ಪಂಚಾಯತ್ ರಾಜ್ ಸಚಿವಾಲಯ

ಸ್ವಾಮಿತ್ವ ಅನುಷ್ಠಾನದಲ್ಲಿನ ಪ್ರಗತಿಯನ್ನು ಪರಿಶೀಲಿಸಿದ ಸರ್ಕಾರ


ಪಂಚಾಯತ್ ರಾಜ್ ಸಂಸ್ಥೆಗಳ ಬಲವರ್ಧನೆಗೆ ಇತರ ಸಚಿವಾಲಯಗಳು/ಅನುಷ್ಠಾನ ಇಲಾಖೆಗಳೊಂದಿಗೆ ಒಮ್ಮತ ಸಾಧಿಸಬಹುದು:ಶ್ರೀ ಗಿರಿರಾಜ್ ಸಿಂಗ್

ಪಂಚಾಯತ್ ರಾಜ್ ಸಚಿವಾಲಯದ ಯೋಜನೆ ಮತ್ತು ಕಾರ್ಯಕ್ರಮಗಳ ಅನುಷ್ಠಾನದ ಸ್ಥಿತಿ ಕುರಿತಂತೆ ಸಚಿವರಿಗೆ ವಿವರಣೆ, ಹಲವು ವಿಷಯಗಳ ಬಗ್ಗೆ ಚರ್ಚೆ

Posted On: 13 JUL 2021 3:42PM by PIB Bengaluru

ಪಂಚಾಯತ್  ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ  ಶ್ರೀ ಗಿರಿರಾಜ್ ಸಿಂಗ್ ಮತ್ತು ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವ ಕಪಿಲ್ ಮೋರೇಶ್ವರ್ ಪಾಟೀಲ್ ಅವರು ಸ್ವಾಮಿತ್ವ ಯೋಜನೆ ಮತ್ತು ಪಂಚಾಯತಿ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದರುಶ್ರೀ ಗಿರಿರಾಜ್ ಸಿಂಗ್, ಇತರ ಸಚಿವಾಲಯಗಳು/ ಅನುಷ್ಠಾನ ಇಲಾಖೆಗಳೊಂದಿಗೆ ಅಂದರೆ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ; ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ; ಗ್ರಾಮೀಣಾಭಿವೃದ್ಧಿ ಸಚಿವಾಲಯ; ಜಲಶಕ್ತಿ ಸಚಿವಾಲಯ; ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಸಚಿವಾಲಯ ಇತ್ಯಾದಿಗಳೊಂದಿಗೆ ಒಮ್ಮತದಿಂದ ಪಂಚಾಯತಿ ರಾಜ್ಯ ಸಂಸ್ಥೆಗಳನ್ನು ಬಲಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

2022 ಮುಂಬರುವ 75ನೇ ಸ್ವಾತಂತ್ರ್ಯ ದಿನಾಚರಣೆಯೊಂದಿಗೆ (ಆಜಾದಿ ಅಮೃತ ಮಹೋತ್ಸವ), ಗ್ರಾಮಸಭೆಗಳ ಸಭೆಗಳನ್ನು ಸಾಂಸ್ಥೀಕರಣಗೊಳಿಸಬೇಕೆಂದು ಪಂಚಾಯತ್ ರಾಜ್  ಸಚಿವರು ಬಯಸಿದರು, ಅಂತಹ ಸಭೆಗಳಲ್ಲಿ ವಿಶಾಲ ಮಟ್ಟದ ಕಾರ್ಯಸೂಚಿಗಳು/ ಚರ್ಚೆಗಳ ಕೇಂದ್ರೀಕೃತ ಕ್ಷೇತ್ರಗಳ ಬಗ್ಗೆ ವಿವರಿಸಿದರು.

ಪಂಚಾಯತ್ ರಾಜ್ ಖಾತೆ ಶ್ರೀ ಕಪಿಲ್ ಮೋರೇಶ್ವರ್ ಪಾಟೀಲ್, ಪಂಚಾಯತ್ ರಾಜ್ ಸಂಸ್ಥೆಗಳೊಂದಿಗೆ ತಮ್ಮ ಶ್ರೀಮಂತ ಅನುಭವವನ್ನು ಮುಂದಿಟ್ಟು, ಪಂಚಾಯತ್ ರಾಜ್ ಸಂಸ್ಥೆಗಳು ತಮ್ಮದೇ ಆದಾಯ ಹೆಚ್ಚಿಸಿಕೊಳ್ಳುವ ಅಗತ್ಯ ಪ್ರತಿಪಾದಿಸಿದರು.

ಪರಿಶೀಲನಾ ಸಭೆಯ ವೇಳೆ, ಕೇಂದ್ರೀಯ ಹಣಕಾಸು ಆಯೋಗದ (ಸಿ.ಎಫ್‌.ಸಿ.) ಅಡಿಯಲ್ಲಿನ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚಗಳಿಗೆ ಸಂಬಂಧಿಸಿದ ವಿಷಯಗಳು, ಅನುಷ್ಠಾನ ಸಚಿವಾಲಯಗಳು/ಇಲಾಖೆಗಳ ಮಧ್ಯಸ್ಥಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು -ಗ್ರಾಮ್ ಸ್ವರಾಜ್‌ ಗೆ ರವಾನಿಸುವುದು, ಪಂಚಾಯತ್ ರಾಜ್ ಸಚಿವಾಲಯದ ಪೋರ್ಟಲ್‌ ಗಳು/ ಡ್ಯಾಶ್‌ ಬೋರ್ಡ್‌ ಗಳ ವರ್ಧನೆ ಮತ್ತು ಪುಷ್ಟೀಕರಣಕ್ಕಾಗಿ ಗ್ರಾಮ್‌ ಸ್ವರಾಜ್ ನಂತಹ ಸಹಯೋಗದ ಪ್ರಯತ್ನಗಳು, ಸ್ಥಳೀಯ ಸರ್ಕಾರಿ ಡೈರೆಕ್ಟರಿ (ಎಲ್‌.ಜಿ.ಡಿ) ಇತ್ಯಾದಿಗಳನ್ನು ನಿಯಮಿತವಾಗಿ ಸೂಕ್ತವಾದ/ಅಗತ್ಯವಾದ ವಿಷಯ ವ್ಯಾಪ್ತಿಯ ವಿಚಾರದಲ್ಲಿ, ಗ್ರಾಮ ಪಂಚಾಯಿತಿವಾರು ಒಟ್ಟುಗೂಡಿಸುವುದು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ, ಪಂಚಾಯತ್ ರಾಜ್ ಸಚಿವಾಲಯದ ಕಾರ್ಯಕ್ರಮಗಳು/ಉಪಕ್ರಮಗಳನ್ನು ವಿವಿಧ ಅನುಷ್ಠಾನ ಇಲಾಖೆಗಳು ಅಂದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಕೃಷಿ, ಪಶುಸಂಗೋಪನೆ ಇತ್ಯಾದಿ ಇಲಾಖೆಗಳೊಂದಿಗೆ ಒಗ್ಗೂಡಿಸುವುದು, ಗ್ರಾಮ ಪಂಚಾಯತ್ ಭವನಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ, ಸಾಮಾನ್ಯ ಸೇವಾ ಕೇಂದ್ರಗಳ (ಸಿ.ಎಸ್‌.ಸಿ) ಪಾತ್ರ ಮತ್ತು ಸೇವೆಗಳು ಹಾಗೂ ಗ್ರಾಮ ಮಟ್ಟದ ಉದ್ಯಮಿಗಳ ಬಗ್ಗೆ ಚರ್ಚಿಸಲಾಯಿತು.

ಪಂಚಾಯತ್ ರಾಜ್ ಸಚಿವಾಲಯ ಅಧಿಕಾರ ವಹಿಸಿಕೊಂಡ ತರುವಾಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ  ಗಿರಿರಾಜ್ ಸಿಂಗ್ ಅವರು ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವ ಶ್ರೀ ಕಪಿಲ್ ಮೋರೇಶ್ವರ್ ಪಾಟೀಲ್ ಅವರೊಂದಿಗೆ ವಿವರ ಪಡೆದು, ಪಂಚಾಯತ್ ರಾಜ್ ಇಲಾಖೆಯಲ್ಲಿ ಪ್ರಗತಿಯಲ್ಲಿರುವ ವಿವಿಧ ಯೋಜನೆಗಳು, ಚಟುವಟಿಕೆಗಳು ಮತ್ತು ಉಪಕ್ರಮಗಳ ಬಗ್ಗೆ ನವದೆಹಲಿಯ ಕೃಷಿ ಭವನದಲ್ಲಿ 2021 ಜುಲೈ 9ರಂದು ಚರ್ಚಿಸಿದರು.

ಪರಿಚಯಾತ್ಮಕ ಪರಿಶೀಲನಾ ಸಭೆಯಲ್ಲಿ, ಪಂಚಾಯತಿ ರಾಜ್ ಸಚಿವಾಲಯದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನದ ಸ್ಥಿತಿಗತಿಗಳ ಬಗ್ಗೆ ಸಚಿವರಿಗೆ ವಿವರಿಸಲಾಯಿತು. ಸಭೆಯಲ್ಲಿ ಸಚಿವಾಲಯದ ಎಲ್ಲಾ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಪರಿಶೀಲನಾ ಸಭೆಯಲ್ಲಿ ಕಾರ್ಯದರ್ಶಿ ಶ್ರೀ ಸುನಿಲ್ ಕುಮಾರ್, ಹೆಚ್ಚುವರಿ ಕಾರ್ಯದರ್ಶಿ ಶ್ರೀ (ಡಾ) ಚಂದ್ರಶೇಖರ್ ಕುಮಾರ್ ಮತ್ತು ಪಂಚಾಯತ್ ರಾಜ್ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

***


(Release ID: 1735130) Visitor Counter : 255