ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ: ಮಿಥ್ಯೆ ಮತ್ತು ವಾಸ್ತವಗಳು


ಜುಲೈ ತಿಂಗಳಲ್ಲಿ ಲಭ್ಯವಾಗಲಿರುವ ಲಸಿಕೆ ಡೋಸ್ ಬಗ್ಗೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಮುಂಚಿತವಾಗಿಯೇ ಮಾಹಿತಿ

ಹೆಚ್ಚುವರಿ ಡೋಸ್ ಲಸಿಕೆ ಅಗತ್ಯದ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮಾಹಿತಿ ನೀಡುವಂತೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ

Posted On: 06 JUL 2021 6:29PM by PIB Bengaluru

ರಾಜಸ್ಥಾನದಲ್ಲಿ ಕಳೆದ ಎರಡು ದಿನಗಳ ಹಿಂದೆ ಕೋವಿಡ್-19 ಲಸಿಕೆ ಕೊರತೆಯಿಂದಾಗಿ ಕೆಲವು ಲಸಿಕಾ ಕೇಂದ್ರಗಳು ಮುಚ್ಚಲ್ಪಟ್ಟಿವೆ ಎಂದು ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಜುಲೈ 2021ರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟಾರೆ ಲಭ್ಯವಾಗಲಿರುವ ಒಟ್ಟು ಡೋಸ್ ಲಸಿಕೆಗಳ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗಿದೆ ಎಂದು ಮೂಲಕ ಸ್ಪಷ್ಟಪಡಿಸಲಾಗಿದೆ. ರಾಜ್ಯಗಳು ಕೋವಿಡ್ ಲಸಿಕೆ ಲಭ್ಯತೆಗೆ ಅನುಸಾರವಾಗಿ ಕೋವಿಡ್-19 ಲಸಿಕಾ ಶಿಬಿರಗಳನ್ನು ಆಯೋಜಿಸುವಂತೆ ಸಲಹೆ ನೀಡಲಾಗಿದೆ.

2021 ಜುಲೈ 01 ವರೆಗೆ ರಾಜಸ್ಥಾನದಲ್ಲಿ ಸುಮಾರು 1.69 ಲಕ್ಷ ಡೋಸ್ ಲಸಿಕೆ ಬಳಕೆಯಾಗದೆ ಉಳಿದಿದ್ದವು. ರಾಷ್ಟ್ರೀಯ ಕೋವಿಡ್ ಲಸಿಕಾ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಭಾರತ ಸರ್ಕಾರದಿಂದ 2021 ಜುಲೈ 1 ರಿಂದ 6 ನಡುವೆ 8.89 ಲಕ್ಷ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗಿದೆ. ಅಲ್ಲದೆ ರಾಜಸ್ಥಾನ 2021 ಜುಲೈನ ಉಳಿದ ಅವಧಿಗೆ ಹೆಚ್ಚುವರಿಯಾಗಿ 39 ಲಕ್ಷ 51 ಸಾವಿರ ಡೋಸ್ ವಿತರಿಸಲಿದೆ. ಆದ್ದರಿಂದ ರಾಜಸ್ಥಾನ 2021 ಜುಲೈ ಇಡೀ ತಿಂಗಳಲ್ಲಿ 50 ಲಕ್ಷ 90 ಸಾವಿರಕ್ಕೂ ಅಧಿಕ ಡೋಸ್ ಲಸಿಕೆಯನ್ನು ಸ್ವೀಕರಿಸಲಿದೆ. ಲಸಿಕೆಗಳ ಲಭ್ಯತೆ ಮತ್ತು ಉತ್ಪಾದನೆ ಆಧರಿಸಿ ಪ್ರಮಾಣವನ್ನು ಹೆಚ್ಚಳ ಮಾಡಲಾಗುವುದು. ಅಲ್ಲದೆ ಹೆಚ್ಚುವರಿಯಾಗಿ ಕೋವಿಡ್ ಲಸಿಕೆಗಳ ಅಗತ್ಯವಿದ್ದರೆ ರಾಜ್ಯಗಳು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಮೊದಲೇ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ

ಲಸಿಕೆ ಜೈವಿಕ ಪ್ರಕ್ರಿಯೆಯನ್ನು ಒಳಗೊಂಡಿರುವುದರಿಂದ ಅದರ ಉತ್ಪಾದನೆ ಮತ್ತು ಪ್ರಕ್ರಿಯೆಗೆ ಸಮಯಾವಕಾಶ ಹಿಡಿಯುತ್ತದೆ. ಒಮ್ಮೆ ಉತ್ಪಾದಿಸಿದ ನಂತರ ಲಸಿಕೆಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಪರೀಕ್ಷೆಗೊಳಪಡಿಸಲಾಗುವುದು. ಆದ್ದರಿಂದ ಲಸಿಕೆ ಉತ್ಪಾದನೆ ಪ್ರಕ್ರಿಯೆಗೆ ಸಮಯಾವಕಾಶ ಹಿಡಿಯಲಿದೆ ಮತ್ತು ಅವು ತಕ್ಷಣಕ್ಕೆ ಪೂರೈಕೆಗೆ ಲಭ್ಯವಾಗುವುದಿಲ್ಲ.

***



(Release ID: 1733218) Visitor Counter : 270