ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಹಾರಾಷ್ಟ್ರದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಬಗ್ಗೆ ದುಃಖ ವ್ಯಕ್ತಪಡಿಸಿದ ಪ್ರದಾನಮಂತ್ರಿ


ಸಂತ್ರಸ್ತರಿಗೆ ಪಿ.ಎಂ.ಎನ್.ಆರ್.ಎಫ್ ನಿಂದ ಪರಿಹಾರ ಘೋಷಣೆ

ಪ್ರಕಟಣಾ ದಿನಾಂಕ: 20 AUG 2021 11:15PM by PIB Bengaluru

ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ.

ತನ್ನ ಟ್ವೀಟ್ ಸಂದೇಶದಲ್ಲಿ ಪಿಎಂಒ ಕಾರ್ಯಾಲಯ “ಬಲ್ದಾನ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಉಂಟಾದ ಜೀವಹಾನಿಯಿಂದ ನೊಂದಿದ್ದೇನೆ. ದುಃಖಿತ ಕುಟುಂಬಗಳಿಗೆ ಸಂತಾಪ. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ. ಮೃತರ ಅವಲಂಬಿತರಿಗೆ ಪಿ.ಎಂ.ಎನ್.ಆರ್.ಎಫ್ ನಿಂದ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರ ನೀಡಲಾಗುವುದು: ಪಿಎಂ ಮೋದಿ” ಎಂದು ಹೇಳಿದೆ.

***


(ಪ್ರಕಟಣೆ ಐ.ಡಿ.: 1747860) ವಿಸಿಟರ್ ಕೌಂಟರ್ : 201