ಪ್ರಧಾನ ಮಂತ್ರಿಯವರ ಕಛೇರಿ

ಚಂಡಿಘರ್ ಮೂಲದ ಆಹಾರ ಮಳಿಗೆ ಮಾಲೀಕರನ್ನು ತಮ್ಮ ಮಾಸಿಕ “ ಮನ್ ಕಿ ಬಾತ್ “ ಭಾಷಣದಲ್ಲಿ  ಶ್ಲಾಘಿಸಿದ ಪ್ರಧಾನಮಂತ್ರಿ

प्रविष्टि तिथि: 25 JUL 2021 4:13PM by PIB Bengaluru

ರೇಡಿಯೋ ಮೂಲಕ ದೇಶವನ್ನುದ್ದೇಶಿಸಿ ಮನ್ ಕಿ ಬಾತ್ ಮೂಲಕ ಭಾಷಣ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಂಡಿಘರ್ ಮೂಲದ ಆಹಾರ ಮಳಿಗೆ ಮಾಲೀಕರು ಕೋವಿಡ್ 19 ವಿರುದ್ಧ ಲಸಿಕೆ ಪಡೆಯಲು ಇತರರನ್ನು ಪ್ರೇರೇಪಿಸುತ್ತಿರುವ ಉಪಕ್ರಮದ ಬಗ್ಗೆ ಶ್ಲಾಘಿಸಿದ್ದಾರೆ.

 

ತಮ್ಮ ಮಗಳು ಮತ್ತು ಸೋದರ ಸೊಸೆಯ ಸಲಹೆ ಮೇರೆಗೆ ಆಹಾರ ಮಳಿಗೆ ಮಾಲೀಕ ಶ್ರೀ ಸಂಜಯ್ ರಾಣಾ ಅವರು ಕೋವಿಡ್ ಲಸಿಕೆ ಪಡೆದವರಿಗೆ ಉಚಿತವಾಗಿ ಚೋಲೆ ಭತೂರೆ ನೀಡುವ ಕೆಲಸ ಆರಂಭಿಸಿರುವ ಕ್ರಮದ ಬಗ್ಗೆ  ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಚಂಡಿಘರ್ 29 ನೇ ವಿಭಾಗದಲ್ಲಿ ಬೈಸಿಕಲ್ ಮೂಲಕ ಮಾಲೀಕರು ಚೋಲೆ ಭತೂರೆ ಮಾರಾಟ ಮಾಡುತ್ತಿದ್ದಾರೆ ಮತ್ತು ಪ್ರತಿದಿನ ಲಸಿಕೆ ಹಾಕಿಸಿಕೊಂಡಿರುವ ದಾಖಲೆ ತೋರಿಸಿದರೆ ಉಚಿತವಾಗಿ ಊಟ ನೀಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ. ಪ್ರಯತ್ನ ಶ್ಲಾಘನೀಯ. ಸಮಾಜದ ಕಲ್ಯಾಣಕ್ಕಾಗಿ ಸೇವಾ ಸ್ಫೂರ್ತಿ ಮತ್ತು ಕರ್ತವ್ಯ ಪ್ರಜ್ಞೆ, ಹಣಕ್ಕಿಂತ ಹೆಚ್ಚಿನದನ್ನು ಬಯಸುತ್ತದೆ ಎಂಬುದನ್ನು ಅವರ ಕೆಲಸ ನಿರೂಪಿಸುತ್ತದೆ ಎಂದು ಹೇಳಿದ್ದಾರೆ

***


(रिलीज़ आईडी: 1738923) आगंतुक पटल : 269
इस विज्ञप्ति को इन भाषाओं में पढ़ें: Telugu , English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil