ಪ್ರಧಾನ ಮಂತ್ರಿಯವರ ಕಛೇರಿ

ಮಹಿಳಾ ಹಾಕಿಯಲ್ಲಿ ಸ್ವಲ್ಪದರಲ್ಲೇ ಪದಕ ನಮ್ಮ ಕೈತಪ್ಪಿದೆ, ಆದರೆ ಈ ತಂಡವು ನವ ಭಾರತದ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಿ

Posted On: 06 AUG 2021 10:01AM by PIB Bengaluru

ಮಹಿಳಾ ಹಾಕಿಯಲ್ಲಿ ಸ್ವಲ್ಪದರಲ್ಲೇ ಪದಕ ನಮ್ಮ ಕೈತಪ್ಪಿದೆ, ಆದರೆ ತಂಡವು ನವ ಭಾರತದ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ - ಇಲ್ಲಿ ನಾವು ನಮ್ಮ ಗರಿಷ್ಠ ಶಕ್ತಿ-ಸಾಮರ್ಥ್ಯಗಳೊಂದಿಗೆ ಪ್ರಯತ್ನಿಸುತ್ತೇವೆ ಮತ್ತು ಹೊಸ ಎತ್ತರಗಳನ್ನು ತಲುಪುತ್ತೇವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಟೋಕಿಯೊ ʻಒಲಿಂಪಿಕ್ಸ್ 2020ʼನಲ್ಲಿ ನಮ್ಮ ಮಹಿಳಾ ಹಾಕಿ ತಂಡದ ಶ್ರೇಷ್ಠ ಪ್ರದರ್ಶನ ನಮ್ಮ ನೆನಪಿನಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಅವರು ಹೇಳಿದ್ದಾರೆ.

ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ, "ಟೋಕಿಯೊ ಒಲಿಂಪಿಕ್ಸ್‌ನಲ್ಲಿ#Tokyo2020 ನಮ್ಮ ಮಹಿಳಾ ಹಾಕಿ ತಂಡದ ಶ್ರೇಷ್ಠ ಪ್ರದರ್ಶನ ನಮ್ಮ ನೆನಪಿನಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ಅವರು ಕ್ರೀಡಾಕೂಟದುದ್ದಕ್ಕೂ ತಮ್ಮ ಅತ್ಯುತ್ತಮವಾದುದನ್ನು ನೀಡಿದರು. ತಂಡದ ಪ್ರತಿಯೊಬ್ಬ ಸದಸ್ಯರೂ ಗಮನಾರ್ಹ ದಿಟ್ಟತನ, ಕೌಶಲ್ಯ ಮತ್ತು ಚೈತನ್ಯವನ್ನು ವರದಾನವಾಗಿ ಪಡೆದಿದ್ದಾರೆ. ಶ್ರೇಷ್ಠ ತಂಡದ ಬಗ್ಗೆ ಇಡೀ ಭಾರತವೇ ಹೆಮ್ಮೆ ಪಡುತ್ತದೆ.

ಮಹಿಳಾ ಹಾಕಿಯಲ್ಲಿ ಸ್ವಲ್ಪದರಲ್ಲೇ ಪದಕ ನಮ್ಮ ಕೈತಪ್ಪಿದೆ. ಆದರೆ ತಂಡವು ನವ ಭಾರತದ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ- ಇಲ್ಲಿ ನಾವು ನಮ್ಮ ಗರಿಷ್ಠ ಶಕ್ತಿ-ಸಾಮರ್ಥ್ಯಗಳೊಂದಿಗೆ ಪ್ರಯತ್ನಿಸುತ್ತೇವೆ ಮತ್ತು ಹೊಸ ಎತ್ತರಗಳನ್ನು ತಲುಪುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ #Tokyo2020 ಮಹಿಳಾ ಹಾಕಿ ತಂಡದ ಯಶಸ್ಸು ಭಾರತದ ಯುವ ಹೆಣ್ಣುಮಕ್ಕಳನ್ನು ಹಾಕಿಯತ್ತ ಸೆಳೆಯುತ್ತದೆ ಮತ್ತು ಅದರಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ತಂಡದ ಬಗ್ಗೆ ಹೆಮ್ಮೆ ಪಡುತ್ತೇನೆ." ಎಂದು ಹೇಳಿದ್ದಾರೆ.

***



(Release ID: 1743063) Visitor Counter : 228