ಪ್ರಧಾನ ಮಂತ್ರಿಯವರ ಕಛೇರಿ

ಮೊರಾನ್ ಮಾರ್ ಬೊಸಿಲಿಯೊಸ್ ಮಾರ್ಥೊಮಾ ಪೌಲಸ್-2 ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ

ಪ್ರಕಟಣಾ ದಿನಾಂಕ: 12 JUL 2021 9:51AM by PIB Bengaluru

ಇಂಡಿಯನ್ ಆರ್ಥೊಡಾಕ್ಸ್ ಚರ್ಚ್ (ಭಾರತೀಯ ಕಡು ಸಂಪ್ರದಾಯನಿಷ್ಠ ಚರ್ಚ್)ನ ಪರಮೋಚ್ಚ ಮುಖ್ಯಸ್ಥ ಮೊರಾನ್ ಮಾರ್ ಬೆಸೆಲಿಯೊಸ್ ಮಾರ್ಥೊಮಾ ಪೌಲಸ್-2 ಅವರ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಪಾರ ದುಃಖ ಮತ್ತು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ, “ಮೊರಾನ್ ಮಾರ್ ಬೆಸೆಲಿಯೊಸ್ ಮಾರ್ಥೊಮಾ ಪೌಲಸ್-2 ಅವರ ನಿಧನದಿಂದ ಅತೀವ ದುಃಖ ಉಂಟಾಗಿದೆ. ಸೇವೆ ಮತ್ತು ಸಹಾನುಭೂತಿಯ ಶ್ರೀಮಂತ ಪರಂಪರೆಯನ್ನು ಅವರು ಬಿಟ್ಟುಹೋಗಿದ್ದಾರೆ. ದುಃಖ ಮತ್ತು ಶೋಕದ ಈ ಸಂದರ್ಭದಲ್ಲಿ ಆರ್ಥೊಡಾಕ್ಸ್ ಚರ್ಚ್ ನ ಸದಸ್ಯರೆಲ್ಲರ ಜತೆ ನಾನು ದುಃಖ ಹಂಚಿಕೊಳ್ಳುತ್ತೇನೆ, ಚಿರ ಶಾಂತಿ ನೆಲೆಸಲಿ” ಎಂದು ಅವರು ಸಂತಾಪ ಸೂಚಿಸಿದ್ದಾರೆ.

***


(ಪ್ರಕಟಣೆ ಐ.ಡಿ.: 1734760) ವಿಸಿಟರ್ ಕೌಂಟರ್ : 238
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , Urdu , हिन्दी , Marathi , Manipuri , Assamese , Punjabi , Gujarati , Odia , Tamil , Telugu