ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಯುವ ಕಲಾವಿದರ ವರ್ಣ ಚಿತ್ರಗಳು ಮತ್ತು ಸಾರ್ವಜನಿಕ ಆರೋಗ್ಯ ಕುರಿತ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ


ಸೃಜನಶೀಲ ವಲಯಗಳಲ್ಲಿ ಯುವ ಸಮೂಹದ ಭಕ್ತಿ ಮತ್ತು ಆಸಕ್ತಿಯನ್ನು ನೋಡಲು ತುಂಬಾ ಸಂತಸವಾಗುತ್ತದೆ: ಪ್ರಧಾನಮಂತ್ರಿ

ವರ್ಣಚಿತ್ರಗಳಂತೆ ನಿಮ್ಮ ಆಲೋಚನೆಗಳು ಸಹ ಸುಂದರವಾಗಿರುತ್ತವೆ: ಪ್ರಧಾನಮಂತ್ರಿ

130 ಕೋಟಿ ಭಾರತೀಯರ ಸಾಮೂಹಿಕ ಪ್ರಯತ್ನ, ಶಿಸ್ತು, ಲಸಿಕಾ ಅಭಿಯಾನ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ಶಕ್ತಿ ನೀಡುತ್ತದೆ: ಪ್ರಧಾನಮಂತ್ರಿ

ಸಕಾರಾತ್ಮಕತೆಯನ್ನು ಪಸರಿಸುತ್ತಿರುವ ಸ್ಟೀವನ್ ಅವರ ಪ್ರಯತ್ನದಿಂದ ಜನತೆ ಸ್ಫೂರ್ತಿ ಪಡೆಯುತ್ತಾರೆ ಎಂಬ ಭರವಸೆ ಇದೆ

ಸ್ಟೀವನ್ ಹ್ಯಾರೀಸ್ ಅವರು ಪ್ರಧಾನಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ ಮತ್ತು ಎರಡು ವರ್ಣಚಿತ್ರಗಳನ್ನು ಕಳುಹಿಸಿದ್ದಾರೆ

Posted On: 26 AUG 2021 5:40PM by PIB Bengaluru

ಬೆಂಗಳೂರಿನ ವಿದ್ಯಾರ್ಥಿ ಸ್ಟೀವನ್ ಹ್ಯಾರೀಸ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪತ್ರ ಬರೆದು ವರ್ಣ ಚಿತ್ರಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 20 ವರ್ಷದ ಯುವ ಕಲಾವಿದ ಪ್ರಧಾನಮಂತ್ರಿ ಅವರ ಎರಡು ಸುಂದರ ವರ್ಣ ಭಾವಚಿತ್ರಗಳನ್ನು ರಚಿಸಿ, ಜತೆಗೆ ಪತ್ರವೊಂದನ್ನು ಪ್ರಧಾನಮಂತ್ರಿ ಅವರಿಗೆ ಕಳುಹಿಸಿದ್ದರು. ಪ್ರಧಾನಮಂತ್ರಿ ಅವರು ಉತ್ತೇಜನ ಮತ್ತು ಪ್ರಶಂಸೆಯೊಂದಿಗೆ ಅವರಿಗೆ ಉತ್ತರ ನೀಡಿದ್ದಾರೆ.

ಸೃಜನಶೀಲ ವಲಯದಲ್ಲಿ ಯುವ ಜನರ ಭಕ್ತಿ ಮತ್ತು ಆಸಕ್ತಿಯನ್ನು ನೋಡಲು ತುಂಬಾ ಸಂತಸವಾಗುತ್ತದೆ ಎಂದು ಪ್ರಧಾನಮಂತ್ರಿ ಅವರು ಬರೆದಿದ್ದಾರೆ. “ನಿಮ್ಮ ವರ್ಣಚಿತ್ರಗಳು ವಿಷಯವನ್ನು ಆಳವಾಗಿ ಅನುಭವಿಸುವ ನಿಮ್ಮ ಪ್ರತಿಭೆಯ ಪ್ರತೀಕವಾಗಿವೆ. ಆ ನಿಮಿಷದಲ್ಲಿ ಸೂಕ್ಷ್ಮತೆಯೊಂದಿಗೆ ಕಾರ್ಯಗತಗೊಳಿಸುವ ನಿಮ್ಮ ಅಭಿವ್ಯಕ್ತಿ ಹೃದಯ ಸ್ಪರ್ಶಿಯಾಗಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ.

ಈಗಿನ ಸಂಕಷ್ಟ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಕಲ್ಯಾಣ ಮತ್ತು ಆರೋಗ್ಯದ ಬಗ್ಗೆ ಯುವ ಕಲಾವಿದರ ದೃಷ್ಟಿಕೋನವನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದ್ದಾರೆ. “ಶಿಸ್ತು, 130 ಕೋಟಿ ಭಾರತೀಯರ ಸಾಮೂಹಿಕ ಪ್ರಯತ್ನ, ಲಸಿಕಾ ಅಭಿಯಾನ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ಶಕ್ತಿ ನೀಡುತ್ತದೆ” ಎಂದು ಪ್ರಧಾನಮಂತ್ರಿ ಅವರು ಬರೆದಿದ್ದಾರೆ.

ಸಕಾರಾತ್ಮಕತೆಯನ್ನು ಪಸರಿಸುತ್ತಿರುವ ಸ್ಟೀವನ್ಸ್ ಅವರ ಪ್ರಯತ್ನದಿಂದ ಜನತೆ ಸ್ಫೂರ್ತಿ ಪಡೆಯುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.

ಸ್ಟೀವನ್ ಅವರು ಪ್ರಧಾನಮಂತ್ರಿ ಅವರಿಗೆ ಬರೆದ ತಮ್ಮ ಪತ್ರದಲ್ಲಿ ತಾವು ಕಳೆದ 15 ವರ್ಷಗಳಿಂದ ಚಿತ್ರಕಲೆಯಲ್ಲಿ ತೊಡಗಿಕೊಂಡಿರುವುದಾಗಿ ಹಾಗು ವಿವಿಧ ಹಂತಗಳಲ್ಲಿ 100 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿರುವುದಾಗಿ ಹೇಳಿದ್ದಾರೆ. ಪ್ರಧಾನಮಂತ್ರಿ ಅವರು ತಮಗೆ ಸ್ಫೂರ್ತಿಯಾಗಿರುವುದಾಗಿ ಅವರು ಪತ್ರದಲ್ಲಿ ವಿವರಿಸಿದ್ದಾರೆ ಮತ್ತು ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ಲಸಿಕಾ ಕಾರ್ಯಕ್ರಮವನ್ನು ಅವರು ಶ್ಲಾಘಿಸಿದ್ದಾರೆ.

ಸ್ಟೀವನ್ ಹ್ಯಾರೀಸ್ ಅವರು ಕಳುಹಿಸಿರುವ ವರ್ಣಚಿತ್ರಗಳು:

***

 

DS

 


(Release ID: 1749393) Visitor Counter : 298