ಪ್ರಧಾನ ಮಂತ್ರಿಯವರ ಕಛೇರಿ

ʻಸಿಎಗಳ ದಿನʼದ ಅಂಗವಾಗಿ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಪ್ರಧಾನಿ ಶುಭಾಶಯ

ಪ್ರಕಟಣಾ ದಿನಾಂಕ: 01 JUL 2021 9:50AM by PIB Bengaluru

ʻಚಾರ್ಟರ್ಡ್ ಅಕೌಂಟೆಂಟ್ಸ್ ದಿನʼದ ಅಂಗವಾಗಿ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, "ಸಿಎಗಳ ದಿನದಂದು ಎಲ್ಲಾ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಶುಭಾಶಯಗಳು. ಭಾರತದ ಪ್ರಗತಿಯಲ್ಲಿ ಈ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಭಾರತೀಯ ಸಂಸ್ಥೆಗಳು ಜಾಗತಿಕವಾಗಿ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಲು ಉತ್ಕೃಷ್ಟತೆಯತ್ತ ಗಮನ ಹರಿಸುವಂತೆ ನಾನು ಎಲ್ಲಾ ಸಿಎಗಳಿಗೆ ಕರೆ ನೀಡುತ್ತೇನೆ." ಎಂದಿದ್ದಾರೆ.

***


(ಪ್ರಕಟಣೆ ಐ.ಡಿ.: 1731843) ವಿಸಿಟರ್ ಕೌಂಟರ್ : 293