ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೇಂದ್ರ ಶಿಕ್ಷಣ ಸಚಿವರಿಂದ ಇಂದು ನಿಪುಣ್ ಭಾರತ್ ಕಾರ್ಯಕ್ರಮಕ್ಕೆ ಚಾಲನೆ


ನಿಪುಣ್ ಭಾರತ್ ಅಡಿಯಲ್ಲಿ 3 ರಿಂದ 9 ವರ್ಷ ವಯೋಮಾನದ ಮಕ್ಕಳ ಕಲಿಕಾ ಅಗತ್ಯ ಪೂರೈಸುವ ಗುರಿ – ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

ನಿಪುಣ್ ಭಾರತ್ ಅಡಿ ಮೂಲ ಹಂತದಲ್ಲಿ ಸಮಗ್ರ, ಎಲ್ಲವನ್ನೂ ಒಳಗೊಂಡ, ಅಂತರ್ಗತ ಮತ್ತು ಆನಂದಕರ ಹಾಗೂ ತೊಡಗಿಕೊಳ್ಳುವ ಕಲಿಕಾ ಅನುಭವ ನೀಡಲಿದೆ – ಕೇಂದ್ರ ಶಿಕ್ಷಣ ಸಚಿವರು

Posted On: 05 JUL 2021 4:17PM by PIB Bengaluru

ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು, 2026-27ರೊಳಗೆ ದೇಶದ ಪ್ರತಿಯೊಂದು ಮಗುವೂ ಮೂಲ ಓದು, ಬರವಣಿಗೆ, ಸಾಕ್ಷರತೆ ಮತ್ತು ಸಂಖ್ಯೆಗಳನ್ನು ಕಲಿಯುವುದನ್ನು ಖಾತ್ರಿಪಡಿಸುವ ತಿಳುವಳಿಕೆ ಮತ್ತು ಸಂಖ್ಯಾಶಾಸ್ತ್ರದೊಂದಿಗೆ ಓದುವ  ಪ್ರಾವೀಣ್ಯಕ್ಕಾಗಿ ರಾಷ್ಟ್ರೀಯ ಉಪಕ್ರಮ(ನಿಪುಣ ಭಾರತ) ಕಾರ್ಯಕ್ರಮಕ್ಕೆ ಇಂದು ವರ್ಚುವಲ್ ಮೂಲಕ ಚಾಲನೆ ನೀಡಿದರು. ರಾಷ್ಟ್ರೀಯ ಕಾರ್ಯಕ್ರಮಕ್ಕೆ ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ, ಕಾರ್ಯದರ್ಶಿ(ಎಸ್ಇ ಮತ್ತು ಎಲ್) ಶ್ರೀಮತಿ ಅನಿತಾ ಕರ್ವಾಲ್, ಸಚಿವಾಲಯದ ಹಿರಿಯ ಅಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು, ಹಿರಿಯ ನೀತಿ ನಿರೂಪಕರು ಮತ್ತು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಮಕ್ಷಮದಲ್ಲಿ ಚಾಲನೆ ನೀಡಲಾಯಿತು. ಸಂದರ್ಭದಲ್ಲಿ ಕಿರು ವಿಡಿಯೋ, ಗೀತೆ ಮತ್ತು ನಿಪುಣ ಭಾರತ ಕಾರ್ಯಕ್ರಮದ ಮಾರ್ಗಸೂಚಿಗಳನ್ನೂ ಸಹ ಬಿಡುಗಡೆ ಮಾಡಲಾಯಿತು. ಮಿಷನ್ ಅನ್ನು ಸಮಗ್ರ ಶಿಕ್ಷಾ ಯೋಜನೆ ಅಡಿ ಕೇಂದ್ರದ ಪ್ರಾಯೋಜಕತ್ವದಲ್ಲಿ ಆರಂಭಿಸಲಾಗಿದ್ದು, ಇದರಡಿ ಶಾಲಾ ಶಿಕ್ಷಣದ ಆರಂಭಿಕ ಹಂತದಲ್ಲಿ ಮಕ್ಕಳಿಗೆ ಲಭ್ಯತೆಯನ್ನು ಒದಗಿಸುವುದು; ಶಿಕ್ಷಕರ ಸಾಮರ್ಥ್ಯವೃದ್ಧಿ; ಮಕ್ಕಳು ಮತ್ತು ಶಿಕ್ಷಕರಿಗೆ ವಿಭಿನ್ನ ಸಂಪನ್ಮೂಲ/ಕಲಿಕಾ ಸಾಮಗ್ರಿ, ಉನ್ನತ ಗುಣಮಟ್ಟದ ಅಭಿವೃದ್ಧಿ ಮತ್ತು ಕಲಿಕಾ ಫಲಿತಾಂಶಗಳ ಸಾಧನೆಗೆ ಪ್ರತಿಯೊಂದು ಮಗುವಿನ ಪ್ರಗತಿಯ ಮೇಲೆ ನಿಗಾವಹಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು

WhatsApp Image 2021-07-05 at 4.02.11 PM.jpeg

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಪೋಖ್ರಿಯಾಲ್ ಅವರು, ನಿಪುಣ್ ಭಾರತದಡಿ 3 ರಿಂದ 9 ವರ್ಷದೊಳಗಿನ ಮಕ್ಕಳ ಕಲಿಕಾ ಅಗತ್ಯಗಳನ್ನು ಪೂರೈಸುವ ಗುರಿ ಹೊಂದಲಾಗಿದೆ ಎಂದರು. ಶಿಕ್ಷಕರು ಪ್ರತಿಯೊಂದು ಮಗುವಿಗೂ ಮೂಲ ಭಾಷೆ ಕಲಿಕೆಯಲ್ಲಿ ಅಭಿವೃದ್ಧಿಪಡಿಸಬೇಕು. ಓದು, ಬರವಣಿಗೆ ಮತ್ತು ಸಂಖ್ಯಾ ಕೌಶಲ್ಯ ಅವರನ್ನು ಉತ್ತಮ ಓದುಗರು ಮತ್ತು ಬರಹಗಾರರನ್ನಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ ಎಂದರು. ಆದ್ದರಿಂದ ನಿಪುಣ ಭಾರತದಡಿ ಮೂಲ ಕಲಿಕೆ ಹಂತ ಸಮಗ್ರ, ಅಂತರ್ಗತ, ಎಲ್ಲವನ್ನು ಒಳಗೊಂಡ ಆನಂದಕರ ಮತ್ತು ತೊಡಗಿಸಿಕೊಂಡ ಕಲಿಕಾ ಅನುಭವ ನೀಡಲಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020 ಅಡಿಯಲ್ಲಿ ಎಲ್ಲ ಮಕ್ಕಳಿಗೆ ಮೂಲ ಸಾಕ್ಷರತೆ (ಓದು, ಬರಹ) ಮತ್ತು ಸಂಖ್ಯಾಶಾಸ್ತ್ರ ಕಲಿಯುವಂತೆ ಮಾಡುವುದು ತಕ್ಷಣದ ರಾಷ್ಟ್ರೀಯ ಮಿಷನ್ ಉದ್ದೇಶವಾಗಿದೆ ಎಂದು ಸಚಿವರು ಪ್ರತಿಪಾದಿಸಿದರು. ಅದನ್ನು ಗಮನದಲ್ಲಿರಿಸಿಕೊಂಡು ಇಲಾಖೆ ನಿಪುಣ ಭಾರತ ಅಡಿಯಲ್ಲಿ ಸಮಗ್ರ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಿದೆ. ಅದಕ್ಕಾಗಿ ಅನುಷ್ಠಾನಗೊಳಿಸುತ್ತಿರುವ ಪಾಲುದಾರರು ಮತ್ತು ತಜ್ಞರ ಜೊತೆ ಸರಣಿ ವ್ಯಾಪಕ ಸಮಾಲೋಚನೆಗಳನ್ನು ನಡೆಸಿ, ಸರಳ ಮತ್ತು ಸುಲಭವಾಗಿಸಬೇಕು ಎಂದರು. ಮೂಲಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಕೆಲವು ತಾಂತ್ರಿಕ ಆಯಾಮಗಳನ್ನು ಇದು ಒಳಗೊಂಡಿದೆ. ಜೊತೆಗೆ ರಾಷ್ಟ್ರ, ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಶಾಲಾ ಹಂತದಲ್ಲಿ ಪರಿಣಾಮಕಾರಿ ಅನುಷ್ಠಾನ ಕಾರ್ಯತಂತ್ರವನ್ನು ರೂಪಿಸಲಾಗಿದೆ ಎಂದರು. 2021-22ನೇ ಸಾಲಿನಲ್ಲಿ ಮೂಲ ಹಂತದಲ್ಲಿ ನಾನಾ ಮಧ್ಯ ಪ್ರವೇಶ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಮಗ್ರ ಶಿಕ್ಷಾ ಯೋಜನೆ ಅಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ 2688.18 ಕೋಟಿ ರೂ.ಗಳನ್ನು ನೀಡಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಸಂದರ್ಭದಲ್ಲಿ ಮಾತನಾಡಿದ ಶ್ರೀ ಧೋತ್ರೆ ಅವರು, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದೆ ಹಾಗೂ ಮೂಲ ಶಿಕ್ಷಣದಲ್ಲಿ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಅದರ ಪ್ರಮುಖ ಅಂಶವಾಗಿದೆ ಎಂದರು. ಮುಂದಿನ ವರ್ಷಗಳಲ್ಲಿ ಕಾರ್ಯಕ್ರಮ ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯ ಆಯಾಮವನ್ನು ಬದಲಿಸಲಿದೆ ಮತ್ತು 21ನೇ ಶತಮಾನದ ಭಾರತದ ಮೇಲೆ ಗಾಢ ಪರಿಣಾಮ ಬೀರಲಿದೆ ಎಂದು ಸಚಿವರು ಹೇಳಿದರು. ನಿಪುಣ ಭಾರತ ಕೇವಲ ನಮ್ಮ ವಿದ್ಯಾರ್ಥಿಗಳಿಗೆ ತಮ್ಮ ಉನ್ನತ ಶಿಕ್ಷಣದಲ್ಲಿ ಉನ್ನತ ಎತ್ತರಕ್ಕೇರಲು ಸಹಾಯ ಮಾಡುವುದೇ ಅಲ್ಲದೆ ಅದು ನಮ್ಮ ವಿದ್ಯಾರ್ಥಿಗಳು ಜಾಗತಿಕವಾಗಿ ಸ್ಪರ್ಧೆ ಎದುರಿಸುವಂತಾಗಲು ಪ್ರಮುಖ ಪರಿಣಾಮವನ್ನು ಬೀರಲಿದೆ ಎಂದು ಹೇಳಿದರು.

ಮಿಷನ್ ಗುರಿಗಳ ವಿಭಿನ್ನ ಅಂಶವೆಂದರೆ, ಲಕ್ಷ್ಯ ಸೂಚಿ ಅಥವಾ ಮೂಲ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಗುರಿಗಳ ರೂಪದಲ್ಲಿ ನಿಗದಿಪಡಿಸಲಾಗಿದೆ. ಆದಾಗ್ಯೂ ಒಟ್ಟಾರೆ ಗುರಿ ಎಂದರೆ, ಮೂರನೇ ತರಗತಿಯ ಅಂತ್ಯದ ವೇಳೆಗೆ ಅಪೇಕ್ಷಿತ ಫಲಿತಾಂಶ ಗುರಿಗಳನ್ನು ಸಾಧಿಸುವುದಾಗಿದೆ. ಪೋಷಕರು, ಸಮುದಾಯ, ಸ್ವಯಂ ಸೇವಕರು ಇತ್ಯಾದಿ ಜನರಲ್ಲಿ ಹೆಚ್ಚಿನ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಲಕ್ಷ್ಯಗಳನ್ನು ಬಾಲವಾಟಿಕದಿಂದ ಮೂರನೇ ತರಗತಿವರೆಗೆ  ಅಭಿವೃದ್ಧಿಪಡಿಸಲಾಗಿದೆ. ಲಕ್ಷ್ಯಗಳನ್ನು ಎನ್ ಸಿಇಆರ್ ಟಿ ಮತ್ತು ಅಂತಾರಾಷ್ಟ್ರೀಯ ಸಂಶೋಧನೆ ಮತ್ತು ಆರ್ ಎಫ್ ಅಧ್ಯಯನಗಳನ್ನು ಆಧರಿಸಿ  ಕಲಿಕಾ ಫಲಿತಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಉದಾಹರಣೆಗೆ ಮಗು ಅಪರಿಚಿತ ಪಠ್ಯವನ್ನು ಗ್ರಹಿಸಿ ಮತ್ತು ಸ್ಪಷ್ಟತೆಯೊಂದಿಗೆ ಎರಡನೇ ತರಗತಿ ವೇಳೆಗೆ ಪ್ರತಿ ನಿಮಿಷಕ್ಕೆ 45 ರಿಂದ 60 ಪದಗಳನ್ನು ಹಾಗೂ ಮೂರನೇ ತರಗತಿ ಕೊನೆಗೆ ಪ್ರತಿ ನಿಮಿಷಕ್ಕೆ ಕನಿಷ್ಠ 60 ಪದಗಳನ್ನು ಸರಿಯಾಗಿ ಓದುವಂತಾಗಬೇಕು.

ನಿಪುಣ ಭಾರತದ ಯಶಸ್ಸು ಮುಖ್ಯವಾಗಿ ಶಿಕ್ಷಕರನ್ನು ಅವಲಂಬಿಸಿದೆ. ಹಾಗಾಗಿ ಶಿಕ್ಷಕರ ಸಾಮರ್ಥ್ಯವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು. ಎನ್ ಸಿಇಆರ್ ಟಿ ಮೂಲಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಅಡಿಯಲ್ಲಿ ನಿಶ್ಚಿತ ವಿಶೇಷ ಪ್ಯಾಕೇಜ್ ಅಭಿವೃದ್ಧಿಪಡಿಸಿದ್ದು, ವರ್ಷ ಎಫ್ಎಲ್ಎನ್ ಅಡಿ ಪೂರ್ವ ಪ್ರಾಥಮಿಕದಿಂದ ಪ್ರಾಥಮಿಕ ತರಗತಿವರೆಗೆ ಕಲಿಕೆಯಲ್ಲಿ ತೊಡಗಿರುವ ಸುಮಾರು 25 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಲಾಗುವುದು

ನಿಪುಣ ಭಾರತ ಮಿಷನ್ ಗುರಿ  ಮತ್ತು ಉದ್ದೇಶಗಳಿಂದ ಕೆಳಗಿನ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.

  • ಮಕ್ಕಳು ತರಗತಿಗಳಲ್ಲಿ ಉಳಿಯುವಂತಾಗಲು ಮೂಲ ಕೌಶಲ್ಯವನ್ನು ಕಲಿಸಲಾಗುವುದು. ಮೂಲಕ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣವನ್ನು ತಗ್ಗಿಸಲಾಗುವುದು ಮತ್ತು ಪ್ರಾಥಮಿಕದಿಂದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಹಂತಕ್ಕೆ ವರ್ಗಾವಣೆಯಾಗುವ ದರವನ್ನು ಸುಧಾರಿಸುವುದು.
  • ಚಟುವಟಿಕೆ ಆಧಾರಿತ ಕಲಿಕೆ ಮತ್ತು ಪೂರಕ ಕಲಿಕಾ ವಾತಾವರಣದಿಂದಾಗಿ ಶಿಕ್ಷಣದ ಗುಣಮಟ್ಟ ಸುಧಾರಣೆಯಾಗಲಿದೆ. ನವೀನ ಕಲಿಕಾ ವಿಧಾನಗಳು ಅಂದರೆ ಆಟಿಕೆಗಳ ಆಧರಿತ ಅಥವಾ ಪ್ರಯೋಗಾತ್ಮಕ ಕಲಿಕೆಗಳನ್ನು ಶಾಲಾ ತರಗತಿಗಳಲ್ಲಿ ಬಳಸಲಾಗುವುದು. ಮೂಲಕ ಕಲಿಕೆ ಆನಂದಕರ ಮತ್ತು ತೊಡಗಿಸಿಕೊಳ್ಳುವ ಚಟುವಟಿಕೆಯನ್ನಾಗಿ ಮಾಡಲಾಗುವುದು.
  • ಶಿಕ್ಷಕರ ಸಮಗ್ರ ಸಾಮರ್ಥ್ಯವೃದ್ಧಿ ಕಾರ್ಯಕ್ರಮಗಳಿಂದಾಗಿ ಅವರ ಸಬಲೀಕರಣವಾಗುವುದಲ್ಲದೆ, ಅವರಿಗೆ ಶಿಕ್ಷಣ ಶಾಸ್ತ್ರದ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಸ್ವಾಯತ್ತತೆ ದೊರಕಲಿದೆ.
  • ನಾನಾ ಅಭಿವೃದ್ಧಿಯ ಅಂಶಗಳಿಗೆ ಅಂದರೆ ದೈಹಿಕ ಮತ್ತು ಮೋಟಾರು ಅಭಿವೃದ್ಧಿ, ಸಾಮಾಜಿಕ ಭಾವನಾತ್ಮಕ ಅಭಿವೃದ್ಧಿ, ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಅಭಿವೃದ್ಧಿಅರಿವಿನ ಅಭಿವೃದ್ಧಿ, ಜೀವನ ಕೌಶಲ್ಯ ಇತ್ಯಾದಿ ಸೇರಿ ಮಗುವಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಇವೆಲ್ಲಾ ಅಂತರ ಸಂಬಂಧ ಮತ್ತು ಅಂತರ್ ಅವಲಂಬನೆಗೊಂಡಿವೆ. ಇವು ಮಕ್ಕಳ ಸಮಗ್ರ ಪ್ರಗತಿ ಮೇಲೆ ಪ್ರತಿಫಲನಗೊಳ್ಳಲಿವೆ.
  • ಮಕ್ಕಳು -ಕಲಿಕಾ ಪಥದಲ್ಲಿ ಕಲಿಯುವುದರಿಂದ ಅವರ ನಂತರದ ಜೀವನದ ಮೇಲೆ ಪರಿಣಾಮವಾಗಲಿದೆ.
  • ಪ್ರತಿಯೊಂದು ಮಗುವೂ ಆರಂಭಿಕ ಶಿಕ್ಷಣವನ್ನು ಪಡೆಯುವುದರಿಂದ ಹಂತ ಸಾಮಾಜಿಕ ಆರ್ಥಿಕ ದುರ್ಬಲ ವರ್ಗಕ್ಕೂ ಕೂಡ ಅನುಕೂಲವಾಗಲಿದೆ. ಮೂಲಕ ಸಮಾನ ಮತ್ತು ಎಲ್ಲರನ್ನೂ ಒಳಗೊಂಡ ಗುಣಮಟ್ಟದ ಶಿಕ್ಷಣ ಲಭ್ಯವಾಗಲಿದೆ.

ಆದ್ದರಿಂದ ನಮ್ಮ ಮಕ್ಕಳಲ್ಲಿನ ನಿಜವಾದ ಸಾಮರ್ಥ್ಯವನ್ನು ಅರಿಯಲು ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದ ನಿಪುಣ ಭಾರತ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬೆಂಬಲ ಮತ್ತು ಉತ್ತೇಜನ ನೀಡಲು, ಅವುಗಳ ಶಾಲೆಗಳು, ಶಿಕ್ಷಕರು, ಪೋಷಕರು ಮತ್ತು ಸಮುದಾಯಗಳಿಗೆ ಸಾಧ್ಯವಾದ ಎಲ್ಲ ರೀತಿಯಲ್ಲೂ ನೆರವು ನೀಡಲಾಗುವುದು

ನಿಪುಣ ಭಾರತ ಪ್ರಾತ್ಯಕ್ಷಿಕೆ ಲಭ್ಯತೆಗೆ ಲಿಂಕ್ ಅನ್ನು ಕ್ಲಿಕ್ ಮಾಡಿ:

https://static.pib.gov.in/WriteReadData/specificdocs/documents/2021/jul/doc20217531.pdf

ನಿಪುಣ ಭಾರತ ಮಾರ್ಗಸೂಚಿಗಳ ಲಭ್ಯತೆಗೆ ಇಲ್ಲಿ ಕ್ಲಿಕ್ ಮಾಡಿ:

https://www.education.gov.in/sites/upload_files/mhrd/files/NIPUN_BHARAT_GUIDELINES_EN.pdf

***



(Release ID: 1732960) Visitor Counter : 1943