ಪ್ರಧಾನ ಮಂತ್ರಿಯವರ ಕಛೇರಿ
ಮಾದಕವಸ್ತು ಮತ್ತು ಅಕ್ರಮ ಕಳ್ಳಸಾಗಣೆ ನಿಯಂತ್ರಣದ ಅಂತಾರಾಷ್ಟ್ರೀಯ ದಿನ; ಪ್ರಧಾನ ಮಂತ್ರಿ ಸಂದೇಶ
Posted On:
26 JUN 2021 11:24AM by PIB Bengaluru
ವಿಶ್ವಾದ್ಯಂತ ಇಂದು ಮಾದಕವಸ್ತು ಮತ್ತು ಅಕ್ರಮ ಕಳ್ಳ ಸಾಗಣೆ ನಿಯಂತ್ರಣದ ಅಂತಾರಾಷ್ಟ್ರೀಯ ದಿನ ಆಚರಿಸಲಾಗುತ್ತಿದೆ. ನಮ್ಮ ಸಮಾಜದಲ್ಲಿರುವ ಮಾದಕ ವಸ್ತುಗಳ ಅಕ್ರಮ ಮಾರಾಟ ಮತ್ತು ಸೇವನೆಯ ಹಾವಳಿ ನಿರ್ಮೂಲನೆ ಮಾಡಲು ಹಗಲಿರುಳು ಕೆಲಸ ಮಾಡುತ್ತಿರುವ ಎಲ್ಲರನ್ನು ನಾನಿಂದು ಶ್ಲಾಘಿಸುತ್ತೇನೆ. ಮುಗ್ಧ ಜೀವಗಳನ್ನು ಉಳಿಸಲು ಇಂತಹ ಪ್ರತಿ ಪ್ರಯತ್ನವೂ ಅಗತ್ಯ. ಮಾದಕವಸ್ತುಗಳು ಮನುಷ್ಯನ ಬದುಕಿನಲ್ಲಿ ಕಗ್ಗತ್ತಲೆ, ವಿನಾಶ ಮತ್ತು ಸರ್ವನಾಶವನ್ನೇ ತಂದಿಡುತ್ತವೆ.
#ShareFactsOnDrugs ಮಾದಕವಸ್ತು ಸೇವನೆಯ ವಾಸ್ತವಗಳನ್ನು ಹಂಚಿಕೊಳ್ಳುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ಡ್ರಗ್ಸ್ ಮುಕ್ತ ಭಾರತ ನಿರ್ಮಾಣ ಮಾಡುವ ನಮ್ಮ ದೃಷ್ಟಿಕೋನವನ್ನು ಎಲ್ಲರೂ ಮನಗಾಣಬೇಕಿದೆ. ನೆನಪಿಡಿ – ಮಾದಕವಸ್ತುಗಳ ಚಟ ಒಳ್ಳೆಯದಲ್ಲ ಅಥವಾ ಪ್ರಚಾರ ಮಾಡುವ ವಿಷಯವೂ ಅಲ್ಲ. ಮಾದಕವಸ್ತುಗಳ ಭೀತಿಯನ್ನು ನಿವಾರಿಸುವ ಹಲವು ಅಂಶಗಳನ್ನು ಒಳಗೊಂಡಿರುವ ಹಳೆಯ # ಮನ್|ಕಿಬಾತ್ ಆವೃತ್ತಿಯನ್ನು ಹಂಚಿಕೊಳ್ಳಲಾಗುತ್ತಿದೆ.
***
(Release ID: 1730505)
Visitor Counter : 290
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam