ಪ್ರಧಾನ ಮಂತ್ರಿಯವರ ಕಛೇರಿ
ಹೈಟಿ ಅಧ್ಯಕ್ಷ ಜೊವೆನೆಲ್ ಮೊಯ್ಸ್ ಹತ್ಯೆಗೆ ಪ್ರಧಾನ ಮಂತ್ರಿ ತೀವ್ರ ಶೋಕ
ಪ್ರಕಟಣಾ ದಿನಾಂಕ:
09 JUL 2021 8:23AM by PIB Bengaluru
ಹೈಟಿ ಅಧ್ಯಕ್ಷ ಜೊವೆನೆಲ್ ಮೊಯ್ಸ್ ಅವರ ಹತ್ಯೆ ಮತ್ತು ಅವರ ಪತ್ನಿ ಹಾಗೂ ಹೈಟಿ ಪ್ರಥಮ ಮಹಿಳೆ ಮಾರ್ಟಿನ್ ಮೊಯ್ಸ್ ಮೇಲೆ ನಡೆದ ದಾಳಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಹೈಟಿ ಅಧ್ಯಕ್ಷ ಜೊವೆನೆಲ್ ಮೊಯ್ಸ್ ಅವರ ಹತ್ಯೆ ಮತ್ತು ಅವರ ಪತ್ನಿ ಹಾಗೂ ಹೈಟಿ ಪ್ರಥಮ ಮಹಿಳೆ ಮಾರ್ಟಿನ್ ಮೊಯ್ಸ್ ಅವರ ಮೇಲಿನ ದಾಳಿ ದುರ್ಘಟನೆ ಬೇಸರ ತಂದಿದೆ.ಅಧ್ಯಕ್ಷ ಮೊಯ್ಸ್ ಕುಟುಂಬ ಮತ್ತು ಹೈಟಿ ಜನತೆಗೆ ಸಂತಾಪ ಸೂಚಿಸುತ್ತೇನೆ” ಎಂದಿದ್ದಾರೆ.
***
(ಪ್ರಕಟಣೆ ಐ.ಡಿ.: 1734147)
ವಿಸಿಟರ್ ಕೌಂಟರ್ : 260
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam