ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಲಸಿಕಾಕರಣ; ಕಟ್ಟುಕತೆ ಮತ್ತು ವಸ್ತುಸ್ಥಿತಿ


ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಜುಲೈ ತಿಂಗಳಲ್ಲಿ ಲಭ್ಯವಾಗುವ ಲಸಿಕಾ ಡೋಸ್ ಗಳ ಬಗ್ಗೆ ಸಾಕಷ್ಟು ಮುಂಚಿತವಾಗಿಯೇ ತಿಳಿಸಲಾಗುತ್ತಿದೆ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಜುಲೈಯಲ್ಲಿ 12 ಕೋಟಿ ಡೋಸ್ ಗಳಿಗೂ ಅಧಿಕ ಪ್ರಮಾಣದ ಲಸಿಕೆ ಲಭಿಸಲಿದೆ

Posted On: 07 JUL 2021 4:51PM by PIB Bengaluru

ಕಳೆದ ವಾರದಲ್ಲಿ ಅದಕ್ಕಿಂತ ಹಿಂದಿನ ವಾರಕ್ಕೆ ಹೋಲಿಸಿದರೆ 32 % ನಷ್ಟು ಕಡಿಮೆ ಪ್ರಮಾಣದಲ್ಲಿ ಲಸಿಕಾಕರಣ ಆಗಿದೆ ಎಂಬ ಆರೋಪದ ವರದಿಗಳು ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಬಂದಿವೆ.

ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 2021ರ ಜುಲೈ ತಿಂಗಳಲ್ಲಿ ಲಭ್ಯವಾಗುವ ಲಸಿಕಾ ಡೋಸ್ ಗಳ ಬಗ್ಗೆ ಸಾಕಷ್ಟು ಮುಂಚಿತವಾಗಿಯೇ ಮಾಹಿತಿ ನೀಡಲಾಗುತ್ತದೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆಯಾಗುವ ಲಸಿಕಾ ಪ್ರಮಾಣದ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ ಎಂದು ಸ್ಪಷ್ಟೀಕರಿಸಲಾಗಿದೆ.ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ ಲಸಿಕೆ ಲಭ್ಯತೆಯನ್ನು ಆಧರಿಸಿ ಅವುಗಳ ಕೋವಿಡ್ -19 ಲಸಿಕಾಕರಣದ ಯೋಜನೆಯನ್ನು ರೂಪಿಸಿಕೊಳ್ಳುವಂತೆ ಸಲಹೆ ಮಾಡಲಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಉತ್ಪಾದಕರ ಜೊತೆಗಿನ ಮಾತುಕತೆಯನ್ನು ಆಧರಿಸಿ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 2021 ರ ಜುಲೈ ತಿಂಗಳಲ್ಲಿ ಅವುಗಳಿಗೆ ಒಟ್ಟು 12 ಕೋಟಿ ಡೋಸ್ ಗೂ ಅಧಿಕ ಪ್ರಮಾಣದ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿದೆ. ಇಂದು ಬೆಳಗ್ಗೆಯವರೆಗೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಜುಲೈ ತಿಂಗಳ ಪೂರೈಕೆಯಲ್ಲಿ 2.19 ಕೋಟಿಗೂ ಅಧಿಕ ಡೋಸ್ ಗಳನ್ನು ಈಗಾಗಲೇ ಒದಗಿಸಲಾಗಿದೆ. ಇದಲ್ಲದೆ ಅವುಗಳಿಗೆ ಕಳುಹಿಸಲಾಗುವ ಕೋವಿಡ್ ಲಸಿಕೆಗಳ ಪೂರೈಕೆಯ ಬಗ್ಗೆ ರಾಜ್ಯಗಳಿಗೆ ಸಾಕಷ್ಟು ಮುಂಚಿತವಾಗಿ ತಿಳಿಸಲಾಗುತ್ತಿದೆ.

ಲಸಿಕಾ ಕಾರ್ಯಕ್ರಮದ ವ್ಯಾಪ್ತಿ ಹೆಚ್ಚಿರುವುದರಿಂದ ಹೆಚ್ಚಿನ ಪ್ರಮಾಣದ ಲಸಿಕೆ ಬೇಕಾಗಿದ್ದಲ್ಲಿ ನಿರೀಕ್ಷಿತ ಬೇಡಿಕೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಎಲ್ಲಾ ರಾಜ್ಯಗಳನ್ನು ಕೋರಲಾಗಿದೆ.

***



(Release ID: 1733441) Visitor Counter : 236