ಪ್ರಧಾನ ಮಂತ್ರಿಯವರ ಕಛೇರಿ

ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದ ಮೀರಾಬಾಯ್ ಚಾನುಗೆ ಪ್ರಧಾನಮಂತ್ರಿ ಅಭಿನಂದನೆ



Posted On: 24 JUL 2021 12:55PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದ ಮೀರಾಬಾಯ್ ಚಾನುಗೆ ಅಭಿನಂದನೆ ಸಲ್ಲಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "@ಟೋಕಿಯೋ 2020!ರಲ್ಲಿ ಇದಕ್ಕಿಂತ ಸಂತಸದ ಆರಂಭ ಮತ್ತೊಂದಿಲ್ಲ. ಭಾರತವು @ mirabai_chanu ಅವರ ಅದ್ಭುತ ಪ್ರದರ್ಶನದಿಂದ ಸಂತಸಗೊಂಡಿದೆ. ಭಾರ ಎತ್ತುವ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರ ಯಶಸ್ಸು ಪ್ರತಿಯೊಬ್ಬ ಭಾರತೀಯನನ್ನು ಪ್ರೇರೇಪಿಸುತ್ತದೆ. # ಚೀರ್ 4 ಇಂಡಿಯಾ # ಟೋಕಿಯೊ 2020" ಎಂದು ತಿಳಿಸಿದ್ದಾರೆ. 

***


(Release ID: 1738525) Visitor Counter : 246