ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಕುರಿತ ಸಚಿವರ ಗುಂಪಿನ 29 ನೇ [ಜಿ.ಒ.ಎಂ] ಸಭೆಯ ಅಧ್ಯಕ್ಷತೆ ವಹಿಸಿದ ಡಾ. ಹರ್ಷವರ್ಧನ್
ರಾಜ್ಯಗಳು ಮಾಪನಾಂಕದ ನಿರ್ಣಯದ ಮಾದರಿಯಲ್ಲಿ ಅನ್ಲಾಕ್ ಸಂದರ್ಭದಲ್ಲಿ ಕೋವಿಡ್ ಸೂಕ್ತ ವರ್ತನೆಯ ಮಹತ್ವವನ್ನು ಮನಗಾಣಬೇಕೆಂದು ಪುನರುಚ್ಚಾರ
ಎರಡನೇ ಅಲೆ ಇನ್ನೂ ಮುಗಿದಿಲ್ಲ: ಕೆಲವೆಡೆ ಕಳವಳ ಇನ್ನೂ ಎದ್ದುಕಾಣುತ್ತಿದೆ
Posted On:
28 JUN 2021 2:48PM by PIB Bengaluru
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಚಿವ ಡಾ. ಹರ್ಷವರ್ಧನ್ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್ – 19 ಕುರಿತ ಸಚಿವರ ಗುಂಪಿನ 29 ನೇ [ಜಿ.ಒ.ಎಂ] ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅವರೊಂದಿಗೆ ನಾಗರಿಕ ವಿಮಾನ ಸಚಿವ ಶ್ರೀ ಎಸ್. ಹರ್ದೀಪ್ ಸಿಂಗ್ ಪುರಿ, ಗೃಹ ವ್ಯವಹಾರಗಳ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಭಾಗವಹಿಸಿದ್ದರು.
ನೀತಿ ಆಯೋಗದ ಸದಸ್ಯ [ಆರೋಗ್ಯ] ಡಾ. ವಿನೋದ್ ಕೆ. ಪಾಲ್ ಅವರು ಸಹ ವರ್ಚುವಲ್ ಮೂಲಕ ಪಾಲ್ಗೊಂಡಿದ್ದರು.
ಕೋವಿಡ್ ಸೋಂಕು ನಿಯಂತ್ರಣದ ನಿರ್ವಹಣೆ ಮತ್ತು ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನದ ವೇಗ ಹೆಚ್ಚಿಸುವ, ವ್ಯಾಪ್ತಿ ವಿಸ್ತರಿಸುವ ನಿಟ್ಟಿನಲ್ಲಿ ಅವಿರತವಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಸಭೆಯಲ್ಲಿ ಸಚಿವರ ಗುಂಪು ಮೆಚ್ಚುಗೆ ವ್ಯಕ್ತಪಡಿಸಿತು.
ಸಭೆಯಲ್ಲಿ ಡಾ. ಹರ್ಷವರ್ಧನ್ ಮಾತನಾಡಿ, ಕೋವಿಡ್ -19 ನಿಯಂತ್ರಣ ಕುರಿತು ಭಾರತದ ಪ್ರಯತ್ನದ ಬಗ್ಗೆ ಮಾಹಿತಿ ನೀಡಿದರು. “ ಕಳೆದ 24 ಗಂಟೆಗಳಲ್ಲಿ ನಮ್ಮಲ್ಲಿ ಕೇವಲ 46,148 ಪ್ರಕರಣಗಳು ಕಂಡು ಬಂದಿದ್ದು, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,72,994 ಕ್ಕೆ ಗಣನೀಯವಾಗಿ ಇಳಿಕೆಯಾಗಿದೆ. ಚೇತರಿಕೆ ದರ ಸ್ಥಿರವಾಗಿ ಏರಿಕೆಯಾಗುತ್ತಿದೆ ಮತ್ತು ಇಂದು ಇದು ಶೇ 96.80 ಕ್ಕೆ ಹೆಚ್ಚಳವಾಗಿದೆ. 24 ಗಂಟೆಗಳಲ್ಲಿ 58,578 ಸೋಂಕಿತರು ಗುಣಮುಖರಾಗಿದ್ದಾರೆ. ಸತತ 46 ನೇ ದಿನವಾದ ಇಂದು ಹೊಸ ಪ್ರಕರಣಗಳಿಗಿಂತ ಚೇತರಿಕೆಯಾಗುತ್ತಿರುವ ಸಂಖ್ಯೆ ಹೆಚ್ಚಾಗಿದೆ. ದೈನಂದಿನ ಪಾಸಿಟಿವಿಟಿ ದರ ಶೇ 2.94 ರಷ್ಟಿದ್ದು, ಮರಣ ಪ್ರಮಾಣ ಶೇ 1.30 ರಷ್ಟಿದೆ ಮತ್ತು ವಾರದ ಪಾಸಿಟಿವಿಟಿ ದರ ಶೇ 2.94 ರಷ್ಟಿದ್ದು, ಕಳೆದ 21 ದಿನಗಳಿಂದ ಶೇ 5 ಕ್ಕಿಂತ ಕಡಿಮೆ ಪ್ರಮಾಣ ದಾಖಲಾಗಿದೆ” ಎಂದರು.
ಕೋವಿಡ್ -19 ಲಸಿಕೆ ಅಭಿಯಾನ ಕುರಿತು ಮಾತನಾಡಿದ ಡಾ. ಹರ್ಷವರ್ಧನ್, “ ಕೋವಿಡ್ – 19 ಲಸಿಕೆ ಅಭಿಯಾನದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ ಮತ್ತು ಈವರೆಗೆ ಅಮೆರಿಕಾಗಿಂತಲೂ ಹೆಚ್ಚು ಕೋವಿಡ್ ಲಸಿಕೆ ಡೋಸ್ ಗಳನ್ನು ಹಾಕಲಾಗಿದೆ. ಅಮೆರಿಕಾದಲ್ಲಿ 2020ರ ಡಿಸೆಂಬರ್ 14 ರಿಂದ ಕೋವಿಡ್ ಲಸಿಕೆ ಹಾಕುತ್ತಿದ್ದು, ಭಾರತದಲ್ಲಿ 2021 ರ ಜನವರಿ 16 ರಿಂದ ಈ ಅಭಿಯಾನ ಪ್ರಾರಂಭವಾಯಿತು. ಕೋವಿಡ್ – 19 ಲಸಿಕೆ ಕುರಿತು ಹೊಸ ನೀತಿಯಡಿ ಕೇಂದ್ರ ಸರ್ಕಾರ ಶೇ 75 ರಷ್ಟು ಲಸಿಕೆಗಳನ್ನು ಖರೀದಿಸಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ [ಉಚಿತವಾಗಿ] ಮಾಡುತ್ತಿದೆ. ಇಂದು ಬೆಳಿಗ್ಗೆ [8ಗಂಟೆ]ವರೆಗೆ ದೇಶದ ವಿವಿಧ ವಯೋಮಾನದವರಿಗೆ 32,36,63,297 ಲಸಿಕೆ ಡೋಸ್ ಗಳನ್ನು ಹಾಕಲಾಗಿದೆ. ಇದರಲ್ಲಿ 1,01,98,257 ಆರೋಗ್ಯ ಕಾರ್ಯಕರ್ತರು [ಎಚ್.ಸಿ.ಡಬ್ಲ್ಯೂಗಳು], ಮೊದಲ ಡೋಸ್ ಪಡೆದುಕೊಂಡಿದ್ದಾರೆ ಮತ್ತು 72,07,617 ಮಂದಿ ಎಚ್.ಸಿ.ಡಬ್ಲ್ಯೂಗಳು ಎರಡನೇ ಡೋಸ್ ಗಳನ್ನು ಹಾಕಿಸಿಕೊಂಡಿದ್ದಾರೆ. 1,74,42,767 ಮಂದಿ ಮಂಚೂಣಿ ಕಾರ್ಯಕರ್ತರಿಗೆ [ಎಪ್.ಎಲ್.ಡಬ್ಲ್ಯೂಗಳು] ಮೊದಲ ಹಾಗೂ 93,99,319 ಎಪ್.ಎಲ್.ಡಬ್ಲ್ಯೂಗಳಿಗೆ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ ಮತ್ತು 18 ರಿಂದ 44 ವಯೋಮಿತಿಯೊಳಗಿನ 8,46,51,696 [ಮೊದಲ ಡೋಸ್] ಮತ್ತು 19,01,190 ಮಂದಿಗೆ ಎರಡನೇ ಡೋಸ್ ಹಾಕಲಾಗಿದೆ. 45 ರಿಂದ 60 ವಯೋಮಿತಿ ವರೆಗಿನ 8,71,11,445 ಮಂದಿಗೆ ಮೊದಲ ಹಾಗೂ 45 ರಿಂದ 60 ವಯೋಮಿತಿ ಒಳಗಿನ 1,48,12,349 ಮಂದಿಗೆ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ. 60 ವರ್ಷ ಮೇಲ್ಪಟ್ಟ 6,75,29,713 ಮಂದಿಗೆ [ಮೊದಲ ಡೋಸ್] ಮತ್ತು 60 ವರ್ಷ ಮೇಲ್ಪಟ್ಟ 2,34,08,944 ಮಂದಿಗೆ [ಎರಡನೇ ಡೋಸ್ ] ಲಸಿಕೆ ಹಾಕಲಾಗಿದೆ.
ಕೋವಿಡ್ – 19 ನ ಈ ಹಂತದಲ್ಲಿ ಕಪ್ಪು ಶಿಲೀಂಧ್ರ ಸೋಂಕು ತಗ್ಗುತ್ತಿರುವ ಕುರಿತು ಜಿ.ಒ.ಎಂ ಸದಸ್ಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ 40,845 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 31,344 ಪ್ರಕರಣಗಳು ಖಡ್ಗಮೃಗದ ಸ್ವರೂಪದಲ್ಲಿವೆ. ಈ ಪೈಕಿ 3,129 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ 34,940 ಕೋವಿಡ್ ಸೋಂಕಿತರು ಶೇಕಡ 85ರಷ್ಟು ಅಂದರೆ 26,187 (ಅಂದಾಜು ಶೇ.64.11)ಮಂದಿ ಮಧುಮೇಹದಂತಹ ಸಹ ಅಸ್ವಸ್ಥತೆ ಹೊಂದಿರುವವರಾಗಿದ್ದಾರೆ. 21,523 (ಶೇ. 52.69)ಮಂದಿ ಸ್ಟಿರಾಯ್ಡ್ ಬಳಸಿದ ಕಾರಣಕ್ಕೆ ಸೋಂಕಿತರಾಗಿದ್ದಾರೆ. 18-45 (ಶೇ. 32 ರಷ್ಟು) 13,083 ಮಂದಿ ವಯೋಮಾನದವರರಾಗಿದ್ದಾರೆ. 17,464 ರಷ್ಟು ಸೋಂಕಿತರು 45-60( ಶೇ. 42ರಷ್ಟು), 10,082 ಸೋಂಕಿತರು (ಶೇ. 24ರಷ್ಟು) ಮಂದಿ 60 ವಯೋಮಿತಿ ಮೀರಿದವರಾಗಿದ್ದಾರೆ.
ಸಚಿವರ ಗುಂಪು ಕೋವಿಡ್ 19 ಸೂಕ್ತ ವರ್ತನೆಯ ಮಹತ್ವವನ್ನು ಮತ್ತೊಮ್ಮೆ ಬಲವಾಗಿ ಪುನರುಚ್ಚರಿಸಿದೆ. ಐಇಸಿ ಅಭಿಯಾನದ ಮೂಲಕ ಸುಸ್ಥಿರವಾದ ಅತ್ಯುನ್ನತ ರೀತಿಯಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ. ಸೋಂಕು ನಿಯಂತ್ರಣಕ್ಕೆ ಮುಖಗವಸು ಧರಿಸುವ ಮತ್ತು ಕೈಯನ್ನು ಆಗಿಂದಾಗ್ಗೆ ತೊಳೆಯುವುದರಿಂದ ಆಗುವ ಲಾಭಗಳ ಬಗ್ಗೆ ಡಾ. ವಿ.ಕೆ. ಪಾಲ್ ಸಭೆಯಲ್ಲಿ ತಿಳಿಸಿದರು.
ಕಾರ್ಯದರ್ಶಿ (ಆರೋಗ್ಯ ಸಂಶೋಧನೆ) ಮತ್ತು ಡಿಜಿ( ಐಸಿಎಂಆರ್)ನ ಡಾ. ಬಲರಾಮ್ ಭಾರ್ಗವ್ ಮಾತನಾಡಿ, ದೇಶದ 80 ಜಿಲ್ಲೆಗಳಲ್ಲಿ ಹೆಚ್ಚು ಪಾಸಿಟಿವಿಟಿ ದರ ಇದ್ದು, ಕೋವಿಡ್ -19ನ ಎರಡನೇ ಅಲೆ ಇನ್ನೂ ಕಡಿಮೆಯಾಗಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ಹಂತದಲ್ಲಿ ಯಾವುದೇ ಕಾರಣಕ್ಕೂ ಅಜಾಗರೂಕತೆ ಸಲ್ಲದು ಎಂದು ಸಲಹೆ ಮಾಡಿದರು. ಲಸಿಕೆ ಕೋವಿಡ್ 19ನ ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾ ವೈರಸ್ ಗಳಿಗೂ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಸಭೆಗೆ ವಿವರಿಸಿದರು.
ನಿರ್ದೇಶಕ (ಎನ್ ಸಿಡಿಸಿ) ಡಾ. ಸುಜಿತ್ ಕೆ. ಸಿಂಗ್ ಮಾತನಾಡಿ, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ತಗ್ಗುತ್ತಿರುವ ಕುರಿತಂತೆ ವಿಸ್ತೃತ ವರದಿಯನ್ನು ಮಂಡಿಸಿದರು. ಪ್ರತಿ ರಾಜ್ಯಗಳಲ್ಲೂ ಸಾಂಕ್ರಾಮಿಕದ ಕಣ ಕಣಗಳ ವಿಶ್ಲೇಷಣೆ ಆಧಾರಿತ ಸಾಂಕ್ರಾಮಿಕ ರೋಗಶಾಸ್ತ್ರ ಅಧ್ಯಯನ ಆಧಾರದ ಮಾಹಿತಿಯನ್ನು ನೀಡಿದರು. ನಿರ್ದಿಷ್ಟವಾಗಿ, ರಾಜ್ಯಗಳು, ಜಿಲ್ಲೆಗಳು ಮತ್ತು ಇತರ ಪ್ರದೇಶಗಳಲ್ಲಿ ಕೋವಿಡ್ 19ನ ಮರಣ ಮತ್ತು ವೈರಾಣು ಸ್ವರೂಪ ಕುರಿತು ಮಾಹಿತಿ ನೀಡಿದರು.
ಮಹಾರಾಷ್ಟ್ರ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಿದ್ದು, ರಾಷ್ಟ್ರೀಯ ಕೋವಿಡ್-19 ದರಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 19 ರಾಜ್ಯಗಳಲ್ಲಿ ಮರಣ ಸಂಖ್ಯೆ ಏಕ ಅಂಕಿಗೆ (10ಕ್ಕೂ ಕಡಿಮೆ) ದಾಖಲಾಗಿದೆ. 4 ರಾಜ್ಯಗಳಾದ ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಪ್ರತಿನಿತ್ಯ 100ಕ್ಕೂ ಹೆಚ್ಚು ಮಂದಿ ಮರಣ ಹೊಂದುತ್ತಿದ್ದಾರೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ನೀರಜಾ ಶೇಖರ್ ಅವರು ಲಸಿಕೆ ಹಿಂಜರಿಕೆಯನ್ನು ನಿವಾರಿಸಲು ವಿವಿಧ ಮಾಧ್ಯಮಗಳ ಮೂಲಕ ಕೈಗೊಂಡ ಕ್ರಮಗಳ ಬಗ್ಗೆ ಜಿಒಎಂಗೆ ವಿವರಿಸಿದರು.
ಶ್ರೀ ರಾಜೇಶ್ ಭೂಷಣ್ ಕಾರ್ಯದರ್ಶಿ( ಆರೋಗ್ಯ), ಶ್ರೀ ಹರ್ಷವರ್ಧನ್ ಶ್ರಿಂಗ್ಲಾ, ವಿದೇಶಾಂಗ ಕಾರ್ಯದರ್ಶಿ, ಶ್ರೀಮತಿ ಎಸ್. ಅರ್ಪಣಾ ಕಾರ್ಯದರ್ಶಿ( ಔಷಧ), ಡಾ. ಬಲರಾಂ ಭಾರ್ಗವ್ ಕಾರ್ಯದರ್ಶಿ (ಆರೋಗ್ಯ ಸಂಶೋಧನೆ) ಮತ್ತು ಡಿ.ಜಿ(ಐಸಿಎಂಆರ್), ಶ್ರೀ ಅಜೆಯ್ ಸೇಥ್ ಕಾರ್ಯದರ್ಶಿ (ಆರ್ಥಿಕ ವ್ಯವಹಾರಗಳ ಇಲಾಖೆ) , ಶ್ರೀ ಅಪೂರ್ವ ಚಂದ್ರ, ಕಾರ್ಯದರ್ಶಿ( ಕಾರ್ಮಿಕ), ಶ್ರೀ ವಿಕಾಸ್ ಶೀಲ್ ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ), ಶ್ರೀ ರಾಕೇಶ್ ಸನ್ವಾಲ್ ಹೆಚ್ಚವರಿ ಕಾರ್ಯದರ್ಶಿ (ನೀತಿ ಆಯೋಗ), ಶ್ರೀಮತಿ ನಿರಜಾ ಶೇಖರ್ ಹೆಚ್ಚುವರಿ ಕಾರ್ಯದರ್ಶಿ (ವಾರ್ತಾ ಮತ್ತು ಪ್ರಸಾರ ಸಚಿವಾಲಯ), ಡಾ. ಸುನೀಲ್ ಕುಮಾರ್ ಡಿಜಿಎಚ್ಎಸ್ (ಎಂಒಎಚ್ಎಫ್ ಡಬ್ಲ್ಯೂ ) ಡಾ. ಸುಜಿತ್ ಕೆ. ಸಿಂಗ್ ನಿರ್ದೇಶಕರು ಎನ್ ಸಿಡಿಸಿ, ಸಶಸ್ತ್ರ ಪಡೆಗಳ ಪ್ರತಿನಿಧಿಗಳು( ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆ), ಐಟಿಬಿಪಿ ಮತ್ತು ಇತರ ಹಿರಿಯ ಸರ್ಕಾರಿ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡಿದ್ದರು.
***
(Release ID: 1730934)
Visitor Counter : 355
Read this release in:
English
,
Urdu
,
Marathi
,
Hindi
,
Manipuri
,
Bengali
,
Punjabi
,
Odia
,
Tamil
,
Telugu
,
Malayalam