ಪ್ರಧಾನ ಮಂತ್ರಿಯವರ ಕಛೇರಿ

ಸಂಸತ್ತಿನ ಉಭಯ ಸದನಗಳಲ್ಲಿ ಸಂವಿಧಾನದ 127ನೇ ತಿದ್ದುಪಡಿ ವಿಧೇಯಕ-2021 ಅಂಗೀಕಾರ; ಪ್ರಧಾನ ಮಂತ್ರಿ ಶ್ಲಾಘನೆ

ಪ್ರಕಟಣಾ ದಿನಾಂಕ: 11 AUG 2021 11:00PM by PIB Bengaluru

ಸಂಸತ್ತಿನ ಉಭಯ ಸದನಗಳಲ್ಲಿ ಸಂವಿಧಾನದ 127ನೇ ತಿದ್ದುಪಡಿ ವಿಧೇಯಕ-2021 ಅಂಗೀಕಾರವಾಗಿರುವುದು ದೇಶದ ಪಾಲಿಗೆ ಐತಿಹಾಸಿಕ ಕ್ಷಣ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.

ಈ ಕುರಿತು ಪ್ರಧಾನ ಮಂತ್ರಿ ಮಾಡಿರುವ ಟ್ವೀಟ್:

“ಸಂಸತ್ತಿನ ಉಭಯ ಸದನಗಳಲ್ಲಿ ಸಂವಿಧಾನದ 127ನೇ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಿರುವುದು ನಮ್ಮ ದೇಶದ ಪಾಲಿಗೆ ಐತಿಹಾಸಿಕ, ಹೆಮ್ಮೆಯ ಕ್ಷಣ. ಈ ಮಸೂದೆಯು ಸಾಮಾಜಿಕ ಸಬಲೀಕರಣವನ್ನು ಮತ್ತಷ್ಟು ಪ್ರಬಲಗೊಳಿಸಿದೆ. ದೇಶದ ಇತರೆ ಹಿಂದುಳಿದ ವರ್ಗ(ಒಬಿಸಿ)ಗಳ ಜನರಿಗೆ ಘನತೆ, ವಿಫುಲ ಅವಕಾಶ ಮತ್ತು ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಪ್ರತಿಫಲಿಸುತ್ತಿದೆ.”

***


(ಪ್ರಕಟಣೆ ಐ.ಡಿ.: 1745080) ವಿಸಿಟರ್ ಕೌಂಟರ್ : 421