ಪ್ರಧಾನ ಮಂತ್ರಿಯವರ ಕಛೇರಿ

ಟೋಕಿಯೋ ಒಲಿಂಪಿಕ್ಸ್ 2020ರ ಬಾಕ್ಸಿಂಗ್ ನಲ್ಲಿ ಕಂಚಿನ ಪದಕ ಗೆದ್ದ ಲೊವ್ಲಿನಾ ಬೊರ್ಗೊಹೈನ್ ಗೆ ಪ್ರಧಾನಮಂತ್ರಿ ಅಭಿನಂದನೆ

प्रविष्टि तिथि: 04 AUG 2021 12:04PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟೋಕಿಯೋ ಒಲಿಂಪಿಕ್ಸ್ 2020 ಬಾಕ್ಸಿಂಗ್ ನಲ್ಲಿ ಕಂಚಿನ ಪದಕ ಗೆದ್ದ ಲೊವ್ಲಿನಾ ಬೊರ್ಗೊಹೈನ್ ಅವರನ್ನು ಅಭಿನಂದಿಸಿದ್ದಾರೆಅವರ ದೃಢತೆ ಮತ್ತು ದೃಢ ನಿರ್ಧಾರ ಶ್ಲಾಘನೀಯವಾದ್ದು ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು: "@LovlinaBorgohai! ಉತ್ತಮವಾಗಿ ಹೋರಾಡಿದ್ದಾರೆ. ಬಾಕ್ಸಿಂಗ್ ರಿಂಗ್ ನಲ್ಲಿ ಅವರ ಯಶಸ್ಸು ಹಲವು ಭಾರತೀಯರಿಗೆ ಸ್ಫೂರ್ತಿ ನೀಡುತ್ತದೆ. ಅವರ ದೃಢತೆ ಮತ್ತು ದೃಢ ಸಂಕಲ್ಪ ಶ್ಲಾಘನಾರ್ಹವಾದ್ದು. ಕಂಚಿನ ಪದಕ ಗೆದ್ದ ಅವರಿಗೆ ಅಭಿನಂದನೆಗಳು. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು. #Tokyo2020" ಎಂದು ತಿಳಿಸಿದ್ದಾರೆ.

***


(रिलीज़ आईडी: 1742208) आगंतुक पटल : 323
इस विज्ञप्ति को इन भाषाओं में पढ़ें: Telugu , English , Urdu , Marathi , हिन्दी , Assamese , Manipuri , Bengali , Punjabi , Gujarati , Odia , Tamil , Malayalam