ಸಂಪುಟ
ಉಕ್ಕು ಉತ್ಪಾದನೆಗೆ ಬಳಸುವ ‘ಕೋಕಿಂಗ್ ಕಲ್ಲಿದ್ದಲು’ ಪೂರೈಕೆ ಸಹಕಾರ ಬಲವರ್ಧನೆಯ ಭಾರತ-ರಷ್ಯಾ ತಿಳಿವಳಿಕೆ ಪತ್ರಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ
Posted On:
14 JUL 2021 4:06PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ‘ಉಕ್ಕು ಉತ್ಪಾದನೆಗೆ ಬಳಸುವ ಕೋಕಿಂಗ್ ಕಲ್ಲಿದ್ದಲು ಪೂರೈಕೆ’ಯ ಸಹಕಾರ ಬಲವರ್ಧನೆಯ ಭಾರತ-ರಷ್ಯಾ ನಡುವಿನ ತಿಳಿವಳಿಕೆ ಪತ್ರಕ್ಕೆ ಅನುಮೋದನೆ ನೀಡಲಾಗಿದೆ. ಭಾರತ ಸರ್ಕಾರದ ಉಕ್ಕು ಸಚಿವಾಲಯ ಮತ್ತು ರಷ್ಯಾ ಸರ್ಕಾರದ ಇಂಧನ ಸಚಿವಾಲಯದ ನಡುವೆ ಸಹಕಾರ ಒಪ್ಪಂದ ಏರ್ಪಟ್ಟಿದೆ.
ಆಮ್ಲಜನಕ ಕೊರತೆಯಲ್ಲಿ 600 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ಕಚ್ಚಾ ಕಲ್ಲಿದ್ದಲನ್ನು ಕಾಯಿಸಿ ಕೋಕಿಂಗ್ ಕಲ್ಲಿದ್ದಲಾಗಿ ಪರಿವರ್ತಿಸಲಾಗುತ್ತದೆ. ಈ ಕಲ್ಲಿದ್ದಲನ್ನು ಉಕ್ಕು ಉತ್ಪಾದನೆಗೆ ವ್ಯಾಪಕವಾಗಿ ಬಳಸಲಾಗುತ್ತದೆ.
ಪ್ರಯೋಜನಗಳು:
• ಭಾರತದ ಉಕ್ಕು ಉದ್ಯಮಕ್ಕೆ ಈ ಒಪ್ಪಂದದಿಂದ ಉತ್ಪಾದನಾ ವೆಚ್ಚ ತಗ್ಗಲಿದೆ. ಇದರಿಂದ ದೇಶದಲ್ಲಿ ಉಕ್ಕಿನ ಬೆಲೆ ತಗ್ಗಲಿದೆ. ಜತೆಗೆ, ಉಕ್ಕಿನ ಬಳಕೆ ಹೆಚ್ಚಾಗಿ, ಉದ್ಯಮದ ಉತ್ತೇಜನ ಸಾಧ್ಯವಾಗಲಿದೆ. ಈ ವಲಯದ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ.
• ಭಾರತ – ರಷ್ಯಾ ನಡುವೆ ಕೋಕಿಂಗ್ ಕಲ್ಲಿದ್ದಲು ವಲಯದಲ್ಲಿ ಸಹಕಾರ ಹೊಂದಲು ಈ ತಿಳಿವಳಿಕೆ ಪತ್ರವು ಸಾಂಸ್ಥಿಕ ವ್ಯವಸ್ಥೆಯನ್ನು ಒದಗಿಸಲಿದೆ.
• ಭಾರತ –ರಷ್ಯಾ ಸರ್ಕಾರಗಳ ನಡುವೆ ಉಕ್ಕು ವಲಯದ ಸಹಕಾರ ಬಲವರ್ಧನೆಯೇ ಈ ತಿಳಿವಳಿಕೆ ಪತ್ರದ ಪ್ರಮುಖ ಉದ್ದೇಶವಾಗಿದೆ. ಉಭಯ ರಾಷ್ಟ್ರಗಳ ಸಹಕಾರ ಒಪ್ಪಂದದಲ್ಲಿ ಕೋಕಿಂಗ್ ಕಲ್ಲಿದ್ದಲು ಬಳಕೆಯನ್ನು ವೈವಿಧ್ಯಮಯಗೊಳಿಸುವ ಚಟುವಟಿಕೆಗಳು ಈ ತಿಳಿವಳಿಕೆ ಪತ್ರದಲ್ಲಿ ಸೇರಿವೆ.
***
(Release ID: 1735490)
Visitor Counter : 288
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam