ಪ್ರಧಾನ ಮಂತ್ರಿಯವರ ಕಛೇರಿ

ವಸತಿ, ವಿದ್ಯುತ್, ಶೌಚಾಲಯ, ಅಡುಗೆ ಅನಿಲ, ರಸ್ತೆ, ಆಸ್ಪತ್ರೆ ಮತ್ತು ಶಾಲೆಯಂತಹ ಮೂಲಸೌಕರ್ಯಗಳ ಕೊರತೆಯಿಂದ ಮಹಿಳೆಯರು, ವಿಶೇಷವಾಗಿ ಬಡ ಮಹಿಳೆಯರ ಮೇಲೆ ವ್ಯತಿರಿಕ್ತ ಪರಿಣಾಮ: ಪ್ರಧಾನಮಂತ್ರಿ


ನಮ್ಮ ಹೆಣ್ಣು ಮಕ್ಕಳು ಮನೆ ಮತ್ತು ಅಡುಗೆ ಮನೆಯಿಂದ ಹೊರಬಂದು ದೇಶ ಕಟ್ಟಲು ಅತ್ಯಮೂಲ್ಯ ಕೊಡುಗೆ ನೀಡಬೇಕಾದರೆ, ಮನೆ ಮತ್ತು ಅಡುಗೆ ಮನೆಗೆ ಸಂಬಂಧಿಸಿದ ಮೂಲಸಮಸ್ಯೆಗಳನ್ನು ಮೊದಲಿಗೆ ಪರಿಹರಿಸಬೇಕು: ಪ್ರಧಾನ ಮಂತ್ರಿ

ಸ್ವಾತಂತ್ರ್ಯೋತ್ಸವದ 75ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ನಾವು ಕಳೆದ 7 ದಶಕಗಳ ದೇಶದ ಪ್ರಗತಿಯನ್ನು ನೋಡಬೇಕಿದೆ; ದಶಕಗಳ ಹಿಂದೆಯೇ ಈ ಎಲ್ಲಾ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಬೇಕಿತ್ತು ಎಂಬ ಭಾವನೆ ಮೂಡುವುದು ಅನಿವಾರ್ಯ: ಪ್ರಧಾನಮಂತ್ರಿ

ಕಳೆದ 6-7 ವರ್ಷಗಳಲ್ಲಿ, ಮಹಿಳಾ ಸಬಲೀಕರಣದ ವಿವಿಧ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯಲು ಸರ್ಕಾರ ಕಾರ್ಯಾಚರಣೆ ರೂಪದಲ್ಲಿ ಕೆಲಸ ಮಾಡಿದೆ: ಪ್ರಧಾನಿ

ಸಹೋದರಿಯರ ಆರೋಗ್ಯ, ಅನುಕೂಲತೆ ಮತ್ತು ಸಬಲೀಕರಣ ಸಂಕಲ್ಪವು  ಉಜ್ವಲ ಯೋಜನೆಯಿಂದ ಹೆಚ್ಚಿನ ಉತ್ತೇಜನ ಪಡೆದಿದೆ: ಪ್ರಧಾನಿ

Posted On: 10 AUG 2021 9:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣ ಕುರಿತು  ಸರ್ಕಾರ ಹೊಂದಿರುವ ಸಮಗ್ರ ದೃಷ್ಟಿಕೋನ ಕುರಿತು ವಿಸ್ತೃತ ವಿವರಣೆ ನೀಡಿದರು. ವಸತಿ, ವಿದ್ಯುತ್, ಶೌಚಾಲಯ, ಅಡುಗೆ ಅನಿಲ, ರಸ್ತೆ, ಆಸ್ಪತ್ರೆ ಮತ್ತು ಶಾಲೆಯಂತಹ ಮೂಲಸೌಕರ್ಯಗಳ ಕೊರತೆಯಿಂದ ಮಹಿಳೆಯರು, ವಿಶೇಷವಾಗಿ ಬಡ ಮಹಿಳೆಯರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ. ನಾವೀಗ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆಗೆ ಕಾಲಿಡುತ್ತಿರುವ ಸುಸಂದರ್ಭದಲ್ಲಿ ಕಳೆದ 7 ದಶಕಗಳಲ್ಲಿ ಆಗಿರುವ ದೇಶದ ಪ್ರಗತಿಯನ್ನು ಒಮ್ಮೆ ನೋಡಬೇಕಿದೆ. ಮೇಲಿನ ಎಲ್ಲಾ ಸಮಸ್ಯೆಗಳನ್ನು ದಶಕಗಳ ಹಿಂದೆಯೇ ಬಗಹರಿಸಬಹುದಿತ್ತು ಎಂಬ ಭಾವನೆ ನಮ್ಮೆಲ್ಲರನ್ನು ಕಾಡುವುದು ಸಹಜ ಎಂದು ಪ್ರಧಾನ ಮಂತ್ರಿ ತಿಳಿಸಿದರು.

ಉತ್ತರ ಪ್ರದೇಶದ ಮಹೊಬಾದಲ್ಲಿಂದು ಉಜ್ವಲ 2.0 ಯೋಜನೆಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.

ಸೋರುವ ಮನೆ ಛಾವಣಿ, ವಿದ್ಯುಚ್ಛಕ್ತಿ ಕೊರತೆ, ಕುಟುಂಬದಲ್ಲಿ ಅನಾರೋಗ್ಯ, ಬಯಲು ಶೌಚಕ್ಕಾಗಿ  ಕತ್ತಲಾಗುವುದನ್ನೇ ಕಾಯುವ ಪರಿಸ್ಥಿತಿ, ಶಾಲೆಗಳಲ್ಲಿ ಶೌಚಾಲಯಗಳ ಕೊರತೆ ಇತ್ಯಾದಿ ಸಮಸ್ಯೆಗಳಿಂದ ನಮ್ಮ ತಾಯಂದಿರು ಮತ್ತು ನಮ್ಮ ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಿದೆ. ನಮ್ಮ ತಾಯಂದಿರು ಅಡುಗೆ ಒಲೆಯ ಹೊಗೆ ಮತ್ತು ಬಿಸಿಗೆ ಬಳಲುತ್ತಿರುವುದನ್ನು ನೋಡಿಕೊಂಡೇ ನಮ್ಮ ಪೀಳಿಗೆ ಬೆಳೆದಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು.

ನಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಮೂಲ ಸಮಸ್ಯೆಗಳ ಪರಿಹಾರಕ್ಕೆ ಬಳಸಿದರೆ, ನಾವು ಹೇಗೆ 100ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮದ  ಆಚರಣೆಗೆ ಮುಂದೆ ಸಾಗಬಹುದು ಎಂದು ಪ್ರಧಾನಮಂತ್ರಿ ಪ್ರಶ್ನಿಸಿದರು. ರೀತಿಯ ಮೂಲಭೂತ ಸೌಕರ್ಯಗಳಿಗಾಗಿ ಹೆಣಗಾಡುತ್ತಿರುವ ಒಂದು ಕುಟುಂಬ ಅಥವಾ ಸಮಾಜ ದೊಡ್ಡ ಕನಸು ಕಾಣುವುದು ಮತ್ತು ಅವುಗಳನ್ನು ಸಾಧಿಸುವುದು ಹೇಗೆಯಾವುದೇ ಸಮಾಜ ತನ್ನ ಕನಸುಗಳನ್ನು ನನಸು ಮಾಡಬೇಕಾದರೆ ಕನಸುಗಳ ಸಾಕಾರ ಸಾಧ್ಯ ಎಂಬ ಭಾವನೆ ಮೂಡುವಂತಾಗಬೇಕು. "ಆತ್ಮವಿಶ್ವಾಸವೇ ಇಲ್ಲದ ರಾಷ್ಟ್ರವು ಹೇಗೆ ಆತ್ಮನಿರ್ಭರ್ (ಸ್ವಾವಲಂಬಿ) ಆಗಲು ಸಾಧ್ಯ" ಎಂದು ಪ್ರಧಾನಿ ಪ್ರಶ್ನಿಸಿದರು.

2014ರಲ್ಲಿ ನಾವೇ ಪ್ರಶ್ನೆಗಳನ್ನು ಹಾಕಿಕೊಂಡೆವು. ನಿರ್ದಿಷ್ಟ ಕಾಲಮಿತಿಯಲ್ಲಿ ದೇಶದ ಮುಂದಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವುದು ಅಗತ್ಯ ಎಂಬುದೇ ಅವತ್ತಿನ ನಮ್ಮೆದುರಿನ ಪ್ರಶ್ನೆ. ನಮ್ಮ ಹೆಣ್ಣು ಮಕ್ಕಳು ಅಡುಗೆ ಕೋಣೆ ಮತ್ತು ಮನೆಯಿಂದ ಹೊರಬಂದು ದೇಶಕ್ಕೆ ಅಪಾರ ಕೊಡುಗೆ ನೀಡುವಂತಾಗಬೇಕಾದರೆ, ಮೊದಲಿಗೆ ಅವರಿರುವ ಮನೆ ಮತ್ತು ಅಡುಗೆ ಕೋಣೆಯ ಮೂಲಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು. ನಿಟ್ಟಿನಲ್ಲಿ ಕಳೆದ 6-7 ವರ್ಷಗಳಿಂದ ಕೇಂದ್ರ ಸರ್ಕಾರ ನಮ್ಮ ಅಕ್ಕ ತಂಗಿಯರು, ತಾಯಂದಿರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಕಾರ್ಯಾಚರಣೆ ರೂಪದಲ್ಲಿ ಕೆಲಸ ಮಾಡುತ್ತಿದೆ. ಅವುಗಳು ಕೆಳಕಂಡಂತಿವೆ.

•           ಸ್ವಚ್ಛ ಭಾರತ್ ಮಿಷನ್ ಅಡಿ ದೇಶಾದ್ಯಂತ ಕೋಟ್ಯಂತರ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

•           ಬಡ ಕುಟುಂಬಗಳ ಮಹಿಳೆಯರ ಹೆಸರಿನಲ್ಲಿ 2 ಕೋಟಿಗಿಂತ ಹೆಚ್ಚಿನ ಮನೆಗಳ ನಿರ್ಮಾಣ

•           ಗ್ರಾಮೀಣ ರಸ್ತೆಗಳ ಅಭಿವೃದ್ಧಿ

•           ಸೌಭಾಗ್ಯ ಯೋಜನೆ ಅಡಿ 3 ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ.

•           ಆಯುಷ್ಮಾನ್ ಭಾರತ ಯೋಜನೆ ಅಡಿ ದೇಶದ 50 ಕೋಟಿ ಜನರಿಗೆ 5 ಲಕ್ಷ ರೂ. ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ.

•           ಮಾತೃವಂದನಾ ಯೋಜನೆ ಅಡಿ ಗರ್ಭಿಣಿಯರಿಗೆ ಲಸಿಕೆ ಮತ್ತು ಪೌಷ್ಟಿಕ ಆಹಾರ ಒದಗಿಸಲು ನೇರ ನಗದು ವರ್ಗಾವಣೆ

•           ಕೊರೊನಾ ಸಂಕಷ್ಟ ಕಾಲದಲ್ಲಿ ಮಹಿಳೆಯರ ಜನ್|ಧನ್ ಖಾತೆಗಳಿಗೆ 30 ಸಾವಿರ ಕೋಟಿ ರೂ. ಠೇವಣಿ ಇಡಲಾಗಿದೆ.

•           ಜಲಜೀವನ್ ಮಿಷನ್ ಅಡಿ ನಮ್ಮ ಸಹೋದರಿಯರಿಗೆ ನಲ್ಲಿ ನೀರು ಸಂಪರ್ಕ

ಎಲ್ಲಾ ಯೋಜನೆಗಳಿಂದ ದೇಶದ ಮಹಿಳೆಯರ ಜೀವನದಲ್ಲಿ ಬೃಹತ್ ಪರಿವರ್ತನೆಗಳು ಉಂಟಾಗಿವೆ ಎಂದು ನರೇಂದ್ರ ಮೋದಿ ತಿಳಿಸಿದರು.

ಉಜ್ವಲ ಯೋಜನೆಯಿಂದ ನಮ್ಮ ಸಹೋದರಿಯರ ಆರೋಗ್ಯ, ಅನುಕೂಲ ಮತ್ತು ಸಬಲೀಕರಣ ಸಂಕಲ್ಪಕ್ಕೆ ಹೆಚ್ಚಿನ ಉತ್ತೇಜನ ನೀಡಿದೆ. ಯೋಜನೆಯ ಮೊದಲ ಹಂತದಲ್ಲಿ ಬಡವರು, ದಲಿತರು, ಶೋಷಿತರು, ಹಿಂದುಳಿದ ಮತ್ತು ಬುಡಕಟ್ಟು ಕುಟುಂಬಗಳ ಸುಮಾರು 8 ಕೋಟಿ ಮಹಿಳೆಯರಿಗೆ ಉಚಿತ ಎಲ್|ಪಿಜಿ ಅನಿಲ ಸಂಪರ್ಕ ಒದಗಿಸಲಾಗಿದೆ. ‘ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡಾಗ ಉಚಿತ ಅನಿಲ ಸಂಪರ್ಕದ ನೈಜ ಪ್ರಯೋಜನ ಮತ್ತು ಮಹತ್ವ ಫಲಾನುಭವಿಗಳಿಗೆ ಅರ್ಥವಾಗಿದೆ. ದೇಶದ ಕೋಟ್ಯಂತರ ಬಡ ಕುಟುಂಬಗಳು ತಿಂಗಳುಗಟ್ಟಲೆ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ಪಡೆದವು. ಸಾಂಕ್ರಾಮಿಕ ಸೋಂಕು ವ್ಯಾಪಕವಾದಾಗ  ದೇಶದಲ್ಲಿ ವ್ಯಾಪಾರ ವಹಿವಾಟು ನಿಂತು ಹೋಯಿತು, ಸಂಚಾರ ನಿರ್ಬಂಧಿಸಲಾಯಿತು. ಆಗ ನೀವೇ ಊಹಿಸಿ, ಉಜ್ವಲಾ ಇಲ್ಲದಿದ್ದರೆ, ಬಡ ಸಹೋದರಿಯರ ಸ್ಥಿತಿ ಏನಾಗುತ್ತಿತ್ತು ಎಂಬುದನ್ನುಎಂದು ಪ್ರಧಾನಿ ಉಲ್ಲೇಖಿಸಿದರು.

***



(Release ID: 1744766) Visitor Counter : 323