ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಗೆ 7 ವರ್ಷಗಳ ಸಂಭ್ರಮ
ಪಿಎಂ ಜನ್ ಧನ್ ಯೋಜನೆಯು ಭಾರತದ ಅಭಿವೃದ್ಧಿ ಪಥವನ್ನು ಶಾಶ್ವತವಾಗಿ ಪರಿವರ್ತಿಸುವ ಉಪಕ್ರಮ: ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ

Posted On: 28 AUG 2021 11:18AM by PIB Bengaluru

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಗೆ ಏಳು ವರ್ಷ ತುಂಬಿರುವುದಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯನ್ನು ಸಫಲಗೊಳಿಸಲು ಶ್ರಮಿಸಿದ, ನಿರಂತರ ಪ್ರಯತ್ನಗಳನ್ನು ಹಾಕುತ್ತಾ ಬಂದಿರುವ ಎಲ್ಲರನ್ನೂ ಅವರು ಶ್ಲಾಘಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ನಾವಿಂದು #ಪಿಎಂಜನ್-ಧನ್ ಯೋಜನೆಯ ಏಳು ವರ್ಷಗಳ  ಸಂಭ್ರಮಾಚರಣೆಯಲ್ಲಿದ್ದೇವೆ. ಪಿಎಂ ಜನ್ ಧನ್ ಯೋಜನೆಯು ಭಾರತದ ಅಭಿವೃದ್ಧಿ ಪಥವನ್ನು ಶಾಶ್ವತವಾಗಿ ಪರಿವರ್ತಿಸುವ ಉಪಕ್ರಮವಾಗಿದೆ. ಇದು ಅಸಂಖ್ಯಾತ ಭಾರತೀಯರಿಗೆ ಹಣಕಾಸು ಒದಗಿಸುವಿಕೆ, ಘನತೆಯ ಜೀವನ ಹಾಗೂ ಸಬಲೀಕರಣವನ್ನು ಖಾತ್ರಿಪಡಿಸಿದೆ. ಜನ್-ಧನ್ ಯೋಜನೆಯು ಮತ್ತಷ್ಟು ಪಾರದರ್ಶಕತೆಗೆ ಸಹಾಯಕವಾಗಿದೆ. #ಪಿಎಂಜನ್-ಧನ್ ಯೋಜನೆ ಸಫಲಗೊಳಿಸಲು ಶ್ರಮಿಸಿದ ಎಲ್ಲರ ಅವಿರತ ಪ್ರಯತ್ನವನ್ನು ನಾನು ಶ್ಲಾಘಿಸುತ್ತೇನೆ. ಭಾರತದ ಜನರು ಉತ್ತಮ ಗುಣಮಟ್ಟದ ಜೀವನ ನಡೆಸಲು ಎಲ್ಲರ ಪ್ರಯತ್ನಗಳೇ ಕಾರಣ” ಎಂದು ಪ್ರಧಾನ ಮಂತ್ರಿ ಶ್ಲಾಘಿಸಿದ್ದಾರೆ.

***(Release ID: 1749842) Visitor Counter : 79