ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

36 ಕೋಟಿ ಡೋಸ್ ಪ್ರಮಾಣ ದಾಟಿದ ಕೋವಿಡ್-19 ಲಸಿಕೆ ನೀಡಿಕೆ; ಭಾರತದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆ


ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 43,733 ಹೊಸ ಕೊರೊನಾ ಪ್ರಕರಣಗಳು ಪತ್ತೆ

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 4,59,920ಕ್ಕೆ ಇಳಿಕೆ; ಒಟ್ಟು ಪಾಸಿಟಿವ್ ಪ್ರಕರಣಗಳು ಶೇ.1.50ಗೆ ಕುಸಿತ

ದೈನಂದಿನ ಪಾಸಿಟಿವಿಟಿ ದರ ಶೇ. 5 ಕ್ಕಿಂತ ಕೆಳಕ್ಕೆ; ಶೇ.2.29ಕ್ಕೆ ಇಳಿಕೆ

Posted On: 07 JUL 2021 10:59AM by PIB Bengaluru

ಭಾರತದಲ್ಲಿ ನಡೆಯುತ್ತಿರುವ ಬೃಹತ್ ಲಸಿಕಾ ಅಭಿಯಾನದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. ನಿನ್ನೆಗೆ ಅನ್ವಯವಾಗುವಂತೆ, 36 ಕೋಟಿಗಿಂತ ಹೆಚ್ಚಿನ ಅಂದರೆ 36,13,23,548 ಡೋಸ್ ಲಸಿಕೆ ನೀಡಲಾಗಿದೆ. ಇಂದು ಬೆಳಗ್ಗೆ 7 ಗಂಟೆಗೆ ಬಿಡುಗಡೆಯಾಗಿರುವ ತಾತ್ಕಾಲಿಕ ವರದಿ ಪ್ರಕಾರ, 47,07,778 ಆಂದೋಲನಗಳಲ್ಲಿ (ಕಾರ್ಯಕ್ರಮಗಳು) ಈ ಪ್ರಮಾಣದ ಲಸಿಕೆ ನೀಡಲಾಗಿದೆ. ಕಳೆದ 24 ತಾಸುಗಳಲ್ಲೇ 3605,998 ಡೋಸ್ ಲಸಿಕೆ ಹಾಕಲಾಗಿದೆ.

ಇದರಲ್ಲಿ ಕೆಳಗಿನ ಗುಂಪುಗಳು ಸಹ ಸೇರಿವೆ:

ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು

ಮೊದಲ ಡೋಸ್

1,02,36,072

2ನೇ ಡೋಸ್

73,43,749

ಮುಂಚೂಣಿ ಕಾರ್ಯಕರ್ತರು

ಮೊದಲ ಡೋಸ್

1,76,16,750

2ನೇ ಡೋಸ್

97,45,413

18-44 ವಯೋಮಾನದವರು

ಮೊದಲ ಡೋಸ್

10,47,29,719

2ನೇ ಡೋಸ್

30,47,880

45-59 ವಯೋಮಾನದವರು

ಮೊದಲ ಡೋಸ್

9,17,29,358

2ನೇ ಡೋಸ್

2,06,95,452

60 ವರ್ಷ ದಾಟಿದವರು

ಮೊದಲ ಡೋಸ್

6,93,94,933

2ನೇ ಡೋಸ್

2,67,84,222

ಒಟ್ಟು

36,13,23,548

2021 ಜೂನ್ 21ರಿಂದ ಆರಂಭವಾಗಿರುವ ಬೃಹತ್ ಕೋವಿಡ್-19 ಲಸಿಕಾ ಅಭಿಯಾನದ ಸಾರ್ವತ್ರೀಕರಣದ ಹೊಸ ಹಂತದಲ್ಲಿ ಕೇದ್ರ ಸರ್ಕಾರವು, ದೇಶಾದ್ಯಂತ ಲಸಿಕಾ ಆಂದೋಲನದ ವ್ಯಾಪ್ತಿ ವಿಸ್ತರಿಸಲು ಮತ್ತು ಅಭಿಯಾನದ ಗತಿಗೆ ವೇಗ ನೀಡಲು ಬದ್ಧವಾಗಿದೆ.

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 43,733 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಸತತ 10 ದಿನಗಳಿಂದ ದೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ 50 ಸಾವಿರ ಮಟ್ಟದಿಂದ ಕೆಳಗಿರುವುದು ಆಶಾದಾಯಕ ಬೆಳವಣಿಗೆ. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಸುಸ್ಥಿರ ಮತ್ತು ಸಹಭಾಗಿತ್ವದ ಪ್ರಯತ್ನಗಳ ಫಲವಾಗಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ.

https://static.pib.gov.in/WriteReadData/userfiles/image/image001N37H.jpg

ಭಾರತದ ಸಕ್ರಿಯ ಪ್ರಕರಣಗಳ ಪ್ರಮಾಣ ನಿರಂತರ ಇಳಿಕೆಯಾಗುತ್ತಿದೆ. ದೇಶದಲ್ಲಿ ಇದೀಗ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,59,920ಕ್ಕೆ ಇಳಿಕೆ ಆಗಿದೆ.

ಕಳೆದ 24 ತಾಸುಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 4,437ರಷ್ಟು ಇಳಿಕೆಯಾಗಿದೆ. ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳ ಪ್ರಮಾಣದಲ್ಲಿ 1.50%ರಷ್ಟು ಸಕ್ರಿಯ ಪ್ರಕರಣಗಳಿವೆ.

https://static.pib.gov.in/WriteReadData/userfiles/image/image00200RM.jpg

ಕೋವಿಡ್-19 ಸೋಂಕಿನಿಂದ ದೇಶದಲ್ಲಿ ಗರಿಷ್ಠ ಸಂಖ್ಯೆಯ ಜನರು ಗುಣಮುಖರಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತದ ದೈನಂದಿನ ಚೇತರಿಕೆ ಪ್ರಮಾಣವು ದಿನನಿತ್ಯ ಕಾಣಿಸಿಕೊಳ್ಳುತ್ತಿರುವ ಹೊಸ ಕೊರೊನಾ ಪ್ರಕರಣಗಳ ಪ್ರಮಾಣವನ್ನು ಹಿಂದಿಕ್ಕುತ್ತಿದೆ. ಸತತ 55ನೇ ದಿನದಲ್ಲಿ ಈ ಪ್ರವೃತ್ತಿ ಮುಂದುವರಿದಿದೆ. ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 47,240 ಸೋಂಕಿತರು ಗುಣಮುಖರಾಗಿದ್ದಾರೆ.

ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ, ಕಳೆದ 24 ತಾಸುಗಳಲ್ಲೇ 3,507 ಸೋಂಕಿತರು ಚೇತರಿಸಿಕೊಂಡಿದ್ದಾರೆ.

https://static.pib.gov.in/WriteReadData/userfiles/image/image003BZQI.jpg

ದೇಶದಲ್ಲಿ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಆರಂಭದಿಂದ ಇದುವರೆಗೆ ಒಟ್ಟು 2,97,99,534 ಜನರು ಗುಣಮುಖರಾಗಿದ್ದಾರೆ. ಜತೆಗೆ, ಕಳೆದ 24 ತಾಸುಗಳಲ್ಲಿ 47,240 ಮಂದಿ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಒಟ್ಟಾರೆ ಚೇತರಿಕೆ ದರವೀಗ ಶೇ.97.18ಕ್ಕೆ  ಸುಧಾರಣೆ ಕಂಡಿದೆ. ಚೇತರಿಕೆ ದರ ಸುಸ್ಥಿರವಾಗಿ ಏರಿಕೆ ಕಾಣುತ್ತಿರುವ ಪ್ರವೃತ್ತಿ ಕಂಡುಬಂದಿದೆ.

https://static.pib.gov.in/WriteReadData/userfiles/image/image0044TGX.jpg

ದೇಶಾದ್ಯಂತ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಕಳೆದ 24 ತಾಸುಗಳಲ್ಲೇ 19,07,216 ಪರೀಕ್ಷೆಗಳನ್ನು ನಡೆಸಲಾಗಿದೆ. ಇದರೊಂದಿಗೆ ಇಲ್ಲಿಯ ತನಕ ದೇಶಾದ್ಯಂತ 42.33 ಕೋಟಿಗಿಂತ ಹೆಚ್ಚಿನ ಅಂದರೆ 42,33,32,097 ಪರೀಕ್ಷೆಗಳನ್ನು ನಡೆಸಲಾಗಿದೆ.

ಒಂದು ಕಡೆ ದೇಶವ್ಯಾಪಿ ಪರೀಕ್ಷಾ ಸಾಮರ್ಥ್ಯಗಳನ್ನು ಹೆಚ್ಚಿಸಿರುವುದರಿಂದ, ವಾರದ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಇಳಿಕೆ ಕಾಣುತ್ತಿದೆ. ವಾರದ ಪಾಸಿಟಿವಿಟಿ ದರ ಇದೀಗ 2.39%ಗೆ ಇಳಿದರೆ, ದೈನಂದಿನ ಪಾಸಿಟಿವಿಟಿ ದರ ಇಂದು 2.29%ಗೆ ಕುಸಿದಿದೆ. ಸತತ 16ನೇ ದಿನದಲ್ಲೂ ದೈನಂದಿನ ಪಾಸಿಟಿವಿಟಿ ದರ ಶೇ.3 ಮಟ್ಟದಿಂದ ಕೆಳಗಿದ್ದು, ಕಳೆದ 1 ತಿಂಗಳಿಂದ 5% ಮಟ್ಟದಿಂದ ಕೆಳಗೆ ಕಾಯ್ದುಕೊಂಡಿದೆ.

https://static.pib.gov.in/WriteReadData/userfiles/image/image005MGO2.jpg

***(Release ID: 1733335) Visitor Counter : 267