ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಯೋಜನೆ - 4ರಅಡಿಯಲ್ಲಿ ವಿತರಣೆಗಾಗಿ 15.30 ಎಲ್ಎಂ ಟಿ ಉಚಿತ ಆಹಾರ ಧಾನ್ಯಗಳನ್ನು 31 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಪಡೆದಿವೆ


ಪಿಎಮ್ ಜಿ ಕೆ ಎ ವೈ – 3ರ ಅಡಿಯಲ್ಲಿ ಎಲ್ಲಾ 36 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು 78.26 ಎಲ್ಎಂಟಿ ಉಚಿತ ಆಹಾರ ಧಾನ್ಯಗಳನ್ನು ಪಡೆದಿವೆ

ಆಹಾರ ಧಾನ್ಯಗಳ ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು, ಎಫ್ ಸಿಐ ದೇಶಾದ್ಯಂತ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸಾಗಿಸುತ್ತಿದೆ

ಏಪ್ರಿಲ್ 1 2021 ರಿಂದ 4005 ಆಹಾರ ಧಾನ್ಯದ ರೈಲು ರೇಕ್ ಗಳನ್ನು ಎಫ್ ಸಿಐ  ತುಂಬಿಸಿ ಸಾಗಿಸಿದೆ

Posted On: 13 JUL 2021 3:29PM by PIB Bengaluru

ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸುವ ಅತ್ಯಂತ ದೀರ್ಘ ಕಾರ್ಯವನ್ನು  ಭಾರತ ಸರ್ಕಾರ ನಡೆಸುತ್ತಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆಯನ್ನು 5 ತಿಂಗಳವರೆಗೆ ವಿಸ್ತರಿಸಿದೆ, ಅಂದರೆ ಜುಲೈ-ನವೆಂಬರ್ 2021ವರೆಗೆ ಮತ್ತು 198.79 ಎಲ್ಎಂಟಿ ಆಹಾರ ಧಾನ್ಯಗಳನ್ನು ಪಿಎಂಜಿಕೆಎವೈ-4   ಅಡಿಯಲ್ಲಿ ಹಂಚಿಕೆ ಮಾಡಲಾಗಿದೆ.

ಪಿಎಂಜಿಕೆಎವೈ-4 (ಜುಲೈ-ನವೆಂಬರ್ 2021) ಅಡಿಯಲ್ಲಿ 31 ರಾಜ್ಯಗಳು ಅಂದರೆ ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ಗಢ್, ದಾದ್ರ ಮತ್ತು ನಗರ ಹವೇಲಿದಮನ್ ಮತ್ತು ಡಿಯು, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಲಡಾಖ್, ಮಧ್ಯಪ್ರದೇಶ , ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳವು 15.30 ಎಲ್ಎಂಟಿ ಆಹಾರ ಧಾನ್ಯಗಳನ್ನು  ಜುಲೈ 12, 2021ರವರೆಗೆ ಪಡೆದಿವೆ.

ಪಿಎಂಜಿಕೆಎವೈ- 4 ಯಶಸ್ವಿ ಅನುಷ್ಠಾನಕ್ಕಾಗಿ ಭಾರತದ ಆಹಾರ ನಿಗಮವು ಈಗಾಗಲೇ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಕಷ್ಟು ದಾಸ್ತಾನನ್ನು ಇರಿಸಿದೆಪ್ರಸ್ತುತ, ಸೆಂಟ್ರಲ್ ಪೂಲ್ ಅಡಿಯಲ್ಲಿ 583 ಎಲ್ಎಂಟಿ ಗೋಧಿ ಮತ್ತು 298 ಎಲ್ಎಂಟಿ ಅಕ್ಕಿ (ಒಟ್ಟು 881 ಎಲ್ಎಂಟಿ ಆಹಾರ ಧಾನ್ಯಗಳು) ಲಭ್ಯವಿದೆ.

ಪಿಎಂಜಿಕೆಎವೈ-3 (ಮೇ-ಜೂನ್ 2021) ಅಡಿಯಲ್ಲಿ ಭಾರತದ ಆಹಾರ ನಿಗಮವು ಎಲ್ಲಾ 36 ರಾಜ್ಯಗಳುಕೇಂದ್ರಾಡಳಿತ ಪ್ರದೇಶಗಳಿಗೆ 78.26 ಎಲ್ಎಂಟಿ ಉಚಿತ ಆಹಾರ ಧಾನ್ಯಗಳನ್ನು ಪೂರೈಸಿದೆ.

ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಎಫ್ಸಿಐ ದೇಶಾದ್ಯಂತ ಆಹಾರ ಧಾನ್ಯಗಳನ್ನು ಸಾಗಿಸುತ್ತಿದೆ. 1 ನೇ ಏಪ್ರಿಲ್ 2021 ರಿಂದ 4005 ಆಹಾರ ಧಾನ್ಯದ ರೈಲು ರೇಕ್ ಗಳನ್ನು ಎಫ್ಸಿಐ ತುಂಬಿಸಿ ಸಾಗಿಸಿದೆ.

***


(Release ID: 1735078) Visitor Counter : 342