ಪ್ರಧಾನ ಮಂತ್ರಿಯವರ ಕಛೇರಿ
ಲಸಿಕೆ ಪ್ರಗತಿ ಕುರಿತು ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಪ್ರಧಾನಮಂತ್ರಿ
ಈ ವಾರದಲ್ಲಿ ಲಸಿಕೆ ಅಭಿಯಾನದ ವೇಗದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿ: ಈ ವೇಗವನ್ನು ಮುಂದಕ್ಕೆ ಕೊಂಡೊಯ್ಯುವುದು ಮುಖ್ಯ
ಯಾವುದೇ ಪ್ರದೇಶದಲ್ಲಿ ಹೆಚ್ಚುತ್ತಿರುವ ಸೋಂಕಿನ ಜಾಡು ಪತ್ತೆ ಮಾಡಲು ಮತ್ತು ಸೋಂಕು ನಿಯಂತ್ರಿಸಲು ಪರೀಕ್ಷೆಯ ವೇಗ ಖಚಿತಪಡಿಸಿಕೊಳ್ಳುವುದು ಅಗತ್ಯ: ಪ್ರಧಾನಮಂತ್ರಿ
ಕೋವಿಡ್ ವೇದಿಕೆಯಲ್ಲಿ ಭಾರತದ ತಾಂತ್ರಿಕ ಪರಿಣತಿಯ ಶ್ರೀಮಂತ ತಂತ್ರಜ್ಞಾನದಿಂದ ಆಸಕ್ತ ರಾಷ್ಟ್ರಗಳಿಗೆ ನೆರವು ನೀಡಲು ಪ್ರಯತ್ನಿಸಬೇಕು.
ಕಳೆದ ಆರು ದಿನಗಳಲ್ಲಿ 3.77 ಕೋಟಿ ಡೋಸ್ ಗಳನ್ನು ಹಾಕಿದ್ದು, ಇದು ಮಲೇಷ್ಯಾ, ಸೌದಿ ಅರೆಬಿಯಾ ಮತ್ತು ಕೆನಡಾ ದೇಶಗಳ ಜನಸಂಖ್ಯೆಗಿಂತ ಅಧಿಕ
Posted On:
26 JUN 2021 7:32PM by PIB Bengaluru
ದೇಶದಲ್ಲಿ ಕೋವಿಡ್ ಪರಿಸ್ಥಿತಿ ಮತ್ತು ಲಸಿಕೆ ಕುರಿತು ಪ್ರಧಾನಮಂತ್ರಿ ಅವರು ಪ್ರಗತಿ ಪರಿಶೀಲನೆ ನಡೆಸಿದರು.
ದೇಶದಲ್ಲಿ ಕೋವಿಡ್ ಲಸಿಕೆ ಕುರಿತು ಅಧಿಕಾರಿಗಳು ಇದೇ ಸಂದರ್ಭದಲ್ಲಿ ವಿಸ್ತೃತ ಪ್ರಾತ್ಯಕ್ಷಿಕೆ ನೀಡಿದರು. ಪ್ರಧಾನಮಂತ್ರಿ ಅವರಿಗೆ ವಯೋಮಿತಿಗೆ ಅನುಗುಣವಾಗಿ ಹಾಕಿರುವ ಲಸಿಕೆ ಕುರಿತು ಮಾಹಿತಿ ನೀಡಲಾಯಿತು. ಆರೋಗ್ಯ ಕಾರ್ಯಕರ್ತರು, ಮಂಚೂಣಿ ಕಾರ್ಯಕರ್ತರು ಮತ್ತು ವಿವಿಧ ರಾಜ್ಯಗಳಲ್ಲಿ ಸಾಮಾನ್ಯ ಜನರಿಗೆ ಹಾಕಿರುವ ಲಸಿಕೆ ಕುರಿತು ವಿವರ ನೀಡಿದರು.
ಮುಂಬರುವ ತಿಂಗಳುಗಳಲ್ಲಿ ಲಸಿಕೆ ಪೂರೈಕೆ ಮತ್ತು ಉತ್ಪಾದನೆ ಹೆಚ್ಚಾಗುತ್ತಿರುವ ಕುರಿತು ಅಧಿಕಾರಿಗಳು ಪ್ರಧಾನಮಂತ್ರಿ ಅವರಿಗೆ ವಿವರ ನೀಡಿದರು. ಕಳೆದ ಆರು ದಿನಗಳಲ್ಲಿ 3.77 ಕೋಟಿ ಡೋಸ್ ಗಳನ್ನು ಹಾಕಿದ್ದು, ಇದು ಮಲೇಷ್ಯಾ, ಸೌದಿ ಅರೆಬಿಯಾ ಮತ್ತು ಕೆನಡಾ ದೇಶದ ಜನಸಂಖ್ಯೆಗಿಂತ ಅಧಿಕವಾಗಿದೆ.
ದೇಶದ 128 ಜಿಲ್ಲೆಗಳಲ್ಲಿ 45 ವಯೋಮಿತಿ ಮೀರಿದವರಿಗೆ ಶೇ 50 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಹಾಕಲಾಗಿದೆ ಮತ್ತು 16 ಜಿಲ್ಲೆಗಳಲ್ಲಿ 45 ವರ್ಷಕ್ಕಿಂತ ಅಧಿಕ ವಯಸ್ಸಿನವರಿಗೆ ಶೇ 90 ಕ್ಕಿಂತ ಹೆಚ್ಚು ಲಸಿಕೆ ಹಾಕಲಾಗಿದೆ. ಈ ವಾರದಲ್ಲಿ ನಡೆದ ಲಸಿಕೆಯ ವೇಗದ ಬಗ್ಗೆ ಪ್ರಧಾನಮಂತ್ರಿ ಅವರು ತೃಪ್ತಿ ವ್ಯಕ್ತಪಡಿಸಿದ್ದಾರೆ ಮತ್ತು ಇದೇ ವೇಗವನ್ನು ಮುಂದುವರಿಸುವುದು ಅತ್ಯಂತ ಪ್ರಮುಖವಾಗಿದೆ ಎಂದು ಒತ್ತಿ ಹೇಳಿದರು.
ಲಸಿಕೆ ಜನರನ್ನು ತಲುಪುವ ವಿನೂತನ ವಿಧಾನಗಳನ್ನು ಅನುಷ್ಠಾನಗೊಳಿಸುವ ಮತ್ತು ರಾಜ್ಯಗಳನ್ನು ತಲುಪುವ ಕುರಿತು ಅಧಿಕಾರಿಗಳು ಪ್ರಧಾನಮಂತ್ರಿ ಅವರಿಗೆ ವಿವರ ನೀಡಿದರು. ಎನ್.ಜಿ.ಒ ಗಳು ಮತ್ತು ಇತರೆ ಸಂಘಟನೆಗಳು ಇಂತಹ ಪ್ರಯತ್ನಗಳಲ್ಲಿ ಭಾಗಿಯಾಗುವ ಕುರಿತು ಪ್ರಧಾನಮಂತ್ರಿ ಅವರು ಮಾತನಾಡಿದರು. ಯಾವುದೇ ಪ್ರದೇಶದಲ್ಲಿ ಹೆಚ್ಚುತ್ತಿರುವ ಸೋಂಕಿನ ಜಾಡು ಪತ್ತೆ ಮಾಡಲು ಮತ್ತು ಸೋಂಕು ನಿಯಂತ್ರಿಸಲು ಪರೀಕ್ಷೆಯ ವೇಗ ಖಚಿತಪಡಿಸಿಕೊಳ್ಳುವುದು ಅಗತ್ಯ ಎಂದು ಪ್ರಧಾನಮಂತ್ರಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೊವಿನ್ ವೇದಿಕೆ ಬಗ್ಗೆ ಜಾಗತಿಕವಾಗಿ ಹೆಚ್ಚುತ್ತಿರುವ ಆಸಕ್ತಿ ಕುರಿತು ಪ್ರಧಾನಮಂತ್ರಿ ಅವರ ಬಳಿ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಯತ್ನಗಳಿಂದ ಆಸಕ್ತಿ ತೋರುವ ಎಲ್ಲಾ ರಾಷ್ಟ್ರಗಳಿಗೆ ಕೋವಿನ್ ನ ಶ್ರೀಮಂತ ತಾಂತ್ರಿಕ ಪರಿಣತಿಯಿಂದ ನೆರವಾಗವಾಗಬೇಕು ಎಂದು ಪ್ರಧಾನಮಂತ್ರಿ ಅವರು ಹೇಳಿದರು.
***
(Release ID: 1730606)
Visitor Counter : 282
Read this release in:
Malayalam
,
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu