ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದಲ್ಲಿ ಒಟ್ಟು 50.86 ಕೋಟಿ ದಾಟಿದ ಕೋವಿಡ್ – 19 ಲಸಿಕೆ
ಭಾರತದಲ್ಲಿ ಅತಿ ಹೆಚ್ಚು 97.40% ಕ್ಕೆ ತಲುಪಿದ ಚೇತರಿಕೆ ದರ
ಕಳೆದ 24 ಗಂಟೆಗಳಲ್ಲಿ 35,499 ದೈನಂದಿನ ಹೊಸ ಪ್ರಕರಣ ದಾಖಲು
ಭಾರತದಲ್ಲಿ ಸಕ್ರಿಯ ಪ್ರಕರಣಗಳು (4,02,188) ಪ್ರಸ್ತುತ ಒಟ್ಟು ಸಂಖ್ಯೆಯಲ್ಲಿ 1.26% ರಷ್ಟಿದೆ
ದೈನಂದಿನ ಚೇತರಿಕೆ ದರ (2.59%) ಕಳೆದ 14 ದಿನಗಳಿಂದ ಶೇ 3ಕ್ಕಿಂತ ಕಡಿಮೆ
Posted On:
09 AUG 2021 10:15AM by PIB Bengaluru
ಭಾರತದಲ್ಲಿ ಕೋವಿಡ್ – 19 ಲಸಿಕೆ ಪ್ರಮಾಣ 50.86 ಕೋಟಿ ದಾಟಿದ್ದು, ಇಂದು ಬೆಳಿಗ್ಗೆ 7 ಗಂಟೆಗೆ ದೊರೆತ ತಾತ್ಕಾಲಿಕ ವರದಿ ಪ್ರಕಾರ 58,79,068 ಅವಧಿಗಳಲ್ಲಿ 50,86,64,759 ಲಸಿಕೆ ಡೋಸ್ ಗಳನ್ನು ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 16,11,590 ಲಸಿಕೆ ಡೋಸ್ ಗಳನ್ನು ಹಾಕಲಾಗಿದೆ.
ಇವುಗಳನ್ನು ಒಳಗೊಂಡಂತೆ :
ಎಚ್.ಸಿ,ಡಬ್ಲ್ಯೂ ಗಳು
|
ಮೊದಲ ಡೋಸ್
|
1,03,32,881
|
ಎರಡನೇ ಡೋಸ್
|
79,82,037
|
ಎಫ್.ಎಲ್.ಡಬ್ಲ್ಯೂ ಗಳು
|
ಮೊದಲ ಡೋಸ್
|
1,82,17,136
|
ಎರಡನೇ ಡೋಸ್
|
1,17,58,909
|
18-44 ವಯೋಮಿತಿಯೊಳಗಿನವರು
|
ಮೊದಲ ಡೋಸ್
|
17,67,66,853
|
ಎರಡನೇ ಡೋಸ್
|
1,20,24,776
|
45-59 ವಯೋಮಿತಿಯೊಳಗಿನವರು
|
ಮೊದಲ ಡೋಸ್
|
11,18,71,679
|
ಎರಡನೇ ಡೋಸ್
|
4,26,95,084
|
60 ವರ್ಷ ದಾಟಿದವರು
|
ಮೊದಲ ಡೋಸ್
|
7,84,79,044
|
ಎರಡನೇ ಡೋಸ್
|
3,85,36,360
|
ಒಟ್ಟು
|
50,86,64,759
|
ಕೋವಿಡ್ – 19 ಲಸಿಕೆಯ ಹೊಸ ಸಾರ್ವತ್ರೀಕರಣದ ಹಂತ 2021 ರ ಜೂನ್ 21 ರಿಂದ ಪ್ರಾರಂಭವಾಗಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಕೋವಿಡ್ – 19 ಲಸಿಕೆಯ ವೇಗ ಹೆಚ್ಚಿಸಲು ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು ಬದ್ಧವಾಗಿದೆ. ಮತ್ತೊಂದು ಸಕಾರಾತ್ಮಕ ಬೆಳವಣಿಗೆ ಎಂದರೆ ಭಾರತದ ಚೇತರಿಕೆ ದರ ಕಳೆದ 24 ಗಂಟೆಗಳಲ್ಲಿ 97.40% ಕ್ಕೆ ತಲುಪಿದೆ. ಸಾಂಕ್ರಾಮಿಕ ಅರಂಭವಾದ ನಂತರ ಅತಿ ಹೆಚ್ಚು ಚೇತರಿಕೆ ದರವನ್ನು ಸಾಧಿಸಲಾಗಿದೆ. ಸಾಂಕ್ರಾಮಿಕ ಆರಂಭವಾದ ನಂತರದಿಂದ 3,11,39,457 ಮಂದಿ ಗುಣಮುಖರಾಗಿದ್ದು, ಕಳೆದ 24 ಗಂಟೆಗಳಲ್ಲಿ 39,686 ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ 35,499 ದೈನಂದಿನ ಹೊಸ ಪ್ರಕರಣಗಳು ದಾಖಲಾಗಿದ್ದು, ನಿರಂತರ 43 ದಿನಗಳಿಂದ 50,000 ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ. ಕೇಂದ್ರ, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಪ್ರಯತ್ನದ ಫಲವಾಗಿ ಈ ಫಲಿತಾಂಶ ಬಂದಿದೆ.

ಭಾರತದಲ್ಲಿ ಪ್ರಸ್ತುತ 4,02,188 ಸಕ್ರಿಯ ಪ್ರಕರಣಗಳು ದಾಖಲಾಗಿವೆ ಮತ್ತು ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳು 1.26% ರಷ್ಟಿದೆ.

ದೇಶದ ಪರೀಕ್ಷೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 13,71,871 ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತದಲ್ಲಿ ಈ ವರೆಗೆ 48 ಕೋಟಿಗೂ ಹೆಚ್ಚು (48,17,67,232) ಪರೀಕ್ಷೆಗಳನ್ನು ನಡೆಸಲಾಗಿದೆ.
ಒಂದು ಕಡೆ ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗಿದ್ದು, ಮತ್ತೊಂದೆಡೆ ವಾರದ ಪಾಸಿಟಿವಿಟಿ ದರ ಪ್ರಸ್ತುತ 2.35% ರಷ್ಟಿದೆ ಮತ್ತು ದೈನಂದಿನ ಪಾಸಿಟಿವಿಟಿ ದರ ಸತತ 14 ದಿನಗಳಿಂದ 3% ಕ್ಕೂ ಕಡಿಮೆ ಇದೆ ಮತ್ತು 63 ದಿನಗಳಿಂದ 5% ಕ್ಕೂ ಕಡಿಮೆ ದಾಖಲಾಗುತ್ತಿದೆ.

****
(Release ID: 1744119)
Visitor Counter : 291