17PM by PIB Bengaluru

ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಶೂಟಿಂಗ್ ಪಂದ್ಯದಲ್ಲಿ ಕಂಚಿನ ಪದಕ ಗೆದ್ದ ಭಾರತದ ಸಿಂಗ್‌ರಾಜ್ ಅಧಾನ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಸಿಂಗ್‌ರಾಜ್ ಅಧಾನ ಅವರದ್ದು ಅಸಾಧಾರಣ ಪ್ರದರ್ಶನ! ಭಾರತದ ಪ್ರತಿಭಾವಂತ ಶೂಟರ್ ಅಪೇಕ್ಷಿತ ಕಂಚಿನ ಪದಕವನ್ನು ತವರಿಗೆ ತರುತ್ತಿದ್ದಾರೆ. ಅವರು ಅಪಾರವಾಗಿ ಶ್ರಮಿಸಿ, ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಮುಂದಿನ ಪ್ರಯತ್ನಗಳಿಗೆ ಅವರಿಗೆ ಶುಭ ಹಾರೈಕೆಗಳು. #Paralympics #Praise4Para" ಎಂದಿದ್ದಾರೆ.

***


(ಪ್ರಕಟಣೆ ಐ.ಡಿ.: 1750693) ವಿಸಿಟರ್ ಕೌಂಟರ್ : 240
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , Urdu , हिन्दी , Marathi , Bengali , Manipuri , Punjabi , Gujarati , Odia , Tamil , Telugu