ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ ಆಂದೋಲನದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆ


ಲಸಿಕೆ ಡೋಸ್ ನೀಡಿಕೆಯ ಪ್ರಮಾಣದಲ್ಲಿ ಅಮೆರಿಕವನ್ನು ಹಿಂದಿಕ್ಕಿದ ಭಾರತ

ದೇಶಾದ್ಯಂತ ಇದುವರೆಗೆ 32.36 ಕೋಟಿ ಲಸಿಕೆ ಡೋಸ್ ವಿತರಣೆ

ಭಾರತದಲ್ಲಿ ಕಳೆದ 24 ತಾಸುಗಳಲ್ಲಿ 46,148 ಹೊಸ ಕೊರೊನಾ ಪ್ರಕರಣಗಳು ಪತ್ತೆ

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 5,72,994ಕ್ಕೆ ಇಳಿಕೆ

Posted On: 28 JUN 2021 11:09AM by PIB Bengaluru

ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಭಾರತ ದೇಶವ್ಯಾಪಿ ಹಮ್ಮಿಕೊಂಡಿರುವ ಬೃಹತ್ ಲಸಿಕಾ ಆಂದೋಲನದಲ್ಲಿ ಇದೀಗ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದೆ. ಲಸಿಕೆ ನೀಡಿಕೆ ಪ್ರಮಾಣದಲ್ಲಿ ಅದೀಗ ಅಮೆರಿಕವನ್ನು ಹಿಂದಿಕ್ಕಿದೆ. ಭಾರತದಲ್ಲಿ ಕೋವಿಡ್-19 ಲಸಿಕೆ ನೀಡಿಕೆಯ ಬೃಹತ್ ಆಂದೋಲನ 2021 ಜನವರಿ 16ರಂದು ಆರಂಭವಾಯಿತು. ಅಮೆರಿಕದಲ್ಲಿ ಆಂದೋಲನವು 2020 ಡಿಸೆಂಬರ್ 14ರಂದು ಶುರುವಾಯಿತು.

https://static.pib.gov.in/WriteReadData/userfiles/image/image0010943.jpg

ಭಾರತದ ಒಟ್ಟು ಲಸಿಕೆ ನೀಡಿಕೆ ಪ್ರಮಾಣ ನಿನ್ನೆ 32.36 ಕೋಟಿ ಡೋಸ್ ದಾಟಿದೆ. ಒಟ್ಟು 32,36,63,297 ಲಸಿಕೆ ಡೋಸ್|ಗಳನ್ನು 43,21,898 ಕಾರ್ಯಕ್ರಮಗಳ(ಆಂದೋಲನ) ಮೂಲಕ ನೀಡಲಾಗಿದೆ. ಇಂದು ಬೆಳಗ್ಗೆ ಲಭ್ಯವಾಗಿರುವ ತಾತ್ಕಾಲಿಕ ವರದಿಯಿಂದ ಇದು ತಿಳಿದುಬಂದಿದೆ. ಕಳೆದ 24 ತಾಸುಗಳಲ್ಲಿ 17,21,268 ಲಸಿಕೆ ಡೋಸ್|ಗಳನ್ನು ಹಾಕಲಾಗಿದೆ.

ಇದರಲ್ಲಿ ಇವು ಒಳಗೊಂಡಿವೆ.

ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು

ಮೊದಲ ಡೋಸ್

1,01,98,257

2ನೇ ಡೋಸ್

72,07,617

ಮುಂಚೂಣಿ ಕಾರ್ಯಕರ್ತರು

ಮೊದಲ ಡೋಸ್

1,74,42,767

2ನೇ ಡೋಸ್

93,99,319

18-44 ವಯೋಮಾನದವರು

ಮೊದಲ ಡೋಸ್

8,46,51,696

2ನೇ ಡೋಸ್

19,01,190

45-59 ವಯೋಮಾನದವರು

ಮೊದಲ ಡೋಸ್

8,71,11,445

2ನೇ ಡೋಸ್

1,48,12,349

60 ವರ್ಷ ದಾಟಿದವರು

ಮೊದಲ ಡೋಸ್

6,75,29,713

2ನೇ ಡೋಸ್

2,34,08,944

ಒಟ್ಟು

32,36,63,297

ಕೋವಿಡ್-19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಿದೆ. ದೇಶಾದ್ಯಂತ ಲಸಿಕೆ ಆಂದೋಲನಕ್ಕೆ ವೇಗ ನೀಡಲು ಮತ್ತು ಆಂದೋಲನದ ವ್ಯಾಪ್ತಿಯನ್ನು ವಿಸ್ತಾರಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ.

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 46,148 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ.

ದೇಶದಲ್ಲಿ ಪತ್ತೆಯಾಗುತ್ತಿರುವ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಸತತ 21 ದಿನಗಳಿಂದಲೂ 1 ಲಕ್ಷದ ಮಟ್ಟದ ಕೆಳಗೆ ಮುಂದುವರೆಯುತ್ತಿದೆ. ಕೇಂದ್ರ ಸರ್ಕಾರ, ರಾಜ್ಯ ಮತ್ತು ಕೇಂದ್ರಡಾಳಿತ ಪ್ರದೇಶಗಳ ಸರ್ಕಾರಗಲು ನಿರಂತರ ಕೈಗೊಳ್ಳುತ್ತಾ ಬಂದಿರುವ ಸುಸ್ಥಿರ ಮತ್ತು ಸಹಭಾಗಿತ್ವಗ ಪ್ರಯತ್ನಗಳ ಫಲವಾಗಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಲಿಮುಖ ಹಾದಿಯಲ್ಲಿ ಮುಂದುವರಿಯುತ್ತಿದೆ.

https://static.pib.gov.in/WriteReadData/userfiles/image/image002SVQK.jpg

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ನಿರಂತರ ಇಳಿಕೆಯ ಪ್ರವೃತ್ತಿಯಲ್ಲಿ ಮುಂದುವರಿದಿದೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 5,72,994ಕ್ಕೆ ಇಳಿಕೆ ಕಂಡಿದೆ.

ಕಳೆದ 24 ತಾಸುಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ 13,409 ರಷ್ಟು ಕಡಿಮೆಯಾಗಿದೆ. ದೇಶಾದ್ಯಂತ ಇರುವ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇಕಡ 1.89ರಷ್ಟು ಸಕ್ರಿಯ ಪ್ರಕರಣಗಳಿವೆ.

https://static.pib.gov.in/WriteReadData/userfiles/image/image003RZR8.jpg

ದೇಶದಲ್ಲಿ ಕೋವಿಡ್-19 ಸೋಂಕಿನಿಂದ ಹೆಚ್ಚಿನ ಜನರು ಗುಣಮುಖರಾಗುತ್ತಿರುವ ಹಿನ್ನೆಲೆಯಲ್ಲಿ, ಸತತ 46ನೇ ದಿನದಲ್ಲಿ ಭಾರತದ ದೈನಂದಿನ ಚೇತರಿಕೆ ಪ್ರಮಾಣವು ದಿನನಿತ್ಯ ಕಾಣಿಸಿಕೊಳ್ಳುತ್ತಿರುವ ಹೊಸ ಕೊರೊನಾ ಪ್ರಕರಣಗಳ ಪ್ರಮಾಣವನ್ನು ಹಿಂದಿಕ್ಕುತ್ತಿದೆ. ಕಳೆದ 24 ತಾಸುಗಳಲ್ಲಿ 58,578 ಸೋಂಕಿತರು ಗುಣಮುಖರಾಗಿದ್ದಾರೆ.

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ ಪತ್ತೆಯಾಗಿರುವ ಹೊಸ ಕೊರೊನಾ ಪ್ರಕರಣಗಳಿಗೆ ಹೋಲಿಸಿದರೆ, 12 ಸಾವಿರಕ್ಕಿಂತ ಹೆಚ್ಚಿನ ಸೋಂಕಿತರು ಅಂದರೆ 12,430 ಜನರು ಚೇತರಿಸಿಕೊಂಡಿದ್ದಾರೆ.

https://static.pib.gov.in/WriteReadData/userfiles/image/image004CB1B.jpg

ದೇಶದಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡ ನಂತರ 2,93,09,607 ಜನರು ಈಗಾಗಲೇ ಗುಣಮುಖರಾಗಿದ್ದಾರೆ. ಕಳೆದ 24 ತಾಸುಗಳಲ್ಲೇ ದೇಶಾದ್ಯಂತ 58,578 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರ ಫಲವಾಗಿ ಚೇತರಿಕೆ ದರ ಇದೀಗ 96.80%ಗೆ ಸುಧಾರಣೆ ಕಂಡಿದ್ದು, ಚೇತರಿಕೆ ಪ್ರವೃತ್ತಿಯಲ್ಲಿ ಸುಸ್ಥಿರ ಸುಧಾರಣೆ ತೋರುತ್ತಿದೆ.

https://static.pib.gov.in/WriteReadData/userfiles/image/image005I38W.jpg

ದೇಶಾದ್ಯಂತ ಗಂಟಲು ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದ್ದು, ಕಳೆದ 24 ತಾಸುಗಳಲ್ಲಿ ಒಟ್ಟು 15,70,515 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆ ದೇಶಾದ್ಯಂತ ಇಲ್ಲಿಯ ತನಕ 40.63 ಕೋಟಿಗಿಂತ ಹೆಚ್ಚಿನ ಅಂದರೆ 40,63,71,279 ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತಿರುವ ಪರಿಣಾಮ, ವಾರದ ಪಾಸಿಟಿವಿಟಿ ದರ (ಸೋಂಕಿತರ ಪ್ರಮಾಣ) ನಿರಂತರ ಕುಸಿಯುತ್ತಿದ್ದು, ಅದೀಗ 2.81%ಗೆ ತಗ್ಗಿದೆ. ದೈನಂದಿನ ಪಾಸಿಟಿವಿಟಿ ದರ ಇಂದು 2.94%ಗೆ ಇಳಿದಿದೆ. ಸತತ 21 ದಿನಗಳಿಂದಲೂ ದೈನಂದಿನ ಪಾಸಿಟಿವಿಟಿ ದರ 5% ಮಟ್ಟದಿಂದ ಕೆಳಗಿದೆ.

https://static.pib.gov.in/WriteReadData/userfiles/image/image006TORS.jpg

***



(Release ID: 1730844) Visitor Counter : 298